Maruti CNG: 60 Km ಚಲಿಸಲು ಕೇವಲ 150 ರೂ ಮಾತ್ರ, ಮಾರುಕಟ್ಟೆಯಲ್ಲಿ ಈ ಮಾರುತಿ ಕಾರಿಗೆ ಭರ್ಜರಿ ಬೇಡಿಕೆ.
ಕಡಿಮೆ ವೆಚ್ಚದಲ್ಲಿ ಬಹುದೂರ ಚಲಿಸುವ ಈ ಕಾರಿಗೆ ಹೆಚ್ಚಾಗಿದೆ ಬೇಡಿಕೆ.
Maruti Suzuki Alto K10 CNG: ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ (Maruti Suzuki) ಕಂಪನಿ ಪೆಟ್ರೋಲ್, CNG ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗಾಗಿ ಪರಿಚಯಿಸಿದೆ. ಇದೀಗ ಗ್ರಾಹಕರಿಗಾಗಿ ಮಾರುತಿ ಬರ್ಜರಿ ಆಫರ್ ನೀಡಿದೆ. ಮಾರುತಿ ಈ ಕಾರ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ನೀವು ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಕಾರ್ ಅನ್ನು ಪಡೆಯಲು ಬಯಸಿದರೆ ಮಾರುತಿ ಕಂಪನಿ ನಿಮಗೆ ಈ ಅವಕಾಶವನ್ನು ನೀಡುತ್ತಿದೆ.
ಮಾರುತಿ ಸುಜುಕಿ ಆಲ್ಟೋ K10
ಮಾರುತಿ ಸುಜುಕಿ ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ, ವಿಭಿನ್ನ ಫೀಚರ್ ಹೊಂದಿದ ಮಾರುತಿ ಸುಜುಕಿ ಆಲ್ಟೋ K10 (Alto K10) ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಮಾರುತಿ ಸುಜುಕಿ ಆಲ್ಟೊ ಕಾರಿನ ಬೆಲೆ ಸ್ವಲ್ಪ ಅಧಿಕವಾಗಿದೆ. ಆದರೆ ಇದೀಗ ಕಂಪನಿಯು ಈ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ. ನೀವು ಮಾರುತಿ ಸುಜುಕಿ ಆಲ್ಟೋ K10 ಮಾದರಿಯ ಕಾರ್ ಅನ್ನು ಖರೀದಿಸಲು ಬಯಸಿದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ಮಾರುತಿ ಸುಜುಕಿ ಆಲ್ಟೋ K10 CNG (Maruti Suzuki Alto K10 CNG)
ಮಾರುತಿ ಸುಜುಕಿ ಆಲ್ಟೋ K10 ಕಡಿಮೆ ನಿರ್ವಹಣೆಯ ಕಾರ್ ಆಗಿದೆ. ನೀವು ಈ ಕಾರಿನ ನಿರ್ವಹಣೆಗೆ ವಾರ್ಷಿಕವಾಗಿ 6 ರಿಂದ 8 ಸಾವಿರ ರೂ. ಖರ್ಚುಮಾಡಿದರು ತಿಂಗಳಿಗೆ ಕೇವಲ 500 ರಿಂದ 600 ರೂ. ಖರ್ಚಾಗುತ್ತದೆ. ಇತರ ಕಾರ್ ಗಳಿಂತ ಈ ಕಾರ್ ನ ನಿರ್ವಹಣೆಯ ವೆಚ್ಚ ಬಹಳ ಕಡಿಮೆ.
ಕಂಪನಿಯು ಆಲ್ಟೋ K10 ಅನ್ನು ಸಿಎನ್ ಜಿ ರೂಪಾಂತರದಲ್ಲಿ ಸಹ ನೀಡುತ್ತದೆ. ಕಂಪನಿಯು 1.0-ಲೀಟರ್ ಕೆ-ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ನೀಡಿದ್ದು, ಈ ಎಂಜಿನ್ 65 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಇದರಲ್ಲಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಅದರ CNG ರೂಪಾಂತರವು ಸುಮಾರು 55 Bhp ಶಕ್ತಿಯನ್ನು ಉತ್ಪಾದಿಸುತ್ತದೆ.
ಬರೋಬ್ಬರಿ 60 km ಮೈಲೇಜ್ ನೀಡಲಿದೆ ಈ ಕಾರ್
ಆಲ್ಟೊ ಪೆಟ್ರೋಲ್ ಮೇಲೆ ಲೀಟರ್‌ಗೆ 26 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಸಿಎನ್‌ಜಿ ಆಲ್ಟೊ ಮೈಲೇಜ್ ಪ್ರತಿ ಕೆಜಿಗೆ 36 ಕಿಮೀ ನೀಡಲಿದೆ. ಕೇವಲ 2 ಕೆಜಿ ಸಿಎನ್ ಜಿ ಗಳಲ್ಲಿಈ ನೀವು ಬರೋಬ್ಬರಿ 60 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದು. ಇನ್ನು ದೆಹಲಿಯಲ್ಲಿ ಸಿಎನ್ ಜಿ ಬೆಲೆ ಸುಮಾರು 74 ರೂ. ಆಗಿದ್ದು ನಿಮ್ಮ ದಿನದ ಖರ್ಚು ಕೇವಲ 150 ರೂ. ಹಾಗೆಯೆ ತಿಂಗಳಿಗೆ 4500 ಖರ್ಚಾಗಲಿದೆ. ಮಾರುಕಟ್ಟೆಯಲ್ಲಿ ಈ ಕಾರ್ ಭರ್ಜರಿ ಸೆಲ್ ಕಾಣುತ್ತಿದ್ದು ನೀವು ಕೂಡ ಈ ಕಾರ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.