Brezza S -CNG : ಅಗ್ಗದ ಬೆಲೆಗೆ 32 Km ಮೈಲೇಜ್ ಕೊಡುವ ಹೊಸ ಬ್ರೆಜಾ ಕಾರ್ ಲಾಂಚ್ ಮಾಡಿದ ಮಾರುತಿ, ದಾಖಲೆಯ ಬುಕಿಂಗ್.
ಪ್ರತಿ ಕೆಜಿ CNG ಗೆ 32 ಕಿಲೋಮೀಟರ್ ಮೈಲೇಜ್ ನೀಡಲಿದೆ Brezza CNG.
Maruti Suzuki Brezza S -CNG : Maruti Suzuki ಈಗಾಗಲೇ ಪೆಟ್ರೋಲ್ (Petrol), ಎಲೆಕ್ಟ್ರಿಕ್ (Electric) ಚಾಲಿತ ವಾಹನವನ್ನು ಪರಿಚಯಿಸಿದೆ. ದೇಶದ ಜನಪ್ರಿಯ ಕಂಪನಿಯಾದ Maruti ವಿವಿಧ ವೈಶಿಷ್ಟ್ಯಗಳಿರುವ SUV ಬ್ರೆಜಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ Brezza ಕಾರ್ ಅನ್ನು ಪರಿಚಯಿಸಿದೆ.
Maruti Suzuki Brezza S -CNG
Maruti Suzuki Brezza S -CNG ಮಾದರಿ ಮಾರುಕಟ್ಟೆಗೆ ಆಗಮಿಸಲಿದೆ. ಮಾರುತಿ ಸುಜುಕಿ Brezza ಸಿ ಏನ್ ಜಿ ತಂತ್ರಜ್ಞಾನದೊಂದಿಗೆ ಈ ಕಾರಿನಲ್ಲಿ ವಿವಿಧ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Electric ಮಾದರಿಯ ಬೆಲೆ ಹೆಚ್ಚಿರುವ ಕಾರಣ ಜನರು ಸದ್ಯ CNG ಕಾರ್ ಖರೀದಿಗೆ ಮುಂದಾಗುತ್ತಿದ್ದಾರೆ. ಇದೀಗ Maruti ತನ್ನ Brezza ಮಾದರಿಯನ್ನು CNG ರೂಪಾಂತರದಲ್ಲಿ ಗ್ರಾಹಕರ ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ.
Suzuki Brezza S -CNG ಎಂಜಿನ್ ಸಾಮರ್ಥ್ಯ
ಇನ್ನು 1.5 ಲೀಟರ್ ಸರಣಿಯ ಪೆಟ್ರೋಲ್ ಇಂಜಿನ್ ಮೂಲಕ 5500 ಆರ್ ಪಿ ಎಂ ದರದಲ್ಲಿ 86.7 ಬಿ ಎಚ್ ಪಿ ಶಕ್ತಿ ಮತ್ತು 4200 ಆರ್ ಪಿ ಎಂ ದರದಲ್ಲಿ 121.5 ಏನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರಿನ ಎಂಜಿನ್ ಹೊಂದಿದೆ. 5 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಸ್ಷನ್ ಹಾಗು ಸಿ ಏನ್ ಜಿ ಸಿಲಿಂಡರ್ ನೊಂದಿಗೆ Brezza S -CNG ಕಾರು ಪ್ರತಿ ಕೆಜಿಗೆ 32 ಕೀ.ಮೀ ಮೈಲೇಜ್ ನೀಡುತ್ತದೆ. ಈ ಹೊಸ SUV ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಗ್ರಾಹಕರಿಗೆ ಇಷ್ಟವಾಗಲಿದೆ.
ಮಾರುತಿ ಸುಜುಕಿ Brezza CNG ಬೆಲೆ
ಇನ್ನು 12-volt power socket, steel rims, halogen projector headlamps, electronic stability program, ISOFIX child seat mount, shark fin antenna, all-black interiors, keyless entry, driver side auto up/down window ನಂತಹ ಅನೇಕ ಅದ್ಭುತ ವೈಶಿಷ್ಟ್ಯಗಳೊಂದಿದೆ ಸುಜುಕಿ Brezza CNG ಮಾದರಿ ಗ್ರಾಹಕರಿಗೆ ಲಭ್ಯವಾಗಲಿದೆ.
BRezza CNG ನಾಲ್ಕು ಮಾದರಿಗಳು ವಿಭಿನ್ನ ಬೆಲೆಯಲ್ಲಿ ಲಭ್ಯವಾಗಲಿದೆ. LXi S-CNG ಬೆಲೆ 9.14 ಲಕ್ಷ ರೂ., VXi S-CNG ಬೆಲೆ ರೂ. 10.49 ಲಕ್ಷ, ZXi S-CNG ಬೆಲೆ ರೂ. 11.89 ಲಕ್ಷ, ZXi S-CNG ಡ್ಯುಯಲ್ ಬೆಲೆ ರೂ. ಟೋನ್ 12.05 ಲಕ್ಷ ರೂ. ಆಗಿದೆ. ಇನ್ನು Tata Nexon, Hyundai Creta, Tata Punch ಕಾರ್ ಗಳ ಜೊತೆ Brezza ನೇರ ಸ್ಪರ್ಧೆಗಿಳಿಯಲಿದೆ.