Maruti Discount: ಮಾರುತಿ ಕಾರ್ ಗಳ ಖರೀದಿಗೆ ಭರ್ಜರಿ ಆಫರ್, ಈ ಕಾರುಗಳ ಮೇಲೆ 62000 ರೂ. ರಿಯಾಯಿತಿ.
ಕಾರ್ ಖರೀದಿ ಮಾಡಲು ಮಾರುತಿ ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ.
Maruti Cars Discount Offer: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ (Maruti Cars) ಇದೀಗ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. ಮಾರುತಿ ಸುಜುಕಿ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ.
ನೀವು ಮಾರುತಿ ಕಾರ್ ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಎಸ್- ಪ್ರೆಸ್ಸೋ, ಆಲ್ಟೊ, ವ್ಯಾಗನಾರ್, ಸೆಲೆರಿಯೊ, ಡಿಸೈರ್, ಸ್ವಿಫ್ಟ್ ಕಾರುಗಳ ಮೇಲೆ ಕಂಪನಿ ಬರೋಬ್ಬರಿ 62,000 ದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಕಾರ್ ಖರೀದಿ ಮಾಡಲು ಮಾರುತಿ ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ.
*Maruti Suzuki S -Presso
Maruti Suzuki S -Presso ಪೆಟ್ರೋಲ್ ಮತ್ತು CNG-ಚಾಲಿತ ಎಲ್ಲಾ ರೂಪಾಂತರಗಳು ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಒಟ್ಟು 62,000 ರೂ. ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. ಇದರ ಜೊತೆಗೆ ಸ್ವಯಂಚಾಲಿತ ಗೇರ್ ಬಾಕ್ಸ್-ಸಜ್ಜಿತ ರೂಪಾಂತರಗಳು ರೂ 37,000 ವರೆಗೆ ರಿಯಾಯಿತಿಯನ್ನು ಪಡೆಯುತ್ತವೆ.
*Maruti Suzuki Celerio
Maruti Suzuki Celerio ಪೆಟ್ರೋಲ್ ಮ್ಯಾನ್ಯುವಲ್ ಮತ್ತು CNG ರೂಪಾಂತರಗಳಿಗೆ ಕಂಪನಿಯು 62,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದರ ಜೊತೆಗೆ MT-ಸಜ್ಜಿತ ರೂಪಾಂತರಗಳು ರೂ 47,000 ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. Celerio 67hp, 1.0-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಚಲಿತವಾಗಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.
*Maruti Suzuki Alto K10
Maruti Suzuki Alto K10 ನ ಎಲ್ಲಾ ಮ್ಯಾನುವಲ್ ಗೇರ್‌ಬಾಕ್ಸ್ ರೂಪಾಂತರಗಳು 58,000 ರೂ ಮೌಲ್ಯದ ರಿಯಾಯಿತಿಗಳನ್ನು ಪಡೆದರೆ, ಸ್ವಯಂಚಾಲಿತ ಗೇರ್‌ಬಾಕ್ಸ್ ರೂಪಾಂತರಗಳು 33,000 ರೂಗಳ ರಿಯಾಯಿತಿಗಳನ್ನು ಪಡೆಯುತ್ತವೆ, ಆದರೆ CNG ರೂಪಾಂತರಗಳು ರೂ 53,000 ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ.
*Maruti Suzuki Swift
Maruti Suzuki Swift ಪೆಟ್ರೋಲ್ ಮ್ಯಾನ್ಯುವಲ್ ರೂಪಾಂತರಗಳಿಗೆ ಸ್ವಿಫ್ಟ್ ಒಟ್ಟು ರೂ 57,000 ವರೆಗೆ ರಿಯಾಯಿತಿಯನ್ನು ಪಡೆಯುತ್ತದೆ. ಹಾಗೆಯೆ LXI ಮ್ಯಾನುವಲ್ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ರೂಪಾಂತರಗಳು ಕೇವಲ 52,000 ರೂ.ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. ಇನ್ನು Maruti CNG-ಚಾಲಿತ ಸ್ವಿಫ್ಟ್ 22,000 ರೂ.ವರೆಗೆ ರಿಯಾಯಿತಿಗಳನ್ನು ಪಡೆಯುತ್ತದೆ.
*Maruti Suzuki Wagon R
Maruti Suzuki Wagon R 1.2-ಲೀಟರ್ ಪೆಟ್ರೋಲ್ ಎಂಜಿನ್ ಗಳೊಂದಿಗೆ ಎಲ್ಲಾ ಮ್ಯಾನುವಲ್ ರೂಪಾಂತರಗಳ ಮೇಲೆ ರೂ 52,000 ವರೆಗೆ ಒಟ್ಟು ರಿಯಾಯಿತಿಯನ್ನು ಪಡೆಯುತ್ತದೆ. ಪೆಟ್ರೋಲ್ AMT ಮಾದರಿಗಳು ರೂ 27,000 ವರೆಗಿನ ಪ್ರಯೋಜನಗಳನ್ನು ಹೊಂದಿವೆ. CNG-ಚಾಲಿತ VXi ಮತ್ತು LXi ರೂಪಾಂತರಗಳು ರೂ 52,000 ವರೆಗಿನ ರಿಯಾಯಿತಿ ಹೊಂದಿದೆ.
*Maruti Suzuki Alto 800
Maruti Suzuki Alto 800 , 800cc ಎಂಜಿನ್ ಹೊಂದಿದ್ದು, 5,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. Maruti Suzuki Alto 800 CNG ಮಾದರಿಯ ಮೇಲೆ ಕಂಪನಿ ರಿಯಾಯಿತಿಯನ್ನು ನೀಡುತ್ತಿದೆ.
*Maruti Suzuki Dezire
Maruti Suzuki Dezire ನ AMT ಮತ್ತು MT ಎರಡೂ ರೂಪಾಂತರಗಳು ರೂ 17,000 ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. Maruti Suzuki Dezire CNG ರೂಪಾಂತರಗಳು ರೂ. 7,000 ರಿಯಾಯಿತಿ ಲಭ್ಯವಿದೆ.