Maruti Invicto New: ದೀಪಾವಳಿ ಹಬ್ಬಕ್ಕೆ ಭರ್ಜರಿ 25000 ಬುಕಿಂಗ್ ಕಂಡಿದೆ 23 Km ರೇಂಜ್ ಈ ಮಾರುತಿ ಕಾರ್, ಇನ್ನೋವಾ ಬುಕಿಂಗ್ ಕುಸಿತ.
ದೀಪಾವಳಿ ಹಬ್ಬಕ್ಕೆ ದೇಶದಲ್ಲಿ ದಾಖಲೆಯ ಬುಕಿಂಗ್ ಕಂಡಿದೆ ಈ ಮಾರುತಿ ಕಾರ್.
Maruti Suzuki Invicto Launch: ದೇಶದಲ್ಲಿ Maruti Suzuki ಕಂಪನಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಭಾರತೀಯ ಆಟೋ ವಲಯದಲ್ಲಿ Maruti ಕಂಪನಿಯು ಆಗಾಗ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಇನ್ನು ಮೈಲೇಜ್ ವಿಚಾರವಾಗಿ ಮಾರುತಿ ಸುಜುಕಿ ಕಾರ್ ಗಳು ಹೆಚ್ಚಿನ ಜನಪ್ರಿಯತೆ ಪಡೆದಿವೆ.
ಮೈಲೇಜ್ ನ ಜೊತೆಗೆ ಕಂಪನಿಯು ಗ್ರಾಹಕರ ಬಜೆಟ್ ಬೆಲೆಯಲ್ಲಿಯೇ ಕಾರ್ ಗಳನ್ನೂ ಪರಿಚಯಿಸುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ Toyota Innova ಮಾದರಿಗಳಿಗೆ ಠಕ್ಕರ್ ನೀಡಲು ಮಾರುತಿ ಕಂಪನಿ ತನ್ನ ನೂತನ ಮಾದರಿಯ MPV ಯನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಂಪನಿಯ ಈ ನೂತನ ಮಾದರಿ ಮಾರಾಟದಲ್ಲಿ ಮೇಲುಗೈ ಸಾಧಿಸಿದೆ. ಟೊಯೋಟಾ ಇನ್ನೋವಾ ಮಾದರಿಗೆ ಪೈಪೋಟಿ ನೀಡಲು ಮಾರುತಿ ಯಾವ ಕಾರ್ ಅನ್ನು ಪರಿಚಯಿಸಿದೆ ಎಂದು ನೋಡೋಣ.
Maruti Suzuki Invicto
MARUTI SUZUKI INDIA LTD (MSIL) ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ Maruti Suzuki Invicto MPV ಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಎಕ್ಸ್ ಶೋ ರೂಮ್ ನಲ್ಲಿ ಈ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಬೆಲೆಯೂ 24.79 ಲಕ್ಷ ರೂ. ಆಗಿದೆ. ಈ ಕಾರ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದ್ದು ಎರಡು ರೂಪಾಂತರಗಳ ಬೆಲೆ ವಿಭಿನ್ನವಾಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಝಿಟಾ ರೂಪಾಂತರದ ಬೆಲೆಯೂ ರೂ. 24.84 ಲಕ್ಷ, ಹಾಗೂ ಮಾರುತಿ ಸುಜುಕಿ ಇನ್ವಿಕ್ಟೋ ಆಲ್ಪಾ ಬೆಲೆ ರೂ. 28.42 ಲಕ್ಷ ಆಗಿದೆ.
ಮಾರುತಿ ಸುಜುಕಿ ಇನ್ವಿಕ್ಟೋ ವಿಶೇಷತೆ
ಮಾರುತಿ ಸುಜುಕಿ ಇನ್ವಿಕ್ಟೋ ಕಾರು ನೆಕ್ಸಾ ಬ್ಲೂ, ಮಿಸ್ಟಿಕ್ ವೈಟ್, ಮೆಜೆಸ್ಟಿಕ್ ಸಿಲ್ವರ್ ಮತ್ತು ಸ್ಟಿಲರ್ ಬ್ರೌನ್ಸ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರಿನ ಹೊರ ಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮಾರುತಿ ಇನ್ವಿಕ್ಟೊ ಹೊಸ ಮುಂಭಾಗದ ಗ್ರಿಲ್ ವಿನ್ಯಾಸದೊಂದಿಗೆ ಕ್ರೋಮ್ ಸ್ಲ್ಯಾಟ್ ಗಳು ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಪರಿಷ್ಕೃತ ಹೆಡ್ ಲ್ಯಾಂಪ್ ವಿನ್ಯಾಸ ಹೊಸ ಟೈಲ್ ಲೈಟ್ ಇನ್ ಶರ್ಟ್ ಗಳು ಮತ್ತು ಹೊಸ ಮಿಶ್ರಲೋಹದ ಚಕ್ರಗಳೊಂದಿಗೆ ಕಾಣಿಸುತ್ತದೆ.
Maruti Suzuki Invicto ಎಂಜಿನ್ ಸಾಮರ್ಥ್ಯ ಎಷ್ಟಿದೆ..?
ಇನ್ನೋವಾ ಹೈಕ್ರಾಸ್ ಅನ್ನು 2.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಹೈಬ್ರಿಡ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಇನ್ವಿಕ್ಟೋವನ್ನು ಹೈಬ್ರಿಡ್ ಆಯ್ಕೆಯೊಂದಿಗೆ ಮಾತ್ರ ನೀಡಲಾಗುವುದು. Maruti Suzuki Invicto 23.24 km ನಷ್ಟು ಮೈಲೇಜ್ ನೀಡಲಿದೆ. ಹಾಗೆಯೆ 184 bhp ಪವರ್ ಮತ್ತು 188 Nm ಟಾರ್ಕ್ ನೀಡುವ ಪ್ರಬಲ ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದೆ.
ಇನ್ನು ಸ್ಟ್ರಾಂಗ್-ಹೈಬ್ರಿಡ್ ಆಯ್ಕೆಯನ್ನು e-CVT ಯೊಂದಿಗೆ NIMH ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ದೀಪವಳಿಗೆ ಈ ಕಾರ್ ದಾಖಲೆಯ ಬುಕಿಂಗ್ ಕಂಡಿದ್ದು ಈ ಕಾರಿನ ಮುಂದೆ ಇನ್ನೋವಾ ಕಾರಿಗೆ ಬೇಡಿಕೆ ಕಡಿಮೆ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಮಾರುತಿ ಸುಜುಕಿ ಕಾರ್ 25 ಸಾವಿರ ದೀಪಾವಳಿ ಬುಕಿಂಗ್ ಕಂಡಿದೆ ಎಂದು ಹೇಳಲಾಗುತ್ತಿದೆ.