Wagon R: ವ್ಯಾಗನಾರ್ ಕಾರ್ ಖರೀದಿಸುವವರಿಗೆ ಇನ್ನುಮುಂದೆ ಸಿಗಲ್ಲ ಈ ಫೀಚರ್, ದೊಡ್ಡ ಬದಲಾವಣೆ.
ಮಾರುತಿ ಸುಜುಕಿ ಕಂಪನಿ ವ್ಯಾಗನ್ ಆರ್ ಕಾರಿನ ಕೆಲವು ಫೀಚರ್ ಗಳನ್ನೂ ತೆಗೆದು ಹಾಕಿದೆ.
Maruti Suzuki Wagon R Car: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗುತ್ತಿದೆ. ಅದರಲ್ಲಿ ಮಾರುತಿ ಕಂಪನಿಯ ಕಾರುಗಳು ಹೆಚ್ಚು ಜನಪ್ರಿಯತೆ ಪಡೆದಿದೆ. ಮಾರುತಿ ಸುಜುಕಿ ಕಂಪನಿ ಇತ್ತೀಚಿಗೆ ತನ್ನ ಮಾದರಿಯಾದ ಬ್ರೆಜ್ಜಾ ಕಾರಿನಿಂದಲೂ ಫೀಚರ್ಸ್ ತೆಗೆದು ಹಾಕಿತ್ತು. ಇದೀಗ ಮಾರುತಿ ಸುಜುಕಿ ಇನ್ನೊಂದು ಕಾರಿನ ಫೀಚರ್ಸ್ ತೆಗೆದು ಹಾಕಿದೆ.
ಮಾರುತಿ ಸುಜುಕಿ ಇದೀಗ ವ್ಯಾಗನ್ ಆರ್ ಕಾರಿನ ಕೆಲವು ಫೀಚರ್ಸ್ ತೆಗೆದುಹಾಕಿದೆ. ಕೇವಲ ಟಾಪ್ ಮಾಡೆಲ್ ಕಾರಿನಲ್ಲಿ ಮಾತ್ರ ಕೆಲವು ಫೀಚರ್ಸ್ ಇರಲಿದೆ. ಯಾವ ವೆರಿಯಂಟ್ ನಿಂದ ಯಾವ ಫೀಚರ್ಸ್ ತೆಗೆಯಲಾಗಿದೆ ಎಂಬ ಮಾಹಿತಿ ತಿಳಿಯೋಣ.
ವ್ಯಾಗನ್ ಕಾರಿನ ಅಗತ್ಯ ಫಿಚರ್ ತೆಗೆದುಹಾಕಿದ ಮಾರುತಿ ಸುಜುಕಿ ಕಂಪನಿ
ಭಾರತದ ಕಾರು ಮಾರುಕಟ್ಟೆಯಲ್ಲಿ ಗರಿಷ್ಠ ಗ್ರಾಹಕರನ್ನು ಹೊಂದಿರುವ ಮಾರುತಿ ಸುಜುಕಿ ಇದೀಗ ಗ್ರಾಹಕರಿಗೆ ಶಾಕ್ ನೀಡಿದೆ. ಮಾರುತಿ ಸುಜುಕಿ ಬ್ರೆಜ್ಜಾ ಬೆನ್ನಲ್ಲೇ ಇದೀಗ ವ್ಯಾಗನ್ ಆರ್ ಕಾರಿನ ಕೆಲವು ಮಾಡೆಲ್ ಕಾರುಗಳಿಂದ ಫೀಚರ್ಸ್ ತೆಗೆಯಲಾಗಿದೆ.
ವ್ಯಾಗನ್ ಆರ್ ಕಾರಿನಲ್ಲಿ ಡಿಫಾಗರ್ ಫೀಚರ್ಸ್ ಬೇಕು ಎಂದರೆ ಗ್ರಾಹಕರು ಟಾಪ್ ಮಾಡೆಲ್ ZXi ಪ್ಲಸ್ ವೆರಿಯಂಟ್ ಆಯ್ಕೆ ಮಾಡಿಕೊಳ್ಳಬೇಕು. ಇತರ ವೆರಿಯಂಟ್ ಗಳಲ್ಲಿ ಡಿಫಾಗರ್ ಲಭ್ಯವಿರುವುದಿಲ್ಲ.ಕಾರಿನ ಹಿಂಭಾಗದ ಗಾಜಿನ ಮೇಲೆ ಗೆರೆಯ ರೂಪದಲ್ಲಿ ಕಾಣುವ ಡಿಫಗಾರ್, ಮಳೆಗಾಲ, ಚಳಿಗಾಲದಲ್ಲಿ ಅತಿ ಅವಶ್ಯಕ.
ಕಾರಿನ ಮುಂಭಾಗದ ಗಾಜಿನ ಮೇಲೆ ಮಂಜು ಕುಳಿತು ಸ್ಪಷ್ಟ ವೀಕ್ಷಣೆಗೆ ಅಡ್ಡಿಯಾಗುವುದನ್ನು ತಡೆಯಲು ವಿಂಡ್ ಶೀಲ್ಡ್ ನಲ್ಲಿ ಅಂಟಿಸಿರುವ ಡಿಫಾಗರ್ ಬಿಸಿಯಾಗಲು ಆರಂಭಿಸುತ್ತದೆ. ಇದರಿಂದ ಗಾಜು ಬಿಸಿಯಾಗಿ ಮಂಜು ಸರಿಯಲಿದೆ. ಇದರಿಂದ ಸ್ಪಷ್ಟ ನೋಟ ಚಾಲಕನಿಗೆ ಸಿಗಲಿದೆ ಮತ್ತು ಸುಗಮ ಚಾಲನೆಗೆ ನೆರವಾಗಲಿದೆ, ಆದರೆ ಬೇಸ್ ಮಾಡೆಲ್ ವ್ಯಾಗನ್ ಆರ್ ಕಾರಿನಲ್ಲಿ ಡಿಫಾಗರ್ ಇರುವುದಿಲ್ಲ, ಇದನ್ನು ತೆಗೆಯಲಾಗಿದೆ.