Ads By Google

Swift 2024: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಸ್ವಿಫ್ಟ್, ಬೆಲೆ ಕೇವಲ 6 ಲಕ್ಷ, 25km ಮೈಲೇಜ್.

Maruti Swift 2024 price hike

Image Credit: Original Source

Ads By Google

Maruti Suzuki Swift 2024 Launch In India: ಭಾರತೀಯ ಮಾರುಕಟ್ಟೆಯಲ್ಲಿ 19 ವರ್ಷಗಳ ಹಿಂದೆಯೇ Maruti ಕಂಪನಿಯು ತನ್ನ ಅತ್ಯಾಕರ್ಷಕ ಫೀಚರ್ ಇರುವ ಸ್ವಿಫ್ಟ್ ಮಾದರಿಯನ್ನು ಲಾಂಚ್ ಮಾಡಿದೆ. ಕಂಪನಿಯು ನವೀಕರಣ ಫೀಚರ್ನೊಂದಿಗೆ ಮಾರುಕಟ್ಟೆಯಲ್ಲಿ Swift ಅನ್ನು ಪರಿಚಯಿಸುತ್ತ ಇರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಇದೀಗ ನೂತನವಾಗಿ Maruti Swift 2024 ಮಾದರಿಯು ಲಾಂಚ್ ಆಗಿದ್ದು, ಜನರು ಈ ಮಾದರಿಯ ಖರೀದಿಗಾಗಿ ಕ್ಯೂ ನಲ್ಲಿ ನಿಂತಿದ್ದಾರೆ ಎನ್ನಬಹುದು.

ಮೇ 9 2024 ರಂದು ಕಂಪನಿಯು ತನ್ನ ಹೈಬ್ರಿಡ್ ಸ್ವಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಸ್ವಿಫ್ಟ್ ನಲ್ಲಿನ ಅತ್ಯಾಕರ್ಷಕ ಫೀಚರ್ ಹಾಗೂ ನೂತನ ವಿನ್ಯಾಸವನ್ನು ಕಂಡು ಜನರು ಸ್ವಿಫ್ಟ್ ಮಾದರಿಗೆ ಫಿದಾ ಆಗಿದ್ದಾರೆ ಎನ್ನಬಹುದು. ಸದ್ಯ ನಾವೀಗ ನಿನ್ನೆಯಷ್ಟೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಸ್ವಿಫ್ಟ್ ಮಾದರಿಯ ಬಗ್ಗೆ ಮಾಹಿತಿ ತಿಳಿಯೋಣ.

Image Credit: Jagran

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಸ್ವಿಫ್ಟ್
2024 ರ ಮಾರುತಿ ಸುಜುಕಿ ಸ್ವಿಫ್ಟ್ ಹೊಸ Z- ಸರಣಿಯ ಪೆಟ್ರೋಲ್ ಎಂಜಿನ್ ಮತ್ತು ಫ್ರಾಂಕ್ಸ್-ಪ್ರೇರಿತ ಒಳಾಂಗಣವನ್ನು ಗಮನಾರ್ಹವಾಗಿ ಸುಧಾರಿತ ವಿನ್ಯಾಸದೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಹೊಸ ಎಂಜಿನ್ 3-ಸಿಲಿಂಡರ್ ಘಟಕವಾಗಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಇನ್ನು ಹೊಸ ಸ್ವಿಫ್ಟ್ 5,700rpm ನಲ್ಲಿ 81.6 PS ಮತ್ತು 4,300rpm ನಲ್ಲಿ 112Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು 8.2PS ಹೆಚ್ಚು ಪವರ್ ಮತ್ತು 1Nm ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿಯ Z-ಸರಣಿಯ ಗ್ಯಾಸೋಲಿನ್ ಎಂಜಿನ್ 25.72 kmpl ಮೈಲೇಜ್ ನೀಡುವ ನಿರೀಕ್ಷೆಯಿದೆ. ಇದು ಹಿಂದಿನ ಆವೃತ್ತಿಗಿಂತ 3.34 kmpl (ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಮತ್ತು 3.16 (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸುಧಾರಣೆಯಾಗಿದೆ. ಕಾರಿನ ಮುಂಭಾಗವು ನವೀನ ಎಲ್ಇಡಿ ಹೆಡ್ಲೈಟ್ ಗಳು, ಎಲ್-ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಸೂಚಕಗಳಲ್ಲಿ ಹ್ಯಾಲೊಜೆನ್ ಬಲ್ಬ್ ಗಳನ್ನೂ ಒಳಗೊಂಡಿದೆ. ಗ್ರಿಲ್ ಮೇಲ್ಭಾಗದಲ್ಲಿ ‘ಸುಜುಕಿ’ ಲೋಗೋವನ್ನು ಪಡೆಯುತ್ತದೆ ಮತ್ತು LED ಟೈಲ್ ಲೈಟ್ ಗಳನ್ನು ಪಡೆಯುತ್ತದೆ. ಈ ಕಾರಿನ ಸೈಡ್ ಡಿಸೈನ್ ಅತ್ಯುತ್ತಮವಾಗಿದೆ.

Image Credit: Smartprix

ಬೆಲೆ ಕೇವಲ 6 ಲಕ್ಷ, ಭರ್ಜರಿ 25km ಮೈಲೇಜ್
ಇದು 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಹಿಂದಿನ ಬಾಗಿಲುಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹ್ಯಾಂಡಲ್‌ ಗಳನ್ನು ಪಡೆಯುತ್ತದೆ. ಹಿಂಭಾಗವು ಸಿ-ಆಕಾರದLED ಟೈಲ್ ದೀಪಗಳೊಂದಿಗೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಒಳಭಾಗದಲ್ಲಿಯೂ ಸಹ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ಕಾರಿನಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಬಹುದು.

ಇದು ಹಳೆಯ ಮಾದರಿಯಂತೆಯೇ ಬೂಟ್ ಸ್ಪೇಸ್ ಅನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ ಡ್ಯಾಶ್‌ ಬೋರ್ಡ್ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ ಮೆಂಟ್ ಸ್ಕ್ರೀನ್ ಮತ್ತು ಜಬರ್ದಾಸ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವುದನ್ನು ಕಾಣಬಹುದು. ಹೊಸ ಸ್ವಿಫ್ಟ್ ಆರು ಏರ್‌ ಬ್ಯಾಗ್‌ ಗಳನ್ನು ಪ್ರಮಾಣಿತವಾಗಿ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹತ್ತಾರು ಸೇಫ್ಟಿ ಫೀಚರ್ ಅನ್ನು ಕಂಪನಿಯು ನೀಡಿದೆ. ಇನ್ನು ನೀವು ಈ ಐಷಾರಾಮಿ ಸ್ವಿಫ್ಟ್ ಮಾದರಿಯನ್ನು ಜೂನ್ ನಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಕಂಪನಿಯು Swift 2024 ರ ಮಾದರಿಯ ವಿತರಣೆಯನ್ನು ಜೂನ್ ನಲ್ಲಿ ನಿಗದಿಪಡಿಸಿದೆ.

Image Credit: News 24
Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.