Suzuki: 35 Km ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಮತ್ತೆ ಹೆಚ್ಚಾಗಿದೆ ಬೇಡಿಕೆ, ಕೆಲವೇ ದಿನದಲ್ಲಿ 50 ಸಾವಿರ ಬುಕಿಂಗ್.
35 ಕಿಲೋ ಮೀಟರ್ ಮೈಲೇಜ್ ಕೊಡುವ ಈ ಮಾರುತಿ ಸುಜುಕಿ ಕಾರಿಗೆ ಬೇಡಿಕೆ ಹೆಚ್ಚಾಗಿದೆ.
Maruti Suzuki Swift Hybrid: ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳು ಅತಿ ಹೆಚ್ಚು ಬೇಡಿಕೆಯಿರುವ ಕಾರ್ ಗಳಾಗಿವೆ. ಇನ್ನು ಮಾರುತಿ ಸ್ವಿಫ್ಟ್ ಕಾರ್ ಗಳ ಬೇಡಿಕೆಗೆ ಅನುಗುಣವಾಗಿ ಮಾರಾಟ ಕೂಡ ಹೆಚ್ಚುತ್ತಿದೆ.
ಇದೀಗ ಮಾರುತಿ ಸುಜುಕಿ ಕಂಪನಿ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಸ್ವಿಫ್ಟ್ ಕಾರ್ (Maruti Swift Car) ಗಳು ಅತಿ ಆಕರ್ಷಣೀಯವಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದೀಗ ಮಾರುತಿ ಸುಜುಕಿ ಕಂಪನಿ ಅತಿ ಕಡಿಮೆ ಬೆಲೆಯಲ್ಲಿ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಸ್ವಿಫ್ಟ್
ಶಕ್ತಿಯುತ ಎಂಜಿನ್ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಕಂಪನಿಯು ಶೀಘ್ರದಲ್ಲೇ ಹೊಸ ರೂಪಾಂತರದಲ್ಲಿ ಅತ್ಯಂತ ಜನಪ್ರಿಯ ಕಾರು ಸ್ವಿಫ್ಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕಾರಿನಲ್ಲಿ ಹೊಸ ಎಂಜಿನ್ ಜೊತೆಗೆ 35 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುವುದನ್ನು ಕಾಣಬಹುದಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಮಾರುತಿ ಸುಜುಕಿ ಸ್ವಿಫ್ಟ್ ವಿಶೇಷತೆ
ನೂತನ ವೈಶಿಷ್ಟ್ಯಗಳನ್ನು ಈ ಕಾರ್ ನಲ್ಲಿ ಅಳವಡಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಎಲ್ಇಡಿ ಅಂಶಗಳು ಮತ್ತು ಮುಂಭಾಗದಲ್ಲಿ ನಯವಾದ ಹೆಡ್ ಲ್ಯಾಂಪ್ ಗಳನ್ನೂ ನೀಡಲಾಗಿದೆ. ಸ್ವಿಫ್ಟ್ ನವೀಕರಿಸಿದ ಮುಂಭಾಗದ ಬಂಪರ್, ಬ್ಲ್ಯಾಕ್ ಔಟ್ ಪಿಲ್ಲರ್‌ಗಳು, ವೀಲ್ ಆರ್ಚ್‌ಗಳ ಮೇಲೆ ಫಾಕ್ಸ್ ಏರ್ ವೆಂಟ್‌ಗಳು ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ನೀಡಲಾಗಿದೆ.
35 Km ಮೈಲೇಜ್ ಕೊಡುವ ಈ ಮಾರುತಿ ಕಾರ್ ನ ಬೇಡಿಕೆ ಹೆಚ್ಚುತ್ತಿದೆ
ಮಾರುತಿ ಸುಜುಕಿ ಸ್ವಿಫ್ಟ್ ನಲ್ಲಿ ಅತ್ಯಂತ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಹೊಸ ಸ್ವಿಫ್ಟ್‌ನಲ್ಲಿ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಒದಗಿಸಿದೆ. ಇದರಲ್ಲಿ ಅಳವಡಿಸಲಾದ ಹೈಬ್ರಿಡ್ ತಂತ್ರಜ್ಞಾನದಿಂದ ಈ ಕಾರು 35 ರಿಂದ 40 kmpl ಮೈಲೇಜ್ ನೀಡುತ್ತದೆ.
ಇನ್ನು ಕಂಪನಿಯು ಮಾರುತಿ ಸುಜುಕಿ ಸ್ವಿಫ್ಟ್ ನ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ ಹಳೆಯ ಮಾದರಿಯ ಕಾರ್ ಗಿಂತ ಇದರಲ್ಲಿ ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಿರುವ ಕಾರಣ 9 ರಿಂದ 11 ಲಕ್ಷ ಹಣವನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.