Suzuki SUV XL7: ಕಡಿಮೆ ಬೆಲೆಗೆ ಫಾರ್ಚುನರ್ ರೀತಿಯ 7 ಸೀಟರ್ ಕಾರು ಪರಿಚಯಿಸಿದ ಮಾರುತಿ, ಅದ್ಭುತ ಮೈಲೇಜ್.
ಅತೀ ಕಡಿಮೆ ಬೆಲೆಗೆ ಫಾರ್ಚುನರ್ ಮಾದರಿಯ SUV ಕಾರ್ ನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಾರುತಿ ಸುಜುಕಿ.
Maruti Suzuki SUV XL7 Car: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಸಂಚಲನ ಮೂಡಿಸುತ್ತಿವೆ. ಮಾರುತಿ ಸುಜುಕಿ ಕಂಪನಿ ತನ್ನ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಮಾರುತಿ ತನ್ನ ಸಾಕಷ್ಟು ಕಾರುಗಳನ್ನು ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ದೊಡ್ಡ SUV ಕಾರು XL7 ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿವೆ. ಪ್ರಸ್ತುತ ಈ ಕಾರು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಟೊಯೋಟಾ ಇನ್ನೋವಾ ಮತ್ತು ಕಿಯಾ ಕ್ಯಾರೆನ್ಸ್ ಗೆ ಪೈಪೋಟಿ ನೀಡಲಿದೆ. ಇದು 7 ಆಸನಗಳನ್ನು ಹೊಂದಿರುವ ಕಾರ್.
ಮಾರುತಿ ಸುಜುಕಿ SUV XL7
ಮಾರುತಿ ಕಂಪನಿಯು ಈ ಕಾರಿನ ಬಿಡುಗಡೆ ದಿನಾಂಕ ಮತ್ತು ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಇದು 1.5-ಲೀಟರ್ K15B ಮೈಲೇಜ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಡ್ರೈವ್ ಆಯ್ಕೆಯನ್ನು ಹೊಂದಿರುತ್ತದೆ. ಇದು 5 ಸ್ಪೀಡ್ ಟ್ರಾನ್ಸ್‌ಮಿಷನ್ ಕಾರಾಗಿದೆ.
ಮಾರುತಿ ಸುಜುಕಿ SUV XL7 ಕಾರಿನ ಬೆಲೆ ಮತ್ತು ವಿಶೇಷತೆ
ಭಾರತದಲ್ಲಿ ಮಾರುತಿ ಸುಜುಕಿ SUV XL7 ಕಾರಿನ ಆರಂಭಿಕ ಬೆಲೆ 11 .50 ಲಕ್ಷ ರೂಪಾಯಿ ಆಗಿದೆ. ಈ ಕಾರಿನಲ್ಲಿ ಮುಂಭಾಗದಲ್ಲಿ 2 ಪ್ರಯಾಣಿಕರಿಗೆ, ಎರಡನೇ ಸಾಲಿನಲ್ಲಿ 3 ಪ್ರಯಾಣಿಕರಿಗೆ ಮತ್ತು ಮೂರನೇ ಸಾಲಿನಲ್ಲಿ 2 ಪ್ರಯಾಣಿಕರಿಗೆ ಆಸನಗಳಿವೆ. ಇದು ಎಲ್ ಐ ಡಿ ಹೆಡ್ಲೈಟ್ಗಳು, ಫಾಗ್ ಲ್ಯಾಂಪ್ಗಳು ಮತ್ತು DRL ಗಳನ್ನು ಹೊಂದಿರುತ್ತದೆ.