Maruti 3.0: 28 ಅಗ್ಗದ ಮೈಲೇಜ್ ಕಾರುಗಳನ್ನ ಲಾಂಚ್ ಮಾಡಿದ ಮಾರುತಿ, ಮಾರುತಿ 3.0 ಯೋಜನೆ.
ಮಾರುತಿ ಕಂಪನಿಯ ಹೊಸ ಹೊಸ ಮಾದರಿಯ ಕಾರ್ ಗಳು ಸದ್ಯದಲ್ಲೇ ರಸ್ತೆಗಿಳಿಯಲಿದೆ.
Maruti Suzuki New Model Cars: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಕಾರ್ ಕ್ರೆಜ್ ಹೆಚ್ಚಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಕಾರ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಇನ್ನು ಗ್ರಾಹಕರನ್ನು ಸೆಳೆಯುವ ಕಾರಣಕ್ಕೆ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ.
ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದ್ದರು ಕೂಡ ಕಾರ್ ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ. ಈಗಂತೂ ವಿಭಿನ್ನ ವಿನ್ಯಾಸದ ಕಾರ್ ಗಳು ಮಾರುಕಟ್ಟೆಯಲ್ಲಿ ಎಂಟ್ರಿ ಕೊಡುತ್ತಾ ಬಾರಿ ಸಂಚಲನ ಮೂಡಿಸುತ್ತಿದೆ.
ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ ಮಾರುತಿ ಕಂಪನಿಯ ಕಾರ್ ಗಳು
ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರ್ ಗಳು ಸಾಕಷ್ಟು ವಿವಿಧ ರೂಪಾಂತರದ ಹೊಸ ವಿನ್ಯಾಸದ ನೂತನ ಮಾದರಿಯ್ ಕಾರ್ ಗಳನ್ನೂ ಪರಿಚಯಿಸುತ್ತ ತನ್ನ ಮಾರಾಟವನ್ನು ಇನ್ನಷ್ಟು ಬೆಳೆಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರ್ ಗಳು ಟಾಪ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಯಾವಾಗಲು ಮೊದಲ ಸಾಲಿನಲ್ಲಿರುತ್ತದೆ.
ಮಾರುತಿ 3.0 ಯೋಜನೆ
ಮಾರುತಿ ಸುಜುಕಿ ಇದೀಗ ಭಾರತೀಯ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು ಸಿದ್ದತೆ ನಡೆಸುತ್ತಿದೆ. ಕಂಪನಿಯು ಮಾರುತಿ 3.0 ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯಡಿ ಸುಮಾರು 28 ಮಾದರಿಯ ಕಾರ್ ಗಳನ್ನೂ ಪರಿಚಯಿಸಲು ರೆಡಿಯಾಗುತ್ತಿದೆ. ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು 20 ಲಕ್ಷ ಯುನಿಟ್ ಗಳಷ್ಟು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ. ಕಂಪನಿಯ ಹೊಸ ಹೊಸ ಮಾದರಿಯ ಕಾರ್ ಗಳು ಸದ್ಯದಲ್ಲೇ ರಸ್ತೆಗಿಳಿಯಲಿದೆ.
ಮಾರುಕಟ್ಟೆಗೆ ಕಾಲಿಡಲಿದೆ ಮಾರುತಿ ಸುಜುಕಿ ಕಂಪನಿಯ 28 ಮಾದರಿಯ ಹೊಸ ಕಾರ್
ಮಾರುಕಟ್ಟೆಯಲ್ಲಿ ಈಗಾಗಲೇ ಕಂಪನಿಯು ಮಾರುತಿ ಸುಜುಕಿ ವ್ಯಾಗನಾರ್, ಮಾರುತಿ ಸುಜುಕಿ ಬ್ರೆಝ, ಮಾರುತಿ ಸುಜುಕಿ ಸೆಲೆರಿಯೊ, ಮಾರುತಿ ಸುಜುಕಿ ಎರ್ಟಿಗಾ, ಮಾರುತಿ ಸುಜುಕಿ ಬಲನೋ, ಮಾರುತಿ ಸುಜುಕಿ ಡಿಸೈರ್, ಮಾರುತಿ ಸುಜುಕಿ ಆಲ್ಟೊ, ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಸೆಟಿದಂತೆ ಹಲವು ಮಾದರಿಯ ಕಾರ್ ಗಳಿವೆ. ಈ ಎಲ್ಲ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರ್ ಅನ್ನು 2030 -31 ರ ವೇಳೆ ಸರಿಸುಮಾರು 28 ಮಾದರಿಯ ಹೊಸ ಕಾರ್ ಅನ್ನು ಪರಿಚಯಿಸಲು ಮಾರುತಿ ಸಿದ್ಧತೆ ನಡೆಸುತ್ತಿದೆ.