Alto K10: ಕೇವಲ 4 ಲಕ್ಷಕ್ಕೆ ಮನೆಗೆ ತನ್ನಿ 33Km ಮೈಲೇಜ್ ಕೊಡುವ ಈ ಮಾರುತಿ ಕಾರ್, ಭರ್ಜರಿ ಆಫರ್ ಘೋಷಣೆ.
ಕೇವಲ 4 ಲಕ್ಷಕ್ಕೆ ಮನೆಗೆ ತನ್ನಿ 33 Km ಮೈಲೇಜ್ ಕೊಡುವ ಈ ಮಾರುತಿ ಕಾರ್
Maruti Suzuki Alto K10 Price And Feature: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ ರೂಪಾಂತರಗಳಲ್ಲಿ ವಿಭಿನ್ನ ಬೆಲೆಯೊಂದಿಗೆ ತನ್ನ ಹೊಸ ಹೊಸ ರೂಪಾಂತರಗಳನ್ನು ಪರಿಚಯಿಸುತ್ತಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ.
ಸದ್ಯ ಮಾರುತಿ ಸುಜುಕಿ ಕಂಪನಿಯು ಮಾರುಕಟ್ಟೆಯಲ್ಲಿ Alto ಹೊಸ ಮಾದರಿಯನ್ನು ಪರಿಚಯಿಸಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ ಎನ್ನಬಹುದು. ಬೈಕ್ ಖರೀದಿಸುವ ಬೆಲೆಗೆ ನೀವು ಈ ಮಾರುತಿ ಕಂಪನಿಯ ಟಾಪ್ ಮಾಡೆಲ್ ಅನ್ನು ಖರೀದಿಸಬಹುದು. ಮಾರುಕಟ್ಟೆಯಲ್ಲಿ ಆಲ್ಟೊ ಮಾದರಿಯ ಬೆಲೆ ಎಷ್ಟು..? ಈ ಮಾದರಿಯಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಕೇವಲ 4 ಲಕ್ಷಕ್ಕೆ ಮನೆಗೆ ತನ್ನಿ 33 Km ಮೈಲೇಜ್ ಕೊಡುವ ಈ ಮಾರುತಿ ಕಾರ್
ಇನ್ನು Maruti Suzuki Alto K10 ಮಾದರಿಯು ಮಾರುಕಟ್ಟೆಯಲ್ಲಿ 3.99 ರಿಂದ 5.96 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಕೇವಲ 4 ಲಕ್ಷ ಬಜೆಟ್ ನಿಮ್ಮ ಬಳಿ ಇದ್ದಾರೆ ಈ ಟಪ್ ಮಾಡೆಲ್ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. Maruti Suzuki Alto ಮಾದರಿಯು LXI, VXI, VXI ಪ್ಲಸ್ ಸೇರಿದಂತೆ 4 ರೂಪಾಂತರಗಳಲ್ಲಿ ಲಭ್ಯವಿದೆ.
ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಸೇರಿದಂತೆ 7 ಮೊನೊಟೋನ್ ಬಣ್ಣಗಳು. ಈ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಪ್ಲಸ್ ಸೇರಿದಂತೆ 4 ರೂಪಾಂತರದಲ್ಲಿ ಲಭ್ಯವಿದೆ. ಆಲ್ಟೊ k10 ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. Maruti Suzuki Alto ಮಾದರಿಯು ಪೆಟ್ರೋಲ್ ರೂಪಾಂತರದಲ್ಲಿ 24 ಕಿಲೋಮೀಟರ್ ಮೈಲೇಜ್ ನೀಡಿದರೆ, CNG ರೂಪಾಂತರವು 33 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಅತ್ಯಾಕರ್ಷಕ ಫೀಚರ್ ನ ಈ ಕಾರಿಗೆ ಹೆಚ್ಚಿದೆ ಬೇಡಿಕೆ
ಹೊಸ ಮಾರುತಿ ಸುಜುಕಿ ಕಾರು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪೇ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಗಳು, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಇದು 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಕಾರು ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬ್ಯೂಷನ್), ರಿವರ್ಸಿಂಗ್ ಕ್ಯಾಮೆರಾ ಮತ್ತು ಅಪರೂಪದ ಪಾರ್ಕಿಂಗ್ ಸಂವೇದಕಗಳನ್ನು ಪಡೆಯುತ್ತದೆ.