Ads By Google

Maruti MPV: 7 ಆಸನಗಳ ಈ ಮಾರುತಿ ಕಾರ್ ಕೇವಲ 5 ಲಕ್ಷಕ್ಕೆ, ಅತೀ ಹೆಚ್ಚು ಮಾರಾಟವಾಗುತ್ತಿದೆ 27 Km ಮೈಲೇಜ್ ಕೊಡುವ ಕಾರ್.

Maruti MPV

Image Courtesy: Youtube

Ads By Google

Maruti Suzuki EECO 7 Seater Car Price In India:  MARUTI Suzuki ಇದೀಗ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೊಸ ಹೊಸ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ಮಾರುತಿ ತನ್ನ ಹೊಸ ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುವ ಮೂಲಕ ವಿವಿಧ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ.

ಸದ್ಯ ಭಾರತೀಯ ಆಟೋ ವಲಯದಲ್ಲಿ ಸಂಚಲನ ಮೂಡಿಸಲು ಹೊಸ ಮಾದರಿಯ ಕಾರ್ ಬಿಡುಗಡೆಗೆ ಮಾರುತಿ ಸುಜುಕಿ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಮಾರುತಿ ಸುಜುಕಿ ತನ್ನ ಹೊಸ ನವೀಕರಿಸಿದ ರೂಪಾಂತರವನ್ನು ಬಿಡುಗಡೆ ಮಾಡಲು ಯೋಜನೆ ನಡೆಸಿದೆ. ದೊಡ್ಡ ಕುಟುಂಬದವರಿಗಾಗಿ MARUTI ಕಂಪನಿ ಇದೀಗ ತನ್ನ 7 ಸೀಟರ್ MPV ಯನ್ನು ಗ್ರಾಹಕರ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ.

Image Credit: Lgoodov

Maruti Suzuki EECO
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ Maruti ಇದೀಗ ಹೊಸ ರೂಪಾಂತರದ ಮಾರುತಿ ಸುಜುಕಿ EECCO ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ ಒಳ ಮತ್ತು ಹೊರ ವಿನ್ಯಾಸದಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಟ 80.76 PS ಪವರ್ ಸಾಮರ್ಥ್ಯವನ್ನು ಹೊಂದಿದ್ದು, 104.4 Nm ಗರಿಷ್ಟ ಟರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅತೀ ಹೆಚ್ಚು ಮಾರಾಟವಾಗುತ್ತಿದೆ 27 Km ಮೈಲೇಜ್ ಕೊಡುವ ಕಾರ್
ಇನ್ನು ಈ ಕಾರ್ ನಲ್ಲಿ ಸಿಎನ್ ಜಿ ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು 71.65 PS ಪವರ್ ಮತ್ತು 95 Nm ಟರ್ಕ್ ಅನ್ನು ಉತ್ಪಾದಿಸುವ ಸಿಎನ್ ಜಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್ ಜಿ ಆಯ್ಕೆಯಲ್ಲಿ ಪ್ರತಿ ಕೆಜಿಗೆ 27 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.

Image Credit: Cardekho

7 ಆಸನಗಳ ಈ ಮಾರುತಿ ಕಾರ್ ನ ಬೆಲೆ ಎಷ್ಟು ..?
Maruti Suzuki EECO ಮಾರುಕಟ್ಟೆಯಲ್ಲಿ 5 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನು Hazard lights, dual airbags, engine immobilizer, ABS with EBD, child locks, sliding door , Digital instrument, digital cluster, digital speedometer, automatic AC, automatic climate control ವೈಶಿಷ್ಟ್ಯಗಳನ್ನು ಹೊಂದಿರುವ EECOO ಬೆಲೆ ಮಾರುಕಟ್ಟೆಯಲ್ಲಿ 5 ಲಕ್ಷ ರೂ. ಆಗಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ನ್ನು ಹುಡುಕುತಿದ್ದವರಿಗೆ ಈ ಕಾರ್ ಉತ್ತಮ ಆಯ್ಕೆ ಎನ್ನಬಹುದು.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.