Maruti: 29 ಕಿಲೋಮೀಟರ್ ಮೈಲೇಜ್ ಕೊಡುವ ಇನ್ನೊಂದು ಅಗ್ಗದ ಕಾರ್ ಪರಿಚಯಿಸಿದ ಮಾರುತಿ, ಭರ್ಜರಿ ಬುಕಿಂಗ್.
29 ಕಿಲೋಮೀಟರ್ ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಜನರು ಫಿದಾ.
Maruti Suzuki Fronx CNG Model: ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ ಜನಪ್ರಿಯ ವಾಹನ ತಯಾರಕ ಕಂಪನಿ ಆಗಿರುವ ಮಾರುತಿ ಸುಜುಕಿ (Maruti Suzuki) CNG ಮಾದರಿಯಲ್ಲಿ ಒಂದು ಹೊಸ ಕಾರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರ್ ನ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿಯೋಣ.
ಮಾರುತಿ ಫ್ರಾಂಕ್ಸ್ CNG ಕಾರ್ ಬೆಲೆ
ಮಾರುತಿ ಸುಜುಕಿ ಇಂಡಿಯಾ ತನ್ನ ಹೊಸ ಮಾದರಿಯ ಫ್ರಾಂಕ್ಸ್ CNG ಕಾರ್ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ ಗ್ರಾಹಕರನ್ನು ಸೆಳೆಯುವ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದೆ. ಮಾರುತಿ ಫ್ರಾಂಕ್ಸ್ CNG ಕಾರ್ ನ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 8 .41 ಲಕ್ಷ ರೂಪಾಯಿ ಆಗಿದೆ.
ಮಾರುತಿ ಫ್ರಾಂಕ್ಸ್ CNG ಕಾರ್ ಎಂಜಿನ್ ಸಾಮರ್ಥ್ಯ
ಮಾರುತಿ ಫ್ರಾಂಕ್ಸ್ CNG 2023 ರ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಈ ಕಾರ್ 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 89.73PS ಗರಿಷ್ಠ ಶಕ್ತಿ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪದಿಸುತ್ತದೆ. CNG ಮೋಡ್ ನಲ್ಲಿ 77.5PS ಹಾಗೂ 98.5Nm ಗೆ ಇಳಿಯುತ್ತದೆ. ಮಾರುತಿ ಫ್ರಾಂಕ್ಸ್ CNG ಕಾರ್ ಪ್ರತಿ ಕೆಜಿ ಗೆ 28.51 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
ಮಾರುತಿ ಫ್ರಾಂಕ್ಸ್ CNG ಕಾರ್ ವೈಶಿಷ್ಟ್ಯತೆ
ಮಾರುತಿ ಫ್ರಾಂಕ್ಸ್ CNG ಅನ್ನು ಸಿಗ್ಮ ಮತ್ತು ಡೆಲ್ಟಾ ಎಂಬ ಎರಡು ರೂಪಾಂತರದಲ್ಲಿ ನೀಡಲಾಗುತ್ತದೆ. ಇದು ಸ್ವಯಂ ಚಾಲಿತ ಕ್ಲೈಮೇಟ್ ಕಂಟ್ರೋಲ್, ಡೆಲ್ಟಾ ರೂಪಾಂತರದಲ್ಲಿ 7.0 ಇಂಚಿನ ಟಚ್ ಸ್ಕ್ರೀನ್ ಇಂಪೊಟೈನ್ಮೆಂಟ್, ವಿದ್ಯುನ್ಮಾನವಾಗಿ ಸರಿಹೊಂದಿಸಬಹುದಾದ ವಿಂಗ್ ಮಿರರ್ ಗಳು ಮತ್ತು ಸ್ಟಿರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ ಗಳನಂತಹ ಸ್ಪೀಕರ್ ವೈಶಿಷ್ಟ್ಯಗಳು ಲಭ್ಯವಿದೆ.