Maruti EV: 300 ಕಿಲೋ ಮೀಟರ್ ರೇಂಜ್ ಮತ್ತು ಬೆಲೆ ಕೇವಲ 6 ಲಕ್ಷ ಮಾತ್ರ, ಮಾರುತಿ ಎಲೆಕ್ಟ್ರಿಕ್ ಕಾರಿಗೆ ಜನರು ಫಿದಾ.
300 ಕಿಲೋ ಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರ್ ಖರೀದಿಸಲು ಮುಂದಾದ ಜನರು.
Maruti Suzuki Alto EV: ಮಾರುತಿ ಸುಜುಕಿ (Maruti Suzuki) ದೇಶದಲ್ಲಿ ಅತೀ ಹೆಚ್ಚು ಕಾರುಗಳನ್ನ ಮಾರಾಟ ಮಾಡಿರುವ ಕಂಪನಿ ಅನಿಸಿಕೊಂಡಿದೆ. ಹೌದು ಸಾಕಷ್ಟು ವರ್ಷಗಳಿಂದ ಗ್ರಾಹಕರ ನಂಬಿಕೆಯನ್ನ ಉಳಿಸಿಕೊಂಡು ಬಂದಿರುವ ಮಾರುತಿ ಸುಜುಕಿ ಈಗ ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ಹೆಚ್ಚು ರೇಂಜ್ ಕೊಡುವ ಸಾಕಷ್ಟು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನರು ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಕಾರುಗಳ ಮೊರೆ ಹೋಗುತ್ತಿರುವುದನ್ನ ಗಮನಿಸಿದ ಮಾರುತಿ ಸುಜುಕಿ ಈಗ ಹೆಚ್ಚು ರೇಂಜ್ ಕೊಡುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ತೀರ್ಮಾನವನ್ನ ಮಾಡಿದೆ.
ಮಾರುತಿ ಸುಜುಕಿ ಆಲ್ಟೊ ಎಲೆಕ್ಟ್ರಿಕ್ ಕಾರ್
ಹೌದು ದೇಶದಲ್ಲಿ ಮಾರುತಿ ಸುಜುಕಿ ತನ್ನ ಆಲ್ಟೊ ಕಾರನ್ನ 45 ಲಕ್ಷಕ್ಕೂ ಅಧಿಕ ಯೂನಿಟ್ ಮಾರಾಟ ಮಾಡಿದೆ. ಕಡಿಮೆ ಬೆಲೆಗೆ ಸಿಗುವ ಮಾರುತಿ ಸುಜುಕಿ ಆಲ್ಟೊ ಕಾರ್ ಬದರವರ ಬಂಧುವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಮಾರುತಿ ಸುಜುಕಿ ಆಲ್ಟೊ ಕಾರನ್ನ ಈಗ ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆ ಮಾಡಲು ಮಾರುತಿ ಸುಜುಕಿ ಮುಂದಾಗಿದ್ದು ಜನರು ಮುಂದಿನ ದಿನಗಳಲ್ಲಿ ಹೆಚ್ಚು ಮೈಲೇಜ್ ಕೊಡುವ ಮಾರುತಿ ಸುಜುಕಿ ಆಲ್ಟೊ ಎಲೆಕ್ಟ್ರಿಕ್ ಕಾರನ್ನ ಖರೀದಿ ಮಾಡಬಹುದು.
ಮಾರುತಿ ಸುಜುಕಿ ಆಲ್ಟೊ ಎಲೆಕ್ಟ್ರಿಕ್ ಕಾರ್ ಮೈಲೇಜ್
ಮಾರುತಿ ಸುಜುಕಿ ತನ್ನ ಆಲ್ಟೊ ಎಲೆಕ್ಟ್ರಿಕ್ ಕಾರಿಗೆ ಲಿಥಿಯಂ ಐಯಾನ್ ಬ್ಯಾಟರಿ ಗಳನ್ನ ಅಳವಡಿಸಲು ಮುಂದಾಗಿದ್ದು ಆಲ್ಟೊ ಎಲೆಕ್ಟ್ರಿಕ್ ಕಾರ್ ಸುಮಾರು 300 ಕಿಲೋ ಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಒಂದು ಘಂಟೆಯಲ್ಲಿ ಸುಂಮರು 80 ಶೇಕಡಾ ಚಾರ್ಜ್ ಆಗುವ ಈ ಕಾರನ್ನ ಸಂಪೂರ್ಣವಾಗಿ ಚಾರ್ಜ್ ಮಾಡಲು 3 ಘಂಟೆ ಸಮಯ ಹಿಡಿಯಬಹುದು ಎಂದು ಅಂದಾಜು ಕೂಡ ಮಾಡಲಾಗಿದೆ.
ಮಾರುತಿ ಸುಜುಕಿ ಆಲ್ಟೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಸಾಕಷ್ಟು ಫೀಚರ್ ಗಳನ್ನ ಹೊಂದಿರುವ ಆಲ್ಟೊ ಎಲೆಕ್ಟ್ರಿಕ್ ಕಾರನ್ನ ಕಂಪನಿ 6 ರಿಂದ 7 ಲಕ್ಷ ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಕಾರ್ ಸಾಕಷ್ಟು ಲಾಭದಾಯಕವಾದ ಕಾರ ಕೂಡ ಆಗಿರಲಿದೆ ಎಂದು ಕಂಪನಿ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ. ಸದ್ಯ ಜನರು ಮುಂದಿನ ದಿನಗಳಲ್ಲಿ 300 ಕಿಲೋ ಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಆಲ್ಟೊ ಕಾರನ್ನ ಖರೀದಿ ಮಾಡಿ ಪೆಟ್ರೋಲ್ ಹಣವನ್ನ ಉಳಿಸಬಹುದು.