9 Seater Car: 5 ಲಕ್ಷಕ್ಕೆ 26 Km ಮೈಲೇಜ್ ಕೊಡುವ 9 ಸೀಟರ್ ಕಾರ್ ಲಾಂಚ್ ಮಾಡಿದ ಮಾರುತಿ, ಭರ್ಜರಿ ಡಿಮ್ಯಾಂಡ್.
ಕಡಿಮೆ ಬೆಲೆಗೆ 9 ಆಸನಗಳ ಕಾರ್ ಅನ್ನು ಈಗ ಮಾರುತಿ ಸುಜುಕಿ ಲಾಂಚ್ ಮಾಡಿದೆ.
Maruti Suzuki 9 Seater: ಈಗಿನ ಕಾಲದಲ್ಲಿ ಜನರು ಮೈಲೇಜ್ ಕೊಡುವ ಕಾರನ್ನ ಹೆಚ್ಚು ಹುಡುಕುತ್ತಾರೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಕಾರಣ ಜನರು ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನ ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ.
ಸದ್ಯ ಹಲವು ವಾಹನ ತಯಾರಕ ಕಂಪನಿಗಳು ಹಲವು ಬಗೆಯ ಮೈಲೇಜ್ ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದು ಸದ್ಯ ಜನರು ಯಾವ ಕಾರ್ ಅಥವಾ ಬೈಕ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಮಾರುತಿ (Maruti Suzuki) ಕಂಪನಿಯ ಕಾರುಗಳು ಸಾಕಷ್ಟು ವರ್ಷಗಳಿಂದ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬರುತ್ತಿದ್ದು ಈಗ ಇನ್ನೊಂದು ಮೈಲೇಜ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡುವುದರ ಮೂಲಕ ಮಾರುಕಟ್ಟೆಯಲ್ಲಿ ಇನ್ನೊಂದು ಸಂಚಲ ಎಬ್ಬಿಸಲು ಮುಂದಾಗಿದೆ.
ಮೈಲೇಜ್ ಕಾರ್ ಮಾರುಕಟ್ಟೆಗೆ ಲಾಂಚ್ ಮಾಡಿದ ಮಾರುತಿ
ಮಾರುತಿ ಕಾರುಗಳು ಮೈಲೇಜ್ ಕಾರುಗಳಿಗೆ ಹೆಸರುವಾಸಿ ಎಂದು ಹೇಳಬಹುದು. ಪೆಟ್ರೋಲ್ ಡೀಸೆಲ್ ಮಾದರಿಯಲ್ಲಿ ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನ ಬಿಡುಗಡೆ ಮಾಡುತ್ತಿದ್ದ ಮಾರುತಿ ಸುಜುಕಿ ಈಗ CNG ವಿಭಾಗದ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಸದ್ಯ ಈ ಕಾರುಗಳು ಜನರ ಮೆಚ್ಚುಗೆಗೆ ಕೂಡ ಕಾರಣವಾಗಿದೆ.
26 ಕಿಲೋಮೀಟರ್ ಮೈಲೇಜ್ ಕೊಡುವ ಕಾರಿಗ ಜನರು ಫಿದಾ
ಸದ್ಯ ಮಾರುತಿ ಸುಜುಕಿ 26 ಕಿಲೋಮೀಟರ್ ಮೈಲೇಜ್ ಕೊಡುವ ಮಾರುತಿ ಸುಜುಕಿ ಇಕೋ ಕಾರನ್ನ ಪರಿಚಯಿಸಿದ್ದು ಈ ಕಾರಿಗೆ ಜನರು ಫಿದಾ ಆಗಿದ್ದಾರೆ ಎಂದು ಹೇಳಬಹುದು. ಹೌದು ಇಕೋ ಕಾರುಗಳು 9 ಆಸನಗಳನ್ನ ಹೊಂದಿರುವ ಕಾರ್ ಆಗಿದ್ದು ಬಾಡಿಗೆ ವ್ಯವಹಾರ ಮಾಡಲು ಈ ಕಾರ್ ಬಹಳ ಉತ್ತಮವಾದ ಕಾರ್ ಆಗಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ ಈ ಕಾರಿನಲ್ಲಿ ಕೆಲವು ಬದಲಾವಣೆಯನ್ನ ಮಾಡಲಾಗಿದೆ. ಹಿಂದೆ ಪೆಟ್ರೋಲ್ ಮಾದರಿಯ ಕಾರುಗಳನ್ನ ಲಾಂಚ್ ಮಾಡಿದ ಕಂಪನಿ ಈಗ CNG ಮಾದರಿಯ ಕಾರುಗಳನ್ನ ಲಾಂಚ್ ಮಾಡಿದೆ.
ಮಾರುತಿ Eeco ಕಾರಿನ ಬೆಲೆ ಮತ್ತು ಮೈಲೇಜ್
ಮಾರುತಿ ಸುಜುಕಿ ಇಕೋ ಕಾರಿನ ಬೆಲೆ ಸುಮಾರು 5.2 ಲಕ್ಷ ರೂಪಾಯಿಯಿಂದ ಆರಂಭ ಆಗುತ್ತದೆ. ಜನರು ಕಡಿಮೆ ಡೌನ್ ಪೇಮೆಂಟ್ ಮಾಡಿಕೊಂಡು EMI ಮೂಲಕ ಈ ಕಾರ್ ಖರೀದಿ ಮಾಡಬಹುದು. ಹೊಸ ಮಾದರಿಯ ಕಾರಿನಲ್ಲಿ LED ಲ್ಯಾಂಪ್ ಕೂಡ ಅಲ್ದವಿಸಲಾಗಿರುತ್ತದೆ.
ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಇಕೋ CNG ಕಾರುಗಳು ಸುಮಾರು 25 ರಿಂದ 28 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ. 9 ಆಸನಗಳ ಕಾರ್ ಇದಾಗಿದ್ದು ದೊಡ್ಡ ಕುಟುಂಬಕ್ಕೆ ಹೇಳಿಮಾಡಿಸಿದ ಕಾರ್ ಎಂದು ಕಂಪನಿ ತಿಳಿಸಿದೆ.