Ads By Google

Top Sale Car: ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ 25 Km ಮೈಲೇಜ್ ಕೊಡುವ 8 ಲಕ್ಷದ ಈ ಮಾರುತಿ ಕಾರ್

maruti suzuki brezza top sale in india

Image Credit: Original Source

Ads By Google

Maruti Suzuki Brezza Top Sale In India: ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಮಾರುತಿ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಮಾರುತಿ ಕಂಪನಿಯ ಕಾರುಗಳು ಆಕರ್ಷಕ ವಿನ್ಯಾಸ, ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯನ್ನು ಪಡೆದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ.

ಮಾರುತಿ ಸುಜುಕಿ ಕಂಪನಿಯ ಹಲವು ಕಾರುಗಳು ದೇಶದಲ್ಲಿ ಸಾಕಷ್ಟು ಮಾರಾಟ ಆಗುತ್ತಿರುವುದನ್ನ ನಾವು ಗಮನಿಸಬಹುದಾಗಿದೆ. ಹೌದು ಮಾರುತಿ ಸುಜುಕಿ ಕಂಪನಿಯ ಒಂದು ಕಾರ್ ದೇಶದಲ್ಲಿ ದಾಖಲೆಯ ಮಾರಾಟ ಕಂಡಿದ್ದು ಸದ್ಯ ಈ ಕಾರ್ 2024 ರಲ್ಲಿ ಕೂಡ ದಾಖಲೆ ಮಾರಾಟ ಕಾಣುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

Image Credit: Rushlane

ಮಾರುತಿ ಸುಜುಕಿ ಬ್ರೆಝಾ ಕಾರಿನ ವಿಶೇಷತೆಗಳು

ಮಾರುತಿ ಸುಜುಕಿ ಬ್ರೆಝಾ 9-inch touchscreen infotainment system, Android Auto, Apple CarPlay, paddle shifter, single-pane sunroof, ambient lighting, wireless phone charging, heads-up display and 360-degree camera, 6 airbags, ESC, hill-hold assist, seat belts Reminder, EBD, ABS, Rare Parking Sensors ಒಳಗೊಂಡಿದೆ.

ಮಾರುತಿ ಸುಜುಕಿ ಬ್ರೆಝಾ ಕಾರಿನ ಎಂಜಿನ್ ಸಾಮರ್ಥ್ಯ ಹಾಗು ಮೈಲೇಜ್ ವಿವರ

ಮಾರುತಿ ಸುಜುಕಿ ಬ್ರೆಝಾ 5- ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಕಾರಾಗಿದ್ದು, 1.5 – ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5 – ಸ್ವೀಡ್ ಮ್ಯಾನುವಲ್, 6 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.  ಕೇವಲ 5 – ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಯಲ್ಲಿ ಸಿಗುತ್ತದೆ. ಪೆಟ್ರೋಲ್ ರೂಪಾಂತರಗಳು 17.38 kmpl – 19.8 kmpl, ಸಿಎನ್‌ಜಿ ರೂಪಾಂತರಗಳು 25.51 km/kg ಮೈಲೇಜ್ ನೀಡುತ್ತವೆ.

Image Credit: CarWale

ಮಾರುತಿ ಸುಜುಕಿ ಬ್ರೆಝಾ ಕಾರಿನ ಬೆಲೆ

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ರೂ.8.29 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ 6 ಮೊನೊಟೋನ್, 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in