Maruti Cars: ಒಂದು ಲೀಟರ್ ಗೆ ಭರ್ಜರಿ 40 Km ಮೈಲೇಜ್, ಬಿಡುಗಡೆಗೂ ಮುನ್ನವೇ ಈ ಅಗ್ಗದ ಕಾರಿಗೆ ಭರ್ಜರಿ ಡಿಮ್ಯಾಂಡ್.
40 ಕಿಲೋಮೀಟರ್ ಮೈಲೇಜ್ ಕೊಡುವ ಮಾರುತಿ ಸುಜುಕಿ ಕಾರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Maruti Suzuki Swift Launch: ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ವಿನ್ಯಾಸದ ನವೀಕರಣದೊಂದಿಗೆ ಮಾರುತಿ ಸುಜುಕಿ (Maruti Suzuki) ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಬೇಡಿಕೆ ಇದ್ದರು ಕೂಡ ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಸೆಲ್ ಕಾಣುತ್ತಿದೆ.
ಕಂಪನಿಯು ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಗ್ರಾಹಕರನ್ನು ಸೆಳೆಯುತ್ತದೆ. ಮಾರುಕಟ್ಟೆಯಲ್ಲಿ ಸ್ವಿಫ್ಟ್ ಕಾರುಗಳಿಗೆ ಬಾರಿ ಬೇಡಿಕೆ ಇವೆ. ಇದೀಗ ಮಾರುತಿ ಸುಜುಕಿ ನವೀಕರಿಸಿದ ವಿನ್ಯಾಸದ ಸುಜುಕಿ ಸ್ವಿಫ್ಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ತಯಾರಿ ನಡೆಸುತ್ತಿದೆ.
ಮಾರುತಿ ಹೊಸ ಕಾರ್ ಬಿಡುಗಡೆ
ಶಕ್ತಿಯುತ ಎಂಜಿನ್ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಗ್ರಾಹಕರಿಗೆ ಇಷ್ಟವಾಗಲಿದೆ. ಕಂಪನಿಯು ಶೀಘ್ರದಲ್ಲೇ ಹೊಸ ರೂಪಾಂತರದಲ್ಲಿ ಅತ್ಯಂತ ಜನಪ್ರಿಯ ಕಾರು ಸ್ವಿಫ್ಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕಾರಿನಲ್ಲಿ ಹೊಸ ಎಂಜಿನ್ ಜೊತೆಗೆ 35 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುವುದನ್ನು ಕಾಣಬಹುದಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ವಿಶೇಷತೆ
ನೂತನ ವೈಶಿಷ್ಟ್ಯಗಳನ್ನು ಸುಜುಕಿ ಸ್ವಿಫ್ಟ್ ನಲ್ಲಿ ಅಳವಡಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಎಲ್ಇಡಿ ಅಂಶಗಳು ಮತ್ತು ಮುಂಭಾಗದಲ್ಲಿ ನಯವಾದ ಹೆಡ್ ಲ್ಯಾಂಪ್ ಗಳನ್ನೂ ನೀಡಲಾಗಿದೆ. ಸ್ವಿಫ್ಟ್ ನವೀಕರಿಸಿದ ಮುಂಭಾಗದ ಬಂಪರ್, ಬ್ಲ್ಯಾಕ್ ಔಟ್ ಪಿಲ್ಲರ್‌ಗಳು, ವೀಲ್ ಆರ್ಚ್‌ಗಳ ಮೇಲೆ ಫಾಕ್ಸ್ ಏರ್ ವೆಂಟ್‌ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ನೀಡಲಾಗಿದೆ.
ಒಂದು ಲೀಟರ್ ಗೆ ಭರ್ಜರಿ 35 Km ಮೈಲೇಜ್
ಮಾರುತಿ ಸುಜುಕಿ ಸ್ವಿಫ್ಟ್ ನಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಹೊಸ ಸ್ವಿಫ್ಟ್‌ನಲ್ಲಿ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒದಗಿಸಿದೆ. ಇದರಲ್ಲಿ ಅಳವಡಿಸಲಾದ ಹೈಬ್ರಿಡ್ ತಂತ್ರಜ್ಞಾನದಿಂದ ಈ ಕಾರು 35 ರಿಂದ 40 kmpl ಮೈಲೇಜ್ ನೀಡುತ್ತದೆ. ಇನ್ನು ಕಂಪನಿಯು ಮಾರುತಿ ಸುಜುಕಿ ಸ್ವಿಫ್ಟ್ ನ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ.
ಆದರೆ ಹಳೆಯ ಮಾದರಿಯ ಕಾರ್ ಗಿಂತ ಇದರಲ್ಲಿ ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಕಾರಣ 7 ರಿಂದ 9 ಲಕ್ಷ ಹಣವನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ. ಇನ್ನು 2024 ರ ಫೆಬ್ರವರಿ ವೇಳೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈ ನೂತನ ಸ್ವಿಫ್ಟ್ ಕಾರ್ ನ ಬಗ್ಗೆ ಹೆಚ್ಚು ನಿರೀಕ್ಷೆ ಇರುವ ಕಾರಣ ಬಿಡುಗಡೆಗೊಂಡ ಬಳಿಕ ಬಾರಿ ಬೇಡಿಕೆ ಪಡೆಯಲಿದೆ. ಈ ನೂತನ ಮಾದರಿಯ ಬಿಡುಗಡೆಯಾದರೆ ಕ್ರೆಟಾ ಕಂಪನಿಯ ಕಾರ್ ನ ಬೇಡಿಕೆಗೆ ಹೊಡೆತ ಬೀಳಲಿದೆ.