Suzuki Cars: ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತದೆ ಈ ಅಗ್ಗದ ಮಾರುತಿ ಹೈಬ್ರಿಡ್ ಕಾರ್, 30 Km ಮೈಲೇಜ್

ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ ಈ ಮಾರುತಿ ಹೈಬ್ರಿಡ್ ಕಾರ್

Maruti Suzuki Baleno 2024: ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಿಕಾ ಕಂಪನಿಗಳು ಹತ್ತು ಹಲವು ಮಾದರಿಯ ಪ್ರೀಮಿಯಂ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಅದರಲ್ಲೂ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Maruti ಇದೀಗ ಹೈಬ್ರಿಡ್ ಎಂಜಿನ್ ಹೊಂದಿರುವ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಕಂಪನಿಯು ತನ್ನ ಬಲೆನೊ ಮಾದರಿಯ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಿದೆ. ನೂತನ ಬಲೆನೊ ಮಾದರಿಯು ಹೆಚ್ಚು ಅತ್ಯಾಕರ್ಷ ಫೀಚರ್ ಗಳನ್ನೂ ಒಳಗೊಂಡಿರಲಿದೆ. ನಾವೀಗ ಈ ಲೇಖನದಲ್ಲಿ ಮಾರುತಿ ಕಂಪನಿಯ ನೂತನ ಬಲೆನೊ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

Maruti Suzuki Baleno 2024
Image Credit: Autocarindia

ಹೈಬ್ರಿಡ್ ಎಂಜಿನ್ ನೊಂದಿಗೆ ಮಾರುಕಟ್ಟೆಗೆ ಬರಲಿದೆ ಬಲೆನೊ
Maruti Suzuki Baleno ಕಾರಿನಲ್ಲಿ ಇರುವ ದೊಡ್ಡ Update ಎಂದರೆ ಸನ್‌ ರೂಫ್ ಮತ್ತು ಕ್ರೂಸ್ ಕಂಟ್ರೋಲ್. ಹೌದು, ಹೊಸ ಬಲೆನೊಗೆ ಸನ್‌ ರೂಫ್ ಅತಿ ದೊಡ್ಡ ಅಪ್‌ ಡೇಟ್ ಆಗಲಿದ್ದು, ಇದು ಈ ಕಾರಿನ ಮಾರಾಟವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನ್ಯೂ ಜನರೇಷನ್ ಬಲೆನೊ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಒಳಾಂಗಣವನ್ನು ಪಡೆಯಲಿದೆ ಎಂದು ತಿಳಿದಿದೆ.

ಇದು ಮಲ್ಟಿ ಪಂಕ್ಶನ್ ಸ್ಟೀರಿಂಗ್ ಚಕ್ರಗಳೊಂದಿಗೆ ಹೊಸ ಡ್ಯಾಶ್‌ ಬೋರ್ಡ್, ಹೊಸ ಈಟಿಂಗ್‌ ಮತ್ತು ಅಪ್‌ಹೋಲ್ಸ್ಟ್ರೀ ಹೊಂದಿರಲಿದೆ. ಹೊಸ ಬಲೆನೊ ಎಂಜಿನ್ ಕೂಡ ಪ್ರಮುಖ ನವೀಕರಣವನ್ನು ಪಡೆಯಲಿದೆ ಮತ್ತು ಮುಂದಿನ ಬಲೆನೊ ಎಂಜಿನ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು ಕಾರಿನ ಮೈಲೇಜ್ ಅನ್ನು ಮತ್ತಷ್ಟು ಹೆಚ್ಚಿಸಲಿದೆ. ಇದಲ್ಲದೆ, ಈ ಕಾರಿನ ಹಿಂಭಾಗದಲ್ಲಿ ಎಸಿ ವೆಂಟ್‌ ಗಳು ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಲಭ್ಯವಿರುತ್ತದೆ.

Maruti Suzuki Baleno Feature
Image Credit: Atocars

ಹೈಬ್ರಿಡ್ ಬಲೆನೊ ಕಾರ್ ಎಷ್ಟು ಮೈಲೇಜ್ ನೀಡಲಿದೆ ಗೋತ್ತಾ…?
ಹೊಸ ಬಲೆನೊ ಬೆಲೆಯೂ ಸ್ವಲ್ಪ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಮಾರುತಿ ಸುಜುಕಿ ಬಲೆನೊ ಮಾರುಕಟ್ಟೆಯಲ್ಲಿ 6.66 ಲಕ್ಷದಿಂದ 9.88 ಲಕ್ಷದವರೆಗೆ ಇದೆ ಮತ್ತು ಹೊಸ ಬಲೆನೊ ಈ ಬೆಲೆಗಿಂತ ಸುಮಾರು 50 ರಿಂದ 60 ಸಾವಿರದಷ್ಟು ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

ಈ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು CNG ಪವರ್‌ ಟ್ರೇನ್ ಆಯ್ಕೆಗಳನ್ನು ನೀಡಲಾಗಿದೆ. ರೂಪಾಂತರವನ್ನು ಅವಲಂಬಿಸಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ. ಇನ್ನು ಮಾಲಿಯೇಜ್ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 kmpl ರಿಂದ 22.94 kmpl ಮೈಲೇಜ್ ನೀಡಿದರೆ CNG ರೂಪಾಂತರವು ಕೆಜಿಗೆ 30.61 km ಮೈಲೇಜ್ ನೀಡುತ್ತದೆ.

Maruti Suzuki Baleno Price
Image Credit: Atocars

Maruti Suzuki Baleno Feature
9-inch touchscreen infotainment system,
Apple Car Play,
Android auto,
4-Speaker
6 airbags,
ABS (Antilock Braking System),
EBD (Electronic Brakeforce Distribution),
ESP (Electronic Stability Program)

Join Nadunudi News WhatsApp Group