Maruti: ಈ ಕಾರಣಕ್ಕೆ ಇಕೋ ಮತ್ತು S Presso ಕಾರುಗಳನ್ನ ವಾಪಾಸ್ ಪಡೆಯಲಿದೆ ಕಂಪನಿ, ನಿಮ್ಮ ಬಳಿ ಕಾರ್ ಇದ್ದರೆ ಚೆಕ್ ಮಾಡಿಕೊಳ್ಳಿ.

ಮಾರುತಿ ಸುಜುಕಿ ಎಸ್ -ಪ್ರೆಸ್ಸೋ ಮತ್ತು ಇಕೋ ವ್ಯಾನ್ ಗಳ ಯುನಿಟ್ ಗಳನ್ನೂ ಹಿಂಪಡೆದಿದೆ.

Maruti Suzuki: ಮಾರುತಿ ಸುಜುಕಿ ಕಂಪನಿ ತನ್ನ ವಿವಿಧ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇತ್ತೀಚಿಗೆ ಮಾರುತಿ ಕಂಪನಿಯಿಂದ ಹೊಸ ಹೊಸ ಕಾರುಗಳು ಬಿಡುಗಡೆಯಾಗಿದೆ. ಗ್ರಾಹಕರು ಮಾರುತಿ ಸುಜುಕಿ ಕಾರುಗಳನ್ನು ಹೆಚ್ಚು ಖರೀದಿ ಮಾಡಲು ಇಷ್ಟಪಡುತ್ತಾರೆ.

ಎಸ್ -ಪ್ರೆಸ್ಸೋ ಮತ್ತು ಇಕೋ ವ್ಯಾನ್ ನ 87000 ಕ್ಕೂ ಹೆಚ್ಚು ಯುನಿಟ್ ಗಳನ್ನೂ ಹಿಂಪಡೆದ ಮಾರುತಿ ಸುಜುಕಿ
ಮಾರುತಿ ಸುಜುಕಿ ಎಸ್ -ಪ್ರೆಸ್ಸೋ ಮತ್ತು ಇಕೋ ವ್ಯಾನ್ ನ 87,000 ಕ್ಕೂ ಹೆಚ್ಚು ಯುನಿಟ್ ಗಳನ್ನೂ ಹಿಂಪಡೆದಿದೆ. ಮಾರುತಿ ಸುಜುಕಿ ಸ್ಟಿರಿಂಗ್ ವೀಲ್ ಸೆಟಪ್ ನಲ್ಲಿ ದೋಷ ಹೊಂದಿದ್ದಾರೆ ಈ ವಾಹನಗಳನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ತಯಾರಕ ಕಂಪನಿ ಮಾರುತಿ ಸುಜುಕಿ ಈ ಹೇಳಿಕೆಯನ್ನು ನೀಡಿದೆ.

Maruti Suzuki S-Presso and Eco Van
Image Credit: Indianexpress

ವಾಹನಗಳು ಕಳೆದ ಎರಡು ವರ್ಷಗಳಿಂದ ತಯಾರಿಸಲ್ಪಟ್ಟಿದೆ. ಎಸ್ ಪ್ರೆಸ್ಸೋ ಮತ್ತು ಇಕೋ ವ್ಯಾನ್ ಅನ್ನು ಹೊಂದಿರುವ ವಾಹನ ಮಾಲೀಕರಿಗೆ ಸಮಸ್ಯೆಯನ್ನು ಪರಿಹರಿಸಲು ಹತ್ತಿರದ ವಿತರಕರನ್ನು ಸಂಪರ್ಕಿಸಲು ತಿಳಿಸಲಾಗುವುದು ಎಂದು ಕಾರು ತಯಾರಕರು ಭರವಸೆ ನೀಡಿದ್ದಾರೆ.

ಇದೆ ಸೋಮವಾರ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಮತ್ತು ಇಕೋ ಮಾದರಿಗಳ 87,599 ಯುನಿಟ್ ಗಳನ್ನೂ ಹಿಂಪಡೆಯುವ ಕುರಿತು ಹೇಳಿಕೆಯನ್ನು ನೀಡಿತು. ಈ ವಾಹನಗಳಲ್ಲಿನ ಸ್ಟಿರಿಂಗ್ ಟೈ ರಾಡ್ ನಲ್ಲಿ ದೋಷವಿರುವ ಶಂಕೆ ಕಂಡುಬಂದಿದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ. ಇದು ಅಪರೂಪದ ಸಂದರ್ಭದಲ್ಲಿ ವಾಹನದ ಎಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆಯಲ್ಲಿ ತಿಳಿಯಲಾಗಿದೆ.

maruti suzuki latest news updates
Image Credit: Cardekho

ಎಸ್ -ಪ್ರೆಸ್ಸೋ ಮತ್ತು ಇಕೋ ಮಾದರಿಗಳ ವಾಹನಗಳನ್ನು ಜುಲೈ 5-2021 ಮತ್ತು ಈ ವರ್ಷದ ಫ್ರೆಬ್ರವರಿ 15 ರ ನಡುವೆ ತಯಾರಿಸಲಾಗಿದೆ. ಎರಡು ವರ್ಷಗಳ ಹಿಂದೆ ಮಾರುತಿ ಸುಜುಕಿ ಯು ಸಿಯಾಜ್, ವಿಟಾರಾ ಬ್ರೆಝಾ ಮತ್ತು ಎಸ್ ಎಲ್ 6 ಪೆಟ್ರೋಲ್ ವೆರಿಯಂಟ್ ಗಳು ಸೇರಿದಂತೆ ವಿವಿಧ ಮಾದರಿಗಳ ಸುಮಾರು ಎರಡು ಲಕ್ಷ ಯುನಿಟ್ ಗಳನ್ನೂ ಹಿಂಪಡೆಯಲಾಗಿತ್ತು.

Join Nadunudi News WhatsApp Group

ಮೋಟಾರು ಜನರೇಟರ್ ಘಟಕದ ದೋಷದಿಂದಾಗಿ ಕಾರುಗಳನ್ನು ಹಿಂಪಡೆಯಲಾಗಿತ್ತು. ಅದಕ್ಕೂ ಹಿಂದಿನ ವರ್ಷದಲ್ಲಿ ಮಾರುತಿ 1.34 ಲಕ್ಷಕ್ಕೂ ಹೆಚ್ಚು ವ್ಯಾಗರ್ ಆರ್ ಮತ್ತು ಬಲೆನೊ ಹ್ಯಾಚ್ ಬ್ಯಾಕ್ ಗಳನ್ನೂ ಹಿಂಪಡೆದಿತ್ತು.

Join Nadunudi News WhatsApp Group