Maruti Suzuki Discount Sale: ಕಾರ್ ಖರೀದಿ ಮಾಡುವವರಿಗೆ ಬಂಪರ್ ಆಫರ್ ಘೋಷಣೆ ಮಾಡಿದ ಮಾರುತಿ, ಕಾರುಗಳ ಮೇಲೆ ಭರ್ಜರಿ ರಿಯಾಯಿತಿ.
Maruti Suzuki Cars Offer: ಸಾಮಾನ್ಯವಾಗಿ ಕಾರು ಖರೀದಿಸುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಇದೀಗ ಕಾರು ಖರೀದಿಸುವವರಿಗೆ ಹೊಸ ಸುದ್ದಿ ಹೊರ ಬಿದ್ದಿದೆ. ಮಾರುತಿ ಸುಜುಕಿ ಯಲ್ಲಿ ಭರ್ಜರಿ ಕೊಡುಗೆ ಬಿಡುಗಡೆ ಆಗಿದೆ.
ಸಾಕಷ್ಟು ಡಿಸ್ಕೌಂಟ್ ಮೂಲಕ ಮಾರುತಿ (Maruti Suzuki) ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರಾಹಕರು ತಮಗೆ ಬೇಕಾದ ಹೊಸ ಕಾರನ್ನು ಡಿಸ್ಕೌಂಟ್ ಮೂಲಕ ಖರೀದಿಸಲು ಮಾರ್ಚ್ 31 ಕೊನೆಯ ದಿನಾಂಕ.
ಮಾರುತಿ ಸುಜುಕಿ ಕಂಪನಿಯಿಂದ ಭರ್ಜರಿ ಆಫರ್
ಹೊಸ ಕಾರನ್ನು ಖರೀದಿಸಲು ಬಯಸುವವರಿಗೆ ಜನಪ್ರಿಯ ಕಾರ್ ತಯಾರಕ ಕಂಪನಿ ಮಾರುತಿ ಸುಜುಕಿ ಭರ್ಜರಿ ಕೊಡುಗೆ ನೀಡುತ್ತಿದೆ.
ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳಾದ ವ್ಯಾಗನ್ ಆರ್, ಸ್ವಿಫ್ಟ್ ಆಲ್ಟೋ ಕೆ 10 , ಎಸ್ ಪ್ರೆಸ್ಸೋ, ಸೆಲೆರಿಯೊ, ಆಲ್ಟೋ 800 ಮತ್ತು ಡಿಜೈನರ್ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ.
ನೀವು ಈ ಕಾರುಗಳನ್ನು 64,000 ರೂ.ಗಳ ಕೊಡುಗೆಯೊಂದಿಗೆ ನಿಮ್ಮದಾಗಿಸಬಹುದಾಗಿದೆ. ಆದರೆ ಈ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಲಭ್ಯವಿರಲಿದೆ.
ಮಾರುತಿ ಕಾರುಗಳ ಮೇಲೆ ಇರುವ ಕೊಡುಗೆಗಳು
ಮಾರುತಿ ವ್ಯಾಗರ್ ಆರ್ ಕಾರಿನ ಮೇಲೆ 64,000 ರೂಪಾಯಿ ಡಿಸ್ಕೌಂಟ್ ಆಫರ್ ಇದೆ. ಮಾರುತಿ ಸ್ವಿಫ್ಟ್ ಕಾರಿನ ಮೇಲೆ 54000 ರೂಪಾಯಿ ಡಿಸ್ಕೌಂಟ್ ಇದೆ. ಮಾರುತಿ ಆಲ್ಟೊ ಕೆ 10 ಕಾರು ಖರೀದಿಯಲ್ಲಿ 49,000 ರೂಪಾಯಿ ಡಿಸ್ಕೌಂಟ್. ಮಾರುತಿ ಎಸ್ ಪ್ರಸ್ಸೋ ಖರೀದಿಯಲ್ಲಿ 49,000 ರೂಪಾಯಿ ಆಫರ್ ಲಭ್ಯವಿದೆ.
ಮಾರುತಿ ಸೆಲರಿಯೊ ಕಾರು ಖರೀದಿಯಲ್ಲಿ 44,000 ರೂಪಾಯಿ. ಮಾರುತಿ ಆಲ್ಟೊ 800 ಕಾರು ಖರೀದಿಯ ಮೇಲೆ 38,000 ರೂಪಾಯಿ. ಮಾರುತಿ ಡಿಸೈನ್ ಖರೀದಿಯಲ್ಲಿ 10,000 ರೂಪಾಯಿ ಕೊಡುಗೆಗಳು ಲಭ್ಯವಿದೆ. ಮಾರುತಿ ಕಾರುಗಳ ಮೇಲೆ ಈ ರೀತಿಯಾದ ಆಫರ್ ಗಳು ಲಭ್ಯವಿದೆ. ಈ ಕೊಡುಗೆಗಳು ಕೇವಲ ಮಾರ್ಚ್ 31 ರ ತನಕ ಮಾತ್ರ ಇರಲಿದೆ.