CNG Mileage Car: ಟ್ರಾಫಿಕ್ ನಲ್ಲಿ 35 Km ಮೈಲೇಜ್ ಕೊಡುವ ಈ ಕಾರಿಗೆ ಯುವಕರು ಫಿದಾ, 68 ಸಾವಿರ ಡಿಸ್ಕೌಂಟ್ ಘೋಷಣೆ.
ಈ ಮಾರುತಿ CNG ಕಾರ್ ಟ್ರಾಫಿಕ್ ನಲ್ಲಿ ಕೂಡ 35 Km ಮೈಲೇಜ್ ಕೊಡುತ್ತದೆ.
Maruti Suzuki Celerio CNG Discount: ದೇಶಿಯ ಮಾರುಕಟ್ಟೆಯಲ್ಲಿ CNG ಮಾದರಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದಿದೆ. CNG ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರಣದಿಂದ CNG ಮಾದರಿಯ ಕಾರ್ ಗಳ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ವಾಹನವನ್ನೇ ಖರೀದಿಸುತ್ತಾರೆ. ಇನ್ನು Maruti ಕಂಪನಿಯು ತನ್ನ CNG ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಮಾರುತಿ ಕಂಪನಿಯ ಈ CNG ಮಾದರಿಯ ಕಾರ್ ಕೇವಲ 1KG CNG ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ CNG ಮಾದರಿಯ ಖರೀದಿಗೆ ಕಂಪನಿಯು ಹಣಕಾಸಿನ ಯೋಜನೆಯ ಜೊತೆಗೆ ಭರ್ಜರಿ ಡಿಸ್ಕೌಂಟ್ ಅನ್ನು ಕೂಡ ಪರಿಚಯಿಸಿದೆ. ಈ ಆಫರ್ ನ ಮೂಲಕ ಗ್ರಾಹಕರು ಅತಿ ಕಡಿಮೆ ಬೆಲೆಯಲ್ಲಿ ಮಾರುತಿ CNG ಮಾದರಿಯನ್ನು ಖರೀದಿಸಬಹುದಾಗಿದೆ.
ಮಾರುತಿ ಈ ಕಾರ್ ಖರೀದಿಯ ಮೇಲೆ 68 ಸಾವಿರ ಡಿಸ್ಕೌಂಟ್ ಘೋಷಣೆ
ಇದೀಗ ನಾವು Maruti Suzuki Celerio CNG ಕಾರ್ ಖರೀದಿಗೆ ಕಂಪನಿ ಘೋಷಿಸಿರುವ ಆಫರ್ ನ ಆಬಗ್ಗೆ ಮಾಹಿತಿ ತಿಳಿಯೋಣ. ಕಂಪನಿಯು ಇದೀಗ Maruti Suzuki Celerio ಕಾರ್ ಖರೀದಿಗೆ ದೀಪಾವಳಿ ಆಫರ್ ಅನ್ನು ಘೋಷಿಸಿದೆ. ನೀವು Maruti Suzuki Celerio ಖರೀದಿಯಲ್ಲಿ 68,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಇನ್ನು Maruti Suzuki Celerio ಶಕ್ತಿಯುತ ಎಂಜಿನ್ ಜೊತೆಗೆ ಹೆಚ್ಚಿನ ಮೈಲೇಜ್ ಅನ್ನು ಒದಗಿಸುತ್ತದೆ. ಈ ಕಾರಿನ CNG ರೂಪಾಂತರದ ಎಕ್ಸ್ ಶೋ ರೂಂ ಬೆಲೆ 6.74 ಲಕ್ಷ ರೂ. ಆಗಿದೆ. ಆದರೆ ಈ ಅಕ್ಟೋಬರ್ ನಲ್ಲಿ ನೀವು ಕಂಪನಿಯು ನೀಡುವ ಕೊಡುಗೆಯನ್ನು ಪಡೆಯುವ ಮೂಲಕ ನಿಮ್ಮ ಬಜೆಟ್ ಬೆಲೆಯಲ್ಲಿ ಈ ಕಾರ್ ಅನ್ನು ಖರೀದಿಸಬಹುದು.
35 Km ಮೈಲೇಜ್ ಕೊಡುವ ಈ ಕಾರಿಗೆ ಹೆಚ್ಚಿದೆ ಬೇಡಿಕೆ
ಈ ಕಾರಿನಲ್ಲಿ ನೀವು 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡುವುದರ ಜೊತೆಗೆ ಕಂಪನಿಯು CNG ಕಿಟ್ ಅನ್ನು ಸಹ ಒದಗಿಸುತ್ತದೆ. Celerio ಎಂಜಿನ್ ಪೆಟ್ರೋಲ್ ನಲ್ಲಿ 67 PS ಮತ್ತು 89 Nm ಮತ್ತು CNG ಯಲ್ಲಿ 56.7 PS ಮತ್ತು 82 Nm ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪೆಟ್ರೋಲ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಆಯ್ಕೆಯೊಂದಿಗೆ ಬರುತ್ತದೆ. ಅದರ ಸಿಎನ್‌ಜಿ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರಲಿದೆ.ಇನ್ನು Celerio CNG ನಲ್ಲಿ ನೀವು 35.6 ಕಿಲೋಮೀಟರ್ ಮೈಲೇಜ್ ಪಡೆಯುತ್ತೀರಿ.
Maruti Suzuki Celerio Feature
*7-inch touchscreen infotainment system
*Passive Keyless Entry, Steering Wheel Mounted
*Audio Controls
*Engine start/stop button
*Semi-digital instrument cluster
*Turn indicator
*Electric ORVM
*Dual front airbag
*ABS with EBD,
*Hill-hold assist
*Rear parking sensor