Mileage Cars: 25Km ಮೈಲೇಜ್ ನೀಡುವ ಈ ಕಾರಿನ ಹಿಂದೆ ಬಿದ್ದ ಜನರು, ಅತ್ಯಂತ ಕಡಿಮೆ ಬೆಲೆಗೆ ಲಭ್ಯ
ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಮಾರುತಿ ಕಂಪನಿಯ Eeco ಕಾರ್ ಬಗ್ಗೆ ಮಾಹಿತಿ ತಿಳಿಯಿರಿ.
Maruti Eeco Car Price: ಸಾಮಾನ್ಯವಾಗಿ ಕಾರನ್ನು ಖರೀದಿ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಅದರಲ್ಲಿ ಮಾರುತಿ ಕಂಪನಿ ತನ್ನ ಹೊಸ ಹೊಸ ಮಾದರಿಯ ಕಾರನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ 5 ಸೀಟರ್ ಹೊಂದಿರುವ ಅಗ್ಗದ ಬೆಲೆಯ ಮಾರುತಿ ಕಂಪನಿಯ ಕಾರು ಒಂದು ಬಿಡುಗಡೆ ಆಗಿದೆ. ಮಾರುತಿ ಕಂಪನಿಯ ಇಕೋ ಕಾರು ಹೆಚ್ಚು ಸದ್ದು ಮಾಡುತ್ತಿದೆ. ಈ ಕಾರಿನ ಬಗ್ಗೆ ಮಾಹಿತಿ ತಿಳಿಯೋಣ.
ಮಾರುತಿ ಇಕೋ ಕಾರಿನ ಬೆಲೆ
ನಂಬರ್ ಒನ್ ಸ್ಥಾನದಲ್ಲಿರುವ ಮಾರುತಿ ಇಕೋ ಬೆಲೆ 5 .27 ಲಕ್ಷ ದಿಂದ 6 .53 ರೂಪಾಯಿಗಳಿಂದ ಆರಂಭವಾಗುತ್ತದೆ ಎನ್ನಲಾಗಿದೆ. ಈ ಕಾರು 4 ಮತ್ತು 5 ಸೀಟರ್ ಆಯ್ಕೆಗಳನ್ನು ಹೊಂದಿದೆ. ಮಾರುತಿ ಸುಜುಕಿ ಇಕೋ 1.2 lk ಸರಣಿ ಡ್ಯುಯಲ್ ಜೆಟ್, ಡ್ಯುಯಲ್ vvt ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.
ಮಾರುತಿ ಇಕೋ ಕಾರಿನ ವಿಶೇಷತೆ
ಇದು 80 .76 ps ಪವರ್ ಮತ್ತು 104 .4 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಪವರ್ ಟ್ರೇನ್ ಹಿಂದಿನ ಮಾದರಿಗಿಂತ 10 ಪ್ರತಿಶತದಷ್ಟು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ CNG ಆಯ್ಕೆಯು ಲಭ್ಯವಿದೆ. cng ಯೊಂದಿಗೆ ಎಂಜಿನ್ 71 .65 ps ಪವರ್ ಮತ್ತು 95 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಟೂರ್ ರೂಪಾಂತರವು ಪೆಟ್ರೋಲ್ ಮತ್ತು cng ಎರಡರಲ್ಲೂ 20.20 ಕಿಮೀ 27 .05 ಕಿಮೀ ಮೈಲೇಜ್ ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು cng ಎರಡರಲ್ಲೂ 19.71 ಕಿಮೀ ಮತ್ತು 26.78 ಕಿಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ 5.21 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.
ಮಾರುತಿ ಇಕೋ ಕಾರು 1 ಪೆಟ್ರೋಲ್ ಎಂಜಿನ್ ಮತ್ತು 1 ಸಿ ಏನ್ ಜಿ ಎಂಜಿನ್ ಅನ್ನು ಆಫರ್ ನಲ್ಲಿ ಹೊಂದಿದೆ. ಪೆಟ್ರೋಲ್ ಎಂಜಿನ್ 1197 cc ಆದರೆ CNG ಎಂಜಿನ್ 1197 cc ಆಗಿದೆ. ಇದು ಮ್ಯಾನುವಲ್ ಟ್ರಾನ್ಸ್ಮಿಷನ್ ನೊಂದಿಗೆ ಲಭ್ಯವಿದೆ. Eeco 5 ಆಸನಗಳ 4 ಸಿಲಿಂಡರ್ ಕಾರು ಮತ್ತು 3675mm ಉದ್ದ, 1475 ಅಗಲ ಮತ್ತು 2350 ವೀಲ್‌ಬೇಸ್ ಹೊಂದಿದೆ.