Suzuki eVX: ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 500 Km ರೇಂಜ್, ಅಗ್ಗದ ಮಾರುತಿ ಕಾರಿನ ಮುಂದೆ ಟಾಟಾ ಕಾರ್ ಕೂಡ ಸೋಲುತ್ತಿದೆ.

ಬರೋಬ್ಬರಿ 500 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಕಾರ್.

Maruti Suzuki eVX Price and Mileage: ಸದ್ಯ ಮಾರುಕಟ್ಟೆಯಲ್ಲಿ Maruti Suzuki ಎಲ್ಲಾ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸೆಲ್ ಕಾಣುತ್ತಿದೆ. ಮಾರುತಿ ಎಸ್ ಯೂವಿಗಳಿಗಂತೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಇದೀಗ ಮಾರುತಿ ಹೊಸ eVX ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಾಗಲೇ ಕಂಪನಿಯು ತನ್ನ ನೂತನ SUV ಬಿಡುಗಡೆಯ ಬಗೆ ಮಾಹಿತಿ ನೀಡಿದೆ. ಸದ್ಯ Maruti Suzuki eVX ನ ಮೈಲೇಜ್ ಹಾಗೂ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.

Maruti Suzuki eVX
Image Credit: V3cars

Maruti Suzuki eVX
ಮಾರುತಿ ಸುಜುಕಿ ಇದೀಗ ಹೊಸ ವಿನ್ಯಾಸದಲ್ಲಿ eVX ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ನೂತನ ಮಾದರಿ ಕೂಪ್ ತರಹದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ನೂತನ SUV ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಮಾರುಕಟ್ಟೆಗೆ ಬರುವ ಬಗ್ಗೆ ವರದಿಯಾಗಿದೆ. ಇನ್ನು ಮುಂದಿನ ಜನವರಿ 2024 ರಲ್ಲಿ ಈ ಮಾರುತಿ ಸುಜುಕಿ eVX ಬಿಡಿಗಡೆಯ ಬಗ್ಗೆ ಕಂಪನಿ ಮಾಹಿತಿ ನೀಡಿದೆ.

ಇನ್ನು ಮಾರುತಿ ಸುಜುಕಿ eVX ಅಳತೆಯ ಬಗ್ಗೆ ಮಾಹಿತಿ ಲಭಿಸಿದೆ. SUV 4,300mm ಉದ್ದ, 1,800mm ಅಗಲ ಮತ್ತು 1,600mm ಎತ್ತರವನ್ನು ಹೊಂದಿದೆ. ದಪ್ಪನಾದ ಕ್ರೋಮ್ ಬಾರ್ ಮತ್ತು ಸಾಮಾನ್ಯ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್‌ ಗಳನ್ನೂ ಹೊಂದಿದ್ದು ಇದರ ನೋಟವು ಬಹಳ ಆಕರ್ಷಣೀಯವಾಗಿದೆ.

Maruti Suzuki eVX Price
Image Credit: Carwale

ಮಾರುತಿ ಸುಜುಕಿ ಇವಿಎಕ್ಸ್ ವಿಶೇಷತೆ
ಕಂಪನಿಯು ಈ ಎಸ್ ಯುವಿಯಲ್ಲಿ LED ಲೈಟಿಂಗ್ ಅಪ್ಗ್ರೇಡ್ ಮಾಡುವ ನಿರೀಕ್ಷೆಯಲ್ಲಿದೆ. ಈ ಕಾರ್ ನಲ್ಲಿ Two-spoke flat-bottom multifunction steering wheel, electrically-adjustable driver’s seat, new display unit on the dashboard, all-new digital infotainment system, new fully-digital instrument cluster ಸೇರಿದಂತೆ ಇನ್ನು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Join Nadunudi News WhatsApp Group

Maruti Suzuki eVX ಬೆಲೆ ಮತ್ತು ಮೈಲೇಜ್
ಈ ನೂತನ ಮಾರುತಿ ಸುಜುಕಿ ಇವಿಎಕ್ಸ್ ನಲ್ಲಿ 60kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಬರೋಬ್ಬರಿ 500 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಮಾರುತಿ ಇವಿಎಕ್ಸ್ ಗೆ ಸುಮಾರು 20 ರಿಂದ 25 ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ಈ ನೂತನ ಮಾದರಿಯು ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿರುವ ಹುಂಡೈ ಕ್ರೇಟಾ ಎಲೆಕ್ಟ್ರಿಕ್, ಮಹಿಂದ್ರಾ XUV400 SUV ಗಳಿಗೆ ಬಾರಿ ಪೈಪೋಟಿ ನೀಡಲಿದೆ.

Join Nadunudi News WhatsApp Group