Ads By Google

Celerio 2024: ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ 5 ಲಕ್ಷದ ಈ ಮಾರುತಿ ಕಾರ್, 26 Km ಮೈಲೇಜ್

Maruti Suzuki Celerio Price and feature

Image Credit: Original Source

Ads By Google

Maruti Suzuki Celerio: ದೇಶದಲ್ಲಿ ಈಗ ಕಾರುಗಳ ಬೇಡಿಕೆ ಹೆಚ್ಚುತ್ತಿದೆ, ಹಣ ಇರುವ ಶ್ರೀಮಂತರು ಮಾತ್ರ ಈಗ ಕಾರನ್ನು ಹೊಂದಿರುವುದಿಲ್ಲ ಮಧ್ಯಮ ವರ್ಗದ ಜನರು ಕೂಡ ತಮ್ಮ ಬಜೆಟ್ ಗೆ ಅನುಗುಣವಾಗಿ ಕಾರನ್ನು ಖರೀದಿ ಮಾಡುತ್ತಾರೆ. ಕಾರು ಖರೀದಿ ಮಾಡುವಾಗ ಕಾರಿನ ಲುಕ್ ಜೊತೆಗೆ, ಮೈಲೇಜ್ ಕೂಡ ಉತ್ತಮ ಆಗಿರಬೇಕು.

ಅಧಿಕ ಮೈಲೇಜ್ ನೀಡುವ ಕಾರಿನ ಪಟ್ಟಿಯಲ್ಲಿ ಮಾರುತಿ ಸುಜುಕಿ (Maruti Suzuki) ಸೆಲೆರಿಯೊ ಕಾರು ಕೂಡ ಒಂದಾಗಿದೆ. ಬಹಳ ಕಡಿಮೆ ಬೆಲೆಯ, ಅಧಿಕ ಮೈಲೇಜ್ ನೀಡುವ ಕಾರು ಹುಡುಕುತ್ತಿರುವವರಿಗೆ ಮಾರುತಿ ಸುಜುಕಿ ಸೆಲೆರಿಯೊ ಉತ್ತಮ ಆಯ್ಕೆ ಆಗಲಿದೆ.

Image Credit: Firstpost

ಮಾರುತಿ ಸುಜುಕಿ ಸೆಲೆರಿಯೊ ಕಾರಿನ ವೈಶಿಷ್ಟತೆಗಳು

ಮಾರುತಿ ಸುಜುಕಿ ಸೆಲೆರಿಯೊ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಕಾರು 313 ಲೀಟರ್ ಬೂಟ್ ಸ್ಪೇಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ. ಹಾಗೆಯೇ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಇವೆ. ಈ ಕಾರನ್ನು ಕೆಫೀನ್ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲಾಕ್, ಗ್ಲಿಸ್ಟೆನಿಂಗ್ ಗ್ರೇ, ಸಿಲ್ಕಿ ಸಿಲ್ವರ್, ಸ್ಪೀಡಿ ಬ್ಲೂ, ಸಾಲಿಡ್ ಫೈರ್ ರೆಡ್, ಆರ್ಕ್ಟಿಕ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು. ಈ ವಾಹನವು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಎಂಜಿನ್ ಹಾಗು ಮೈಲೇಜ್

ಮಾರುತಿ ಸುಜುಕಿ ಸೆಲೆರಿಯೊ 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 67 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಾಹನವು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ AMT ಗೇರ್‌ಬಾಕ್ಸ್ ಘಟಕದೊಂದಿಗೆ ಖರೀದಿಗೆ ಲಭ್ಯವಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ಸೆಲೆರಿಯೊ 5-ಸ್ಪೀಡ್ AMT ರೂಪಾಂತರವು 26 kmpl ಮೈಲೇಜ್ ನೀಡುತ್ತದೆ. ಈ ಹ್ಯಾಚ್‌ಬ್ಯಾಕ್‌ನ 5-ಸ್ಪೀಡ್ MT ರೂಪಾಂತರವು 24.97 kmpl ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಿದೆ.

Image Credit: Carwale

ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಬೆಲೆ

ಮಾರುತಿ ಸುಜುಕಿ ಸೆಲೆರಿಯೊ ಬೆಲೆ ರೂ. 5.37 ಲಕ್ಷ (ಎಕ್ಸ್ ಶೋ ರೂಂ) ರೂ.ನಿಂದ ಪ್ರಾರಂಭವಾಗುತ್ತದೆ. ಟಾಪ್-ಟ್ರಿಮ್ ಬೆಲೆ ರೂ. 7.14 ಲಕ್ಷ (ಎಕ್ಸ್ ಶೋ ರೂಂ) ಇದೆ. ಮಾರುತಿ ಸುಜುಕಿ ಸೆಲೆರಿಯೊ LXi, VXi, ZXi, ZXi+ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in