Maruti New: ಅಬ್ಬಬ್ಬಾ ಬಂದೆ ಬಿಟ್ಟಿತು 35 Km ಮೈಲೇಜ್ ಕೊಡುವ ಹೊಸ ಮಾರುತಿ ಕಾರ್, ಬೆಲೆ ಕೇವಲ 5 ಲಕ್ಷ.
ಮಾರುತಿ ಸುಜುಕಿ ವ್ಯಾಗನಾರ್ ನೂತನ ಮಾದರಿಯ ಬೆಲೆ ಮತ್ತು ಎಂಜಿನ್ ಸಾಮರ್ಥ್ಯ.
Maruti Suzuki Best Mileage Cars: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಗ್ರಾಹಕರಿಗೆ ಆಯ್ಕೆಗೆ ಸಿಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲು ಕಂಪನಿಗಳು ಬಜೆಟ್ ಬೆಲೆಯಲ್ಲಿ ಕಾರ್ ಗಳನ್ನು ಬಿಡುಗಡೆ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಮಾರುತಿ (Maruti Suzuki) ಕಂಪನಿಯ ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿದೆ.
ಕಂಪನಿಯು ಹಲವು ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಾ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೀಗಾ ಕಂಪನಿಯು ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸಿದೆ. ಈ ನೂತನ ಮಾದರಿಯ ಕಾರ್ ನಲ್ಲಿ ಸಾಕಷ್ಟು ವಿಭಿನ್ನ ಫೀಚರ್ ಗಳನ್ನೂ ಅಳವಡಿಸಲಾಗಿದೆ.
ಮಾರುತಿ ಸುಜುಕಿ ವ್ಯಾಗನಾರ್ VX i (Maruti Suzuki WagonR VX i)
ಇದೀಗ ಮಾರುತಿ (Maruti) ಕಂಪನಿ ತನ್ನ ಹೊಚ್ಚ ಹೊಸ ಮಾರುತಿ ವ್ಯಾಗನಾರ್ VX i ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.
ಮಾರುತಿ ಸುಜುಕಿ ವ್ಯಾಗನಾರ್ VX i ವಿಶೇಷತೆ
ಈ ಮಾರುತಿ ಸುಜುಕಿ ವ್ಯಾಗನಾರ್ VX i ಕಾರ್ ನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ ಮೆಂಟ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್ ಆಡಿಯೊ ಸಿಸ್ಟಮ್, ಹಿಲ್-ಹೋಲ್ಡ್ ಅಸಿಸ್ಟ್, ಸ್ಪೀಡ್ ಸೆನ್ಸಿಟಿವ್ ಆಟೋ ಡೋರ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್ ಫೀಚರ್ ಅನ್ನು ಪಡೆಯಬಹುದಾಗಿದೆ.
ಇನ್ನು ವಾಹನ ಚಾಲಕರ ಸುರಕ್ಷತೆಗಾಗಿ ಕಾರ್ ನಲ್ಲಿ ಎರಡು ಏರ್ ಬ್ಯಾಗ್ ಗಳು, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಇಬಿಡಿ ಜೊತೆಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಟೀರಿಂಗ್ ವೀಲ್ ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.
ಮಾರುತಿ ಸುಜುಕಿ ವ್ಯಾಗನಾರ್ ಬೆಲೆ ಮತ್ತು ಎಂಜಿನ್ ಸಾಮರ್ಥ್ಯ
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ. ಮಾರುತಿ ವ್ಯಾಗನಾರ್ VX i ನಿಮಗೆ ಮಾರುಕಟ್ಟೆಯಲ್ಲಿ 5.99 ಲಕ್ಷದಿಂದ 6.80 ಲಕ್ಷದಲ್ಲಿ ಲಭ್ಯವಾಗಲಿದೆ.
35 Km ಮೈಲೇಜ್ ನೀಡಲಿದೆ ಮಾರುತಿ ವ್ಯಾಗನಾರ್ VX i
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ VX i ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25.19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ.