Family Car: ದೊಡ್ಡ ಕುಟುಂಬಕ್ಕಾಗಿ 7 ಆಸನಗಳ ಈ ಕಾರ್ ಲಾಂಚ್ ಮಾಡಿದ ಮಾರುತಿ, 27 Km ಮೈಲೇಜ್.
ಇದೀಗ ನಾವು ಉತ್ತಮ ಮತ್ತು ಸ್ಪೋಟಕ ಮೈಲೇಜ್ ಹೊಂದಿರುವ ಜನಪ್ರಿಯ MPV ಬಗ್ಗೆ ಮಾಹಿತಿ ತಿಳಿಯೋಣ.
Maruti Suzuki Ertiga 7 Seater: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹಲವು ಮಾದರಿಯ ಕಾರ್ ಗಳು ಬಿಡುಗಡೆಯಾಗುತ್ತಿವೆ. ಹಬ್ಬದ ದಿನದಂದು ನೀವು Family Car ಅನ್ನು ಖರೀದಿಸಲು ಬಯಸುತ್ತಿದ್ದರೆ ನೀವು ಈ ಕಾರ್ ನ ಬಗ್ಗೆ ಮಾಹಿತಿ ತಿಳಿಯುದು ಉತ್ತಮ.
ಇದೀಗ ನಾವು ಉತ್ತಮ ಮತ್ತು ಸ್ಪೋಟಕ ಮೈಲೇಜ್ ಹೊಂದಿರುವ ಜನಪ್ರಿಯ MPV ಬಗ್ಗೆ ಮಾಹಿತಿ ತಿಳಿಯೋಣ. ಫ್ಯಾಮಿಲಿ ಜೊತೆಗೆ ಧೀರ್ಘ ಪ್ರವಾಸ ಹೋಗುವ ಸಂದರ್ಭದಲ್ಲಿ ಇದು ಉತ್ತಮವಾಗಿದೆ. ಮಾರುತಿ ಸುಜುಕಿ ಕಂಪನಿಯ ಈ 7 ಆಸನಗಳ ಕಾರಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೆಚ್ಚಾಗಿದ್ದು ದಾಖಲೆಯ ಮಾರಾಟ ಆಗಿರುವುದನ್ನ ನಾವು ಗಮನಿಸಬಹುದು.
Maruti Suzuki Ertiga 7 Seater
ಮಾರುತಿ ಕಂಪನಿ ಹಲವು ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. Maruti Suzuki Ertiga ಗಾತ್ರದಲ್ಲಿ ಸಣ್ಣದಾಗಿರುವುದರ ಹೊರತಾಗಿ, ಹಳ್ಳಿ ಅಥವಾ ಪಟ್ಟಣದಲ್ಲಿ ಓಡಿಸಲು ತುಂಬ ಸುಲಭವಾಗಿರುತ್ತದೆ.
ಇದನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ. Maruti Suzuki Ertiga ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 7 ಆಸನಗಳ ಕಾರು ಮತ್ತು ಅತ್ಯುತ್ತಮ ಮಾರಾಟವಾಗುವ ಕಾರುಗಳ ವಿಭಾಗದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.
Maruti Suzuki Ertiga Price
Maruti Suzuki Ertiga ಕಾರ್ ನ ಎಕ್ಸ್ ಶೋರೂಮ್ ಬೆಲೆ 8 .64 ಲಕ್ಷ ರೂಪಾಯಿ ಆಗಿದೆ. ಹಾಗೆ ಉನ್ನತ ರೂಪಾಂತರದ ಬಗ್ಗೆ ಮಾತನಾಡಿದರೆ ಇದು 13.64 ಲಕ್ಷ ರೂಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ.
Maruti Suzuki Ertiga Mileage And Engine Capacity
ಮಾರುತಿ ಎರ್ಟಿಗಾ 1 .5 ಲೀಟರ್ ಕೆ ಸರಣಿಯ ಎಂಜಿನ್ ಪಡೆದಿದೆ. Maruti Suzuki Ertiga ಪ್ರತಿ ಲೀಟರ್ ಗೆ 21 ಕಿಲೋಮೀಟರ್ ಮೈಲೇಜ್ ಹಾಗೆ ಪ್ರತಿ ಕೆಜಿ CNG ಗೆ 27 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
Maruti Suzuki Ertiga Special Features
Maruti Suzuki Ertiga ದಲ್ಲಿ ಇನ್ಫೋಟೈನೆಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 2 ಏರ್ ಬ್ಯಾಗ್, ಪವರ್ ಸ್ಟಿರಿಂಗ್ ಜೊತೆಗೆ ಮುಂತಾದ ವೈಶಿಷ್ಟಗಳನ್ನು ಪಡೆದುಕೊಂಡಿದೆ.