CNG Cars: ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುತ್ತೆ ಈ CNG ಕಾರ್, ಒಂದೇ ದಿನದಲ್ಲಿ 50,000 ಬುಕಿಂಗ್.
ಬೈಕ್ ನಂತೆ ಮೈಲೇಜ್ ಕೊಡುವ ಈ CNG ಕಾರ್ ಬುಕ್ ಮಾಡಲು ಜನರು ಮುಗಿಬಿದ್ದಿದ್ದಾರೆ.
Maruti Suzuki CNG Car: ಮಾರುತಿ (Maruti) ಕಂಪನಿ ತನ್ನ ಹೊಸ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಮಾರುತಿ ಕಂಪನಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರನ್ನು ಬಿಡುಗಡೆ ಮಾಡುವ ಮೂಲಕ ಜನಪ್ರಿಯತೆ ಪಡೆದಿದೆ ಎನ್ನಬಹುದು.
ಅದರಲ್ಲಿ ಇತ್ತೀಚೆಗಂತೂ ಮಾರುತಿ ತನ್ನ ಹೊಸ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಇದೀಗ ತನ್ನ ಸಿ ಏನ್ ಜಿ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರ್ ಬೈಕ್ ನಂತೆ ಗರಿಷ್ಟ ಮೈಲೇಜ್ ಕೊಡುವ ಕಾರ್ ಆಗಿದ್ದು ಜನರ ಬೇಡಿಕೆ ಕೂಡ ಬಹಳ ಹೆಚ್ಚಾಗಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್ ಯು ವಿ
ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್ ಯು ವಿ ಯ ಸಿಗ್ಮಾ ಇದರ ರೂಪಾಂತರದ ಬೆಲೆಯು 8.41 ಲಕ್ಷವಾಗಿದೆ. ಇದರ ಡೆಲ್ಟಾ ರೂಪಾಂತರದ ಬೆಲೆಯು ರೂಪಾಯಿ 9.27 ಲಕ್ಷವಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್ S -CNG ಮಾದರಿಯು 28.51 ಕಿ. ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ಈ ಕಾರ್ ಹುಂಡೈ ಎಕ್ಸ್ಟರ್ ಸಿ ಏನ್ ಜಿ ಮಾದರಿಗೆ ಪೈಪೋಟಿ ನೀಡುತ್ತಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್ ಯು ವಿ ಕಾರಿನ ವಿಶೇಷತೆ
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್ ಯು ವಿಯಲ್ಲಿ 1.2 ಲೀಟರ್, ನಾಲ್ಕು ಸಿಲಿಂಡರ್, ನ್ಯಾಚುರಲ್ ಅಸ್ಪರ್ಡ್ ಎಂಜಿನ್ ಅನ್ನು ಹೊಂದಿಗೆ. ಈ ಎಂಜಿನ್ 6000 rpm ನಲ್ಲಿ 88 .50 bhp ಪವರ್ ಮತ್ತು 4400 rpm ನಲ್ಲಿ 113 Nm ಟಾರ್ಕ್ ಅನ್ನು ಉತ್ಪಾದಿಸಿದರೆ ಹೊಸ CNG ಆವೃತ್ತಿಯಲ್ಲಿ 6000 rpm ನಲ್ಲಿ 76 bhp ಪವರ್ ಮತ್ತು 4300 rpm ನಲ್ಲಿ 98.5 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ S -CNG ಎಸ್ ಯು ವಿಯಲ್ಲಿ 7 ಇಂಚಿನ ಸ್ಮಾರ್ಟ್ ಪ್ರೊ ಸಂಪ್ಟನ್ ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೆ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕ, ಕೀಲೆಸ್ ಎಂಟ್ರಿ ಎಲೆಕ್ಟ್ರಿಕಲ್ ಪೋಲ್ಡಬಲ್ ORVM ಗಳು, ಡ್ಯುಯಲ್ ಏರ್ ಬ್ಯಾಗ್ ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ರಿಯರ್ ಡಿಪೋಗರ್ ISOFIX ಅನ್ನು ಹೊಂದಿದೆ.