Maruti EV: ಕೊನೆಗೂ ಬಂತು 500 Km ಮೈಲೇಜ್ ಕೊಡುವ ಮಾರುತಿ SUV, ಕಿಯಾ ಕಾರಿಗೆ ಪೈಪೋಟಿ ಕೊಡಲಿದೆ ಈ ಕಾರ್.
500 ಕಿಲೋ ಮೀಟರ್ ರೇಂಜ್ ಇರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದ ಮಾರುತಿ ಸುಜುಕಿ.
Maruti Suzki Brezza Ev: ಮಾರುಕಟ್ಟೆಯಲ್ಲಿ ಮಾರುತಿ (Maruti) ಕಂಪನಿಯ ಕಾರುಗಳು ಹೆಚ್ಚು ಬೇಡಿಕೆಯಲ್ಲಿವೆ. ಮಾರುತಿ ಸುಜುಕಿ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ದೇಶದಲ್ಲಿ ಮಾರುತಿ ಕಂಪನಿ ತನ್ನ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಬ್ರೆಝಾ ಹೊಸ ಕಾರು
ಮಾರುತಿ ಕಂಪನಿಯ ಸುಜುಕಿ ಬ್ರೆಝಾ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುವ 4 m ಎಸ್ ಯು ವಿ ಗಳಲ್ಲಿ ಒಂದಾಗಿದೆ. ಇಂಡೋ ಜಪಾನೀಸ್ ವಾಹನ ತಯಾರಕರು ದೇಶದಲ್ಲಿ 10,000 ಕ್ಕೂ ಹೆಚ್ಚು ಮಾರುತಿ ಬ್ರೆಝಾ ಎಸ್ ಯು ವಿಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದಾರೆ.
ಮಾರಾಟದಲ್ಲಿ ಸ್ಥಿರತೆಯನ್ನು ಹಾಗೆ ಇಟ್ಟುಕೊಳ್ಳಲು ಮಾರುತಿ ಸುಜುಕಿ ಕಂಪನಿಯು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಈಗ ಭಾರತದಲ್ಲಿ ಹಬ್ಬದ ಸೀಸನ್. ಮುಂಚಿತವಾಗಿ ಇಂಡಿಯೊ- ಜಪಾನೀಸ್ ವಾಹನ ತಯಾರಕರು ಮತ್ತೊಮ್ಮೆ ಬ್ರೆಝಾ ಎಸ್ ಯು ವಿ ನವೀಕರಿಸಿ ಬಿಡುಗಡೆಗೊಳಿಸಿದೆ. ಮಾರುತಿ ಸುಜುಕಿ ಬ್ರೆಝಾ ಎಸ್ ಯು ವಿಯನ್ನು ಹೊಸ ಕೆಲವು ಹೊಸ ಫೀಚರ್ಸ್ ಗಳ ಸೇರ್ಪಡೆಯನ್ನು ಮಾತ್ರ ಒಳಗೊಂಡಿರುತ್ತದೆ.
ಮಾರುತಿ ಸುಜುಕಿ ಬ್ರೆಝಾ ಎಸ್ ಯು ವಿ
ನವೀಕರಿಸಿದ ಮಾರುತಿ ಸುಜುಕಿ ಬ್ರೆಝಾ ಎಸ್ ಯು ವಿಯಲ್ಲಿ 1 .5 ಲೀಟರ್, 4 ಸಲಿಂಡರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 99 .2 bhp ಮತ್ತು 136 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದೆಡೆ cng ರೂಪಾಂತರವು 86 .63 bhp ಮತ್ತು 121 .5 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ brezza ಎಲೆಕ್ಟ್ರಿಕ್ ಕಾರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 500 ಕಿಲೋ ಮೀಟರ್ ಚಲಿಸುತ್ತದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಬೆಲೆ ಮತ್ತು ಬ್ಯಾಟರಿ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಗೇರ್ ಬಾಕ್ಸ್ ಆಯ್ಕೆಗಳ ವಿಷಯದಲ್ಲಿ ಮಾರುತಿ ಸುಜುಕಿ ಬ್ರೆಝಾ ಎಸ್ ಯು ವಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -speed ಆಟೋಮ್ಯಾಟಿಕ್ ಮಾರುತಿ ಸ್ಜ್ಕಿ ಬ್ರೆಝಾ ಆಯ್ಕೆಗಳನ್ನು ನೀಡಲಾಗುತ್ತಿದೆ. ಆದರೆ ಮಾರುತಿ ಸುಜುಕಿ ಬ್ರೆಝಾ ಎಸ್ ಯು ವಿಯ ಸಿ ಏನ್ ಜಿ ರೂಪಾಂತರಗಳು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.