Maruti New SUV: ಪ್ರತಿದಿನ 1000 ಬುಕಿಂಗ್, 28 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್.
28 ಕಿಲೋಮೀಟರ್ ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಹೆಚ್ಚಾಗಿದೆ ಬೇಡಿಕೆ.
Maruti Suzuki FRONX: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಕಾರ್ ಕ್ರೆಜ್ ಹೆಚ್ಚಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಕಾರ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದ್ದರು ಕೂಡ ಕಾರ್ ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ.
ಈಗಂತೂ ವಿಭಿನ್ನ ವಿನ್ಯಾಸದ ಕಾರ್ ಗಳು ಮಾರುಕಟ್ಟೆಯಲ್ಲಿ ಎಂಟ್ರಿ ಕೊಡುತ್ತಾ ಬಾರಿ ಸಂಚಲನ ಮೂಡಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Maruti Suzuki ಕಂಪನಿಯ ಕಾರ್ ಗಳು ಸಾಕಷ್ಟು ವಿವಿಧ ರೂಪಾಂತರದ ಹೊಸ ವಿನ್ಯಾಸದ ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ತನ್ನ ಮಾರಾಟವನ್ನು ಇನ್ನಷ್ಟು ಬೆಳೆಸುತ್ತಿದೆ.
Maruti Suzuki FRONX
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರ್ ಗಳು ಟಾಪ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಯಾವಾಗಲು ಮೊದಲ ಸಾಲಿನಲ್ಲಿರುತ್ತದೆ. ಮಾರುತಿ ಸುಜುಕಿ ಇದೀಗ ಭಾರತೀಯ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು FRONX ಮಾದರಿಯನ್ನು ಪರಿಚಯಿಸಿದೆ. ಮಾರುತಿ Fronx ಮಾದರಿ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ 12000 ಯುನಿಟ್ ಗಳನ್ನೂ ಮಾರಾಟ ಮಾಡಿದೆ.
ಬರೋಬ್ಬರಿ 28 Km ಮೈಲೇಜ್ ನೀಡುವ ಈ ಮಾರುತಿ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ
ಮಾರುತಿ ಫ್ರಾಂಕ್ಸ್ 2023 ರ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಈ ಕಾರ್ 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಈ ಎಂಜಿನ್ 89.73PS ಗರಿಷ್ಠ ಶಕ್ತಿ ಮತ್ತು 113Nm ಗರಿಷ್ಠ ಟಾರ್ಕ್ ಅನ್ನು ಉತ್ಪದಿಸುತ್ತದೆ. ಫ್ರಾಂಕ್ಸ್ CNG ಮೋಡ್ ನಲ್ಲಿ 77.5PS ಹಾಗೂ 98.5Nm ಗೆ ಇಳಿಯುತ್ತದೆ.
ಮಾರುತಿ ಫ್ರಾಂಕ್ಸ್ CNG ಕಾರ್ ಪ್ರತಿ ಕೆಜಿ ಗೆ 28.51 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಮಾರುತಿ ಫ್ರಾಂಕ್ಸ್ ಪೆಟ್ರೋಲ್ ರೂಪಾಂತರವು ಸುಮಾರು 21 ಕಿಲೋಮೀಟರ್ ಮೈಲೇಜ್‌ನೊಂದಿಗೆ ಬರುತ್ತದೆ.ಮಾರುತಿ ಫ್ರಾಂಕ್ಸ್ CNG ಅನ್ನು ಸಿಗ್ಮ ಮತ್ತು ಡೆಲ್ಟಾ ಎಂಬ ಎರಡು ರೂಪಾಂತರದಲ್ಲಿ ನೀಡಲಾಗುತ್ತದೆ.
Maruti Suzuki Fronx Feature
*Leather wrapped steering wheel,
*Premium fabric seat belts,
*Flat bottom steering,
*wireless charger,
*7.0-inch touchscreen infotainment,
*4-speaker sound system
*Wing mirrors and steering wheel-mounted control