Maruti Suzuki S-Presso 2026 Price And Mileage: 2026 ರ ವರ್ಷದಲ್ಲಿ ಹೊಸ ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಈ ಮಾಹಿತಿ ಬಹಳ ಉಪಯುಕ್ತವಾಗಲಿದೆ. ಇದೀಗ ನಾವು ನಿಮಗೆ ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣೆ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು SUV-ತರಹದ ಹೆಚ್ಚಿನ ಆಸನಗಳಿಗೆ ಹೆಸರುವಾಸಿಯಾಗಿರುವ ಒಂದು ಕಾರ್ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ. ಕುಟುಂಬ ಪ್ರಯಾಣಕ್ಕಾಗಿ ಮೊದಲು ಕಾರ್ ಖರೀದಿ ಮಾಡುವವರಿಗೆ ಈ ಕಾರ್ ಉತ್ತಮ ಆಯ್ಕೆ ಆಗಿದೆ. ಹಾಗಾದರೆ ನಾವೀಗ ಆ ಕಾರ್ ಯಾವುದು ಮತ್ತು ಬೆಲೆ ಹಾಗು ಮೈಲೇಜ್ ಎಷ್ಟು ಅನ್ನುವ ಎಲ್ಲ ವಿವರವನ್ನು ಸಂಪೂರ್ಣವಾಗಿ ಇಲ್ಲಿದೆ.
Maruti Suzuki S-Presso
ಮಧ್ಯಮ ವರ್ಗದವರ ಕನಸು ನನಸು ಮಾಡಲು Maruti Suzuki S-Presso ಉತ್ತಮ ಆಯ್ಕೆ ಆಗಿದೆ. ಕಡಿಮೆ ಬೆಳೆಗೆ ಉತ್ತಮ ಮೈಲೇಜ್ ನೀಡುತ್ತದೆ. ಹಾಗೆ ಈ ಮಿನಿ SUV ನಗರ ಚಾಲನೆಗೆ ಉತ್ತಮವಾಗಿದೆ. ಮೊದಲು ಕಾರ್ ಖರೀದಿ ಮಾಡುತ್ತಿರುವವರಿಗೆ ಉತ್ತಮ ಆಯ್ಕೆ ಅಂದರೆ ತಪ್ಪಾಗಲ್ಲ. 3 ವೆರಿಯಂಟ್ ಗಳಲ್ಲಿ ಈ ಕಾರ್ ಗ್ರಾಹಕರ ಕೈ ಸೇರುತ್ತದೆ.
- ಬೇಸ್ ಮಾಡೆಲ್ STD (O) MT
- ಟಾಪ್ VXi+ (O) AMT
- CNG ವೇರಿಯಂಟ್
Maruti Suzuki S-ಪ್ರೆಸ್ಸೋ ಬೆಲೆ
2025 ರಲ್ಲಿ Maruti Suzuki S-Presso ಎಕ್ಸ್ ಶೋರೂಮ್ ಬೆಲೆ 4.27 ಲಕ್ಷದಿಂದ 6.12 ಲಕ್ಷದವರೆಗೆ ಇದೆ. ಆದರೆ ಕರ್ನಾಟಕದ ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ 5.17 ಲಕ್ಷದಿಂದ 7.42 ಲಕ್ಷದವರೆಗೆ (RTO ಮತ್ತು ಇನ್ಶೂರೆನ್ಸ್ ಸೇರಿ) ಬದಲಾವಣೆ ಆಗುತ್ತದೆ.
- Maruti Suzuki S-Presso ಬೇಸ್ ಮಾಡೆಲ್ STD (O) MT ಬೆಲೆ – 4.27 ಲಕ್ಷ ಆಗಿದೆ
- ಟಾಪ್ VXi+ (O) AMT ಬೆಲೆ – 6 ಲಕ್ಷ ಆಗಿದೆ
- CNG ವೇರಿಯಂಟ್ ಬೆಲೆ 5.90 ಲಕ್ಷದಿಂದ ಆರಂಭವಾಗುತ್ತದೆ.
Maruti Suzuki S-Presso ಮೈಲೇಜ್
Maruti Suzuki S-Presso ದಲ್ಲಿ 1.0 ಲೀಟರ್ K10C ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು 67 PS ಶಕ್ತಿ ಮತ್ತು 89 Nm ಟಾರ್ಕ್ ಉತ್ಪದಿಸುತ್ತದೆ. CNG ಮೋಡ್ ನಲ್ಲಿ 56 PS ಮತ್ತು 82 Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಅಥವಾ AMT ಟ್ರಾನ್ಸ್ ಮಿಷನ್ ನೀಡಲಾಗಿದೆ. ಇನ್ನು Maruti Suzuki S-Presso ಪೆಟ್ರೋಲ್ ಮಾದರಿಯಲ್ಲಿ 24.76 ರಿಂದ 25.30 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು CNG ವೆರಿಯಂಟ್ ನಲ್ಲಿ ಪ್ರತಿ KG ಗೆ 32.73 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
Maruti Suzuki S-Presso ವೈಶಿಷ್ಟ್ಯಗಳು
Maruti Suzuki S-Presso ದಲ್ಲಿ 270 litres of boot space, 7-inch touchscreen (on top variants), Android Auto/Apple CarPlay and steering controls ಗಳನ್ನ ಅಳವಡಿಸಲಾಗಿದೆ. ಸುರಕ್ಷತೆಗಾಗಿ ABS, EBD, ಡ್ಯುಯಲ್ ಏರ್ ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನ ಅಳವಡಿಸಲಾಗಿದೆ. ಇನ್ನು ಗ್ಲೋಬಲ್ NCAP ರಲ್ಲಿ 1-ಸ್ಟಾರ್ ರೇಟಿಂಗ್ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

