Maruti Suzuki Alto K10: ಕೇವಲ 10 ಸಾವಿರಕ್ಕೆ ಖರೀದಿಸಿ, 24Km ಕ್ಕಿಂತ ಹೆಚ್ಚಿಗೆ ಮೈಲೇಜ್ ಕೊಡೋ ಈ ಕಾರನ್ನು

ಕೇವಲ 10 ಸಾವಿರಕ್ಕೆ ಖರೀದಿಸಿ ಮಾರುತಿ ಸುಜುಕಿ ಆಲ್ಟೊ ಕೆ 10 ಕಾರ್.

Maruti Suzuki Alto K10 Car: ಮಾರುತಿ(Maruti) ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಮಾರುತಿ ಕಾರುಗಳನ್ನು ಜನರು ಹೆಚ್ಚು ಹೆಚ್ಚು ಖರೀದಿಸಲು ಮುಂದಾಗುತ್ತಿದ್ದಾರೆ. ಇತ್ತೀಚಿಗೆ ಮಾರುತಿ ಕಂಪನಿ ತನ್ನ ಹೊಸ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿ ಆಲ್ಟೊ ಕೆ 10
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಅದರ ಕೈಗೆಟಕುವ ಬೆಲೆಯ ಕಾರುಗಳ ವಿನ್ಯಾಸ ಹಾಗು ವೈಶಿಷ್ಟ್ಯ ಪ್ರತಿಯೊಬ್ಬ ಗ್ರಾಹಕರಿಗೂ ಇಷ್ಟವಾಗಲಿದ್ದು, ಅವುಗಳನ್ನೇ ಖರೀದಿಸಲು ಬಯಸುತ್ತಾರೆ. ಸದ್ಯ ಅಗ್ಗದ ಬೆಲೆಯ ಆಲ್ಟೊ ಕೆ 10 ಬಗ್ಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ.

Buy Maruti Suzuki Alto K10 car for just 10 thousand.
Image Credit: News18

ಮಾರುತಿ ಸುಜುಕಿ ಆಲ್ಟೊ ಕೆ 10 ನ ಬೆಲೆ ಮತ್ತು ವಿಶೇಷತೆ
ಆಲ್ಟೊ ಕೆ 10 ಕಾರು ಇದೆ ತಿಂಗಳು ಗ್ರಾಹಕರಿಗೆ 59,000 ಡಿಸ್ಕೌಂಟ್ ದೊರೆಯಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಆಲ್ಟೊ ಕೆ 10 ರೂಪಾಯಿ 4 ಲಕ್ಷದಿಂದ ರೂಪಾಯಿ 5 .96 ಲಕ್ಷ ಎಕ್ಸ್ ಶೋ ರೂಮ್ ಬೆಲೆಯನ್ನು ಪಡೆದಿದೆ. LXi , VXi ಸೇರಿದಂತೆ ನಾಲ್ಕು ರೂಪಾಂತರ ಹಾಗು ಸಾಲಿಡ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ, ಸಿಜೆಲಿಂಗ್ ರೆಡ್, ಅರ್ಥ್ ಗೋಲ್ಡ್, ಪರ್ಲ್ ಮಿಡ್ ನೈಟ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ ಕಾರು 1 ಲೀಟರ್ ಡ್ಯೂಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಕಾರು 67 ps ಗರಿಷ್ಠ ಪವರ್ ಹಾಗು 889nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಹಾಗು 5 ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ.

Maruti Suzuki Alto K10 Price updates
Image Credit: Motorbeam

ಮಾರುತಿ ಸುಜುಕಿ ಆಲ್ಟೊ ಕೆ 10 ಕಾರು 24 .39 ರಿಂದ 24 .9 Kmpl ಮೈಲೇಜ್ ನೀಡುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಆಲ್ಟೊ ಕೆ ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ. ಈ ಕಾರು ಇದೀಗ 10,000 ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group