Maruti eVX: ಕಡಿಮೆ ಬೆಲೆಗೆ 520 Km ಮೈಲೇಜ್ ಕೊಡುವ ಕಾರ್ ಲಾಂಚ್, ಈ ಮಾರುತಿ ಕಾರಿನ ಎಲ್ಲಾ ಕಾರುಗಳು ಡಮ್ಮಿ.
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಮಾರುತಿಯ ನೂತನ ಎಸ್ ಯುವಿ
Maruti Suzuki eVX SUV: ಮಾರುತಿ ಸುಜುಕಿ (Maruti Suzuki) ಕಂಪನಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಹೊಸ ಹೊಸ ಮಾದರಿಯ ಕಾರ್ ಎಸ್ ಯುವಿ ಗಳನ್ನೂ ಬಿಡುಗಡೆ ಮಾಡುವ ಮೂಲಕ ಮಾರುತಿ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಮಾರುತಿ ಈಗಾಗಲೇ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸಿವೆ.
ಎಲ್ಲಾ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸೆಲ್ ಕಾಣುತ್ತಿದೆ. ಮಾರುತಿ ಎಸ್ ಯೂವಿಗಳಿಗಂತೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದೀಗ ಮಾರುತಿ ಹೊಸ eVX ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ನೂತನ ಎಸ್ ಯುವಿ ಬಗೆ ಒಂದಿಷ್ಟು ಮಾಹಿತಿಗಳು ಬಹಿರಂಗವಾಗಿದೆ.
ಮಾರುತಿ ಸುಜುಕಿ eVX ಆಲ್ ಎಲೆಕ್ಟ್ರಿಕ್ ಕೂಪ್
ಮಾರುತಿ ಸುಜುಕಿ ಇದೀಗ ಹೊಸ ವಿನ್ಯಾಸದಲ್ಲಿ ಇವಿಎಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ನೂತನ ಮಾದರಿ ಕೂಪ್ ತರಹದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ನೂತನ ಎಸ್ ಯುವಿ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಮಾರುಕಟ್ಟೆಗೆ ಬರುವ ಬಗ್ಗೆ ವರದಿಯಾಗಿದೆ.
ಸದ್ಯದಲ್ಲೇ ಬಿಡುಗಡೆಯಾಗಲಿದೆ ಮಾರುತಿ ಇವಿಎಕ್ಸ್
ಇನ್ನು ಮುಂದಿನ ಜನವರಿ 2024 ರಲ್ಲಿ ಈ ಮಾರುತಿ ಸುಜುಕಿ eVX ಬಿಡಿಗಡೆಯ ಬಗ್ಗೆ ಕಂಪನಿ ಮಾಹಿತಿ ನೀಡಿದೆ. ಇನ್ನು ಮಾರುತಿ ಸುಜುಕಿ ಇವಿಎಕ್ಸ್ ಅಳತೆಯ ಬಗ್ಗೆ ಮಾಹಿತಿ ಲಭಿಸಿದೆ. SUV 4,300mm ಉದ್ದ, 1,800mm ಅಗಲ ಮತ್ತು 1,600mm ಎತ್ತರವನ್ನು ಹೊಂದಿದೆ. ದಪ್ಪನಾದ ಕ್ರೋಮ್ ಬಾರ್ ಮತ್ತು ಸಾಮಾನ್ಯ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನೂ ಹೊಂದಿದ್ದು ಇದರ ನೋಟವು ಬಹಳ ಆಕರ್ಷಣೀಯವಾಗಿದೆ.
ಮಾರುತಿ ಸುಜುಕಿ ಇವಿಎಕ್ಸ್ ವಿಶೇಷತೆ
ಕಂಪನಿಯು ಈ ಎಸ್ ಯುವಿಯಲ್ಲಿ LED ಲೈಟಿಂಗ್ ಅಪ್ಗ್ರೇಡ್ ಮಾಡುವ ನಿರೀಕ್ಷೆಯಲ್ಲಿದೆ. ಈ ಕಾರ್ ನಲ್ಲಿ ಎರಡು-ಸ್ಪೋಕ್ ಫ್ಲಾಟ್-ಬಾಟಮ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕಲಿ-ಹೊಂದಾಣಿಕೆ ಡ್ರೈವರ್ ಸೀಟ್, ಡ್ಯಾಶ್‌ಬೋರ್ಡ್‌ನಲ್ಲಿ ಹೊಸ ಡಿಸ್ಪ್ಲೇ ಯುನಿಟ್, ಎಲ್ಲಾ ಹೊಸ ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೊಸ ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಇನ್ನು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಮಾರುತಿ ಸುಜುಕಿ ಇವಿಎಕ್ಸ್ ಮೈಲೇಜ್
ಈ ನೂತನ ಮಾರುತಿ ಸುಜುಕಿ ಇವಿಎಕ್ಸ್ ನಲ್ಲಿ 60kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಬರೋಬ್ಬರಿ 500 ರಿಂದ 520 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಈ ನೂತನ ಮಾದರಿಯು ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿರುವ ಹುಂಡೈ ಕ್ರೇಟಾ ಎಲೆಕ್ಟ್ರಿಕ್, ಮಹಿಂದ್ರಾ XUV400 ಎಸ್ ಯೂವಿಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇನ್ನು ಈ ಮಾರುತಿ ಇವಿಎಕ್ಸ್ ಗೆ ಸುಮಾರಿ 20 ರಿಂದ 25 ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ.