Ads By Google

Alto K10: ಬೈಕ್ ಖರೀದಿಸುವ ಬೆಲೆಗೆ ಖರೀದಿಸಿ ಈ ಹೊಸ ಮಾರುತಿ ಕಾರ್, ಬೆಲೆ ಕೇವಲ 4 ಲಕ್ಷ ಮಾತ್ರ.

Maruti Suzuki Alto K10

Image Source: Youtube

Ads By Google

Maruti Suzuki Alto K10 Financial Plan: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ ರೂಪಾಂತರಗಳಲ್ಲಿ ವಿಭಿನ್ನ ಬೆಲೆಯೊಂದಿಗೆ ತನ್ನ ಹೊಸ ಹೊಸ ರೂಪಾಂತರಗಳನ್ನು ಪರಿಚಯಿಸುತ್ತಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ.

ಸದ್ಯ ಮಾರುತಿ ಸುಜುಕಿ ಕಂಪನಿಯು ಮಾರುಕಟ್ಟೆಯಲ್ಲಿ Alto ಹೊಸ ಮಾದರಿಯನ್ನು ಪರಿಚಯಿಸಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ ಎನ್ನಬಹುದು. ಬೈಕ್ ಖರೀದಿಸುವ ಬೆಲೆಗೆ ನೀವು ಈ ಮಾರುತಿ ಕಂಪನಿಯ ಟಾಪ್ ಮಾಡೆಲ್ ಅನ್ನು ಖರೀದಿಸಬಹುದು. ಕಡಿಮೆ ಬೆಲೆ ಹೊಂದಿರುವ ಈ ರೂಪಾಂತರವು ನಿಮಗೆ EMI ನಲ್ಲಿ ಖರೀದಿಗೆ ಕೂಡ ಲಭ್ಯವಿದೆ.

Image Credit: News 18

ಬೈಕ್ ಖರೀದಿಸುವ ಬೆಲೆಗೆ ಖರೀದಿಸಿ ಈ ಹೊಸ ಮಾರುತಿ ಕಾರ್
ಅತ್ಯಾಧುನಿಕ ವಿನ್ಯಾಸದೊಂದಿಗೆ ಮಾರುತಿ ತನ್ನ Alto K10 ಮಾದರಿಯನ್ನು ಪರಿಚಯಿಸಿದೆ. ಇದು ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರಿನಲ್ಲಿ 5 ಜನರು ಸುಲಭವಾಗಿ ಪ್ರಯಾಣಿಸಬಹುದು. ಅಲ್ಲದೆ ಸಣ್ಣ ಹ್ಯಾಚ್ಬ್ಯಾಕ್ ಆಗಿದ್ದರೂ ಇದು 214 ಲೀಟರ್ಗಳಷ್ಟು ಬೂಟ್ ಸ್ಪೇಸ್ ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 1-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ. ಪೆಟ್ರೋಲ್ ರೂಪಾಂತರಗಳು 24.39 ರಿಂದ 24.90 kmpl ಮತ್ತು CNG ಮಾದರಿಗಳು 33.40 ರಿಂದ 33.85 kmpl ಮೈಲೇಜ್ ನೀಡುತ್ತದೆ. ಇಷ್ಟೆಲ್ಲ ಅತ್ಯಾಧುನಿಕ ಫೀಚರ್ ಇರುವ Alto K10 ಮಾದರಿಯನ್ನು ನೀವು ಆಕರ್ಷಕ ಹಣಕಾಸು ಯೋಜನೆಯೊಂದಿಗೆ ಖರೀದಿಸಬಹುದು. ಇದರ ಬಗ್ಗೆ ವಿವರ ಇಲ್ಲಿದೆ.

Image Credit: Carwale

ಈ ಟಾಪ್ ವೇರಿಯೆಂಟ್ ಬೆಲೆ ಕೇವಲ 4 ಲಕ್ಷ ಮಾತ್ರ
ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ ಕೆ10 ಬೇಸ್ ಮಾಡೆಲ್ ಸುಮಾರು ರೂ. 4 .77 ಲಕ್ಷ ಬೆಲೆಯನ್ನು ಹೊಂದಿದೆ. ಇನ್ನು VXI (ಪೆಟ್ರೋಲ್) ಬೆಲೆ 6.09 ಲಕ್ಷ ರೂ.ಗಳಾಗಿದ್ದು, ಮೂಲ ರೂಪಾಂತರದ LXI S (CNG) ಬೆಲೆಯು 6.91 ಲಕ್ಷ ರೂ. ನಿಗದಿಪಡಿಸಲಾಗಿದೆ.

ನೀವು ರೂ. 48,000 ಡೌನ್ ಪೇಮೆಂಟ್ ನೊಂದಿಗೆ ಈ ಕಾರನ್ನು ಖರೀದಿಸಬಹುದು. ಈ ಕಾರನ್ನು ಖರೀದಿಸಲು ಬ್ಯಾಂಕ್ ನಿಮಗೆ 5 ವರ್ಷಗಳ ಅವಧಿಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ ರೂ. 9,085 ರ EMI ಅನ್ನು 9.8% ಬಡ್ಡಿದರದಲ್ಲಿ ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Image Credit: Carwale
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in