Swift Next: ಬಂತು ಬಣ್ಣ ಬಣ್ಣದ ಸ್ವಿಫ್ಟ್ ಕಾರ್, ಹೊಸ ಸ್ವಿಫ್ಟ್ ಕಾರಿನ ಮೈಲೇಜ್ ಕಂಡು ದಂಗಾದ ಜನರು.
ಮಾರುತಿ ಸುಜುಕಿ ಸ್ವಿಫ್ಟ್ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರಲಿದೆ.
Maruti Suzuki Swift Different Colour: Maruti Suzuki India Limited ಭಾರತೀಯ ಆಟೋ ವಲಯದಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿದೆ ಎನ್ನಬಹುದು. ಅದರಲ್ಲೂ ಸದ್ಯದಲ್ಲೇ ಮಾರುತಿ ಬಿಡುಗಡೆಗೊಳಿಸಲಿರುವ Swift ಮಾದರಿ ಜನರ ನಿದ್ದೆಯನ್ನು ಕೆಡಿಸುತ್ತಿದೆ ಎನ್ನಬಹುದು.
ದೇಶಿಯ ಮಾರುಕಟ್ಟೆಯಲ್ಲಿ 2005 ರಲ್ಲಿ ಮಾರುತಿ ಕಂಪನಿಯು ತನ್ನ Swift ಮಾದರಿಯನ್ನು ಪರಿಚಯಿಸಿದೆ. ಸದ್ಯ 2023 ರ ಆಟೋ ಎಕ್ಸ್ಪೋದಲ್ಲಿ ನೂತನ ಸುಧಾರಿತ ಫೀಚರ್ ನ ಮೂಲಕ ಕಂಪನಿಯು ವಿಶೇಷವಾಗಿ Maruti Suzuki swift ಅನ್ನು ಡಿಸೈನ್ ಮಾಡಿದೆ.
ಮಾರುಕಟ್ಟೆಗೆ ಬಂತು ಬಣ್ಣ ಬಣ್ಣದ ಸ್ವಿಫ್ಟ್ ಕಾರ್
ಇನ್ನು ಮೈಲೇಜ್ ವಿಚಾರದಲ್ಲಿ ಹೆಸರುವಾಸಿಯಾಗಿರುವ Maruti ತನ್ನ ಸ್ವಿಫ್ಟ್ ಮಾದರಿಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡಲು ಬಲಿಷ್ಠ ಎಂಜಿನ್ ಅನ್ನು ಅಳವಡಿಸಿದೆ. ಕಂಪನಿಯು ಇದೀಗ ತನ್ನ ಸ್ವಿಫ್ಟ್ ಮಾದರಿಯನ್ನು ನವೀಕರಿಸಿದ ವಿನ್ಯಾಸದೊಂದಿಗೆ ಗ್ರಾಹಕರಿಗೆ ನೀಡಲಿದೆ. ಸ್ವಿಫ್ಟ್ ಕಾರ್ ನ ಹೊಸ ಲುಕ್ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ Suzuki Swift ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಸ್ವಿಫ್ಟ್ ಭಾರತದಲ್ಲಿ 7 ಸಿಂಗಲ್ ಟೋನ್ ಬಣ್ಣಗಳು ಮತ್ತು 3 ಡ್ಯುಯಲ್ ಟೋನ್ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಫ್ರಾಂಟಿಯರ್ ಬ್ಲೂ ಮೆಟಾಲಿಕ್, ಯೆಲ್ಲೋ ಮೆಟಾಲಿಕ್, ಬರ್ನಿಂಗ್ ರೆಡ್ ಪರ್ಲ್ ಮೆಟಾಲಿಕ್, ಫ್ಲೇಮ್ ಆರೆಂಜ್ ಪರ್ಲ್ ಮೆಟಾಲಿಕ್, ಕ್ಯಾರವಾನ್ ಐವರಿ ಪರ್ಲ್ ಮೆಟಾಲಿಕ್, ವೈಟ್ ಮುತ್ತು ಪರ್ಲ್ ಬಣ್ಣಗಳ ಆಯ್ಕೆಯಲ್ಲಿ 2024 ಸುಜುಕಿ ಸ್ವಿಫ್ಟ್ ಗ್ರಾಹಕರ ಆಯ್ಕೆಗೆ ಲಭ್ಯವಾಗಲಿದೆ.
Maruti Suzuki Swift ನ ವಿಶೇಷತೆ ತಿಳಿಯಿರಿ
ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ವಿಭಿನ್ನ ಫೀಚರ್ ನ ಮೂಲಕ ಸ್ಪೋರ್ಟಿಯರ್ ಆಗಿ ಕಾಣುವುದರಲ್ಲಿ ಎರಡು ಮಾತಿಲ್ಲ. ಗ್ಲಾಸ್ ಬ್ಲಾಕ್ ಫಿನಿಷ್ ನೊಂದಿಗೆ ಪ್ರೀಮಿಯಂ ನೋಟವನ್ನು ಹೊಂದಿರುವ Swift ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು. ಪ್ರೊಜೆಕ್ಟರ್ LED ಹೆಡ್ ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಎಲ್ಇಡಿ DRL ಗಳೊಂದಿಗೆ ಸ್ಲೀಕರ್- ಲುಕಿಂಗ್ ಹೆಡ್ ಲ್ಯಾಂಪ್ ಘಟಕಗಳನ್ನು ಹೊಂದಿದ್ದು, ಕಾರ್ ನ ಹೆಡ್ ಲ್ಯಾಂಪ್ ನಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.
ಹೊಸ ಸ್ವಿಫ್ಟ್ ಕಾರಿನ ಮೈಲೇಜ್ ಕಂಡು ದಂಗಾದ ಜನರು
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಐದು ಆಸನಗಳಿರುವ Swift ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ 6 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಬಿಡುಗಡೆಗೂ ಮುನ್ನವೇ ಸುಜುಕಿ ಸ್ವಿಫ್ಟ್ ಜನರಲ್ಲಿ ಬಾರಿ ಕ್ರೇಜ್ ಹುಟ್ಟಿಸುತ್ತಿದೆ.