Suzuki: ಬಜೆಟ್ ಬೆಲೆಗೆ ಇನ್ನೊಂದು 7 ಸೀಟ್ ಕಾರ್ ಲಾಂಚ್ ಮಾಡಿದ ಸುಜುಕಿ, 30 Km ಮೈಲೇಜ್.
ಆಕರ್ಷಕ ವಿನ್ಯಾಸದ ಜೊತೆ ಉತ್ತಮ ಮೈಲೇಜ್ ಹೊಂದಿರುವ ಈ ಕಾರ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.
Maruti Suzuki 7 Seater: ಮಾರುತಿ ಸುಜುಕಿ (Maruti Suzuki) ಜನಪ್ರಿಯ ಬ್ರಾಂಡ್ ಆಗಿದೆ. ಪ್ರತಿ ವಾರಕ್ಕೊಂದು ಹೊಸ ಹೊಸ ಮಾದರಿಯ ಕಾರ್ ಅನ್ನು ಕಂಪನಿ ಬಿಡುಗಡೆ ಮಾಡುತ್ತಿದೆ. ಮಾರುತಿ ಸುಜುಕಿ ಈಗಾಗಲೇ ಇಕೋ, ಆಲ್ಟೊ, ಎಕ್ಸ್ಪ್ರೆಸ್ಸೋ, ವ್ಯಾಗನಾರ್, ಸೆಲೆರಿಯೊ ಸೇರಿದಂತೆ ಇನ್ನಿತರ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿತ್ತು.
ಮಾರುತಿ ಸುಜುಕಿ ಕಾರ್ ಗಳು ಬಿಡುಗಡೆಗೊಂಡ ಕೆಲವೇ ದಿನದಲ್ಲಿ ಬಾರಿ ಸೇಲ್ ಕಾಣುತ್ತದೆ. ಇದೀಗ ಮಾರುತಿ ಹೊಸ ಮಾದರಿಯ ಕಾರ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ.
ಮಾರುತಿ ಸುಜುಕಿ XL 7
ಮಹಿಂದ್ರಾ ಥಾರ್ ಜೊತೆ ಸ್ಪರ್ದಿಸಲು ಇದೀಗ ಮಾರುತಿ ಕಂಪನಿ ನೂತನ ಮಾರುತಿ ಸುಜುಕಿ XL 7 ಕಾರ್ ಅನ್ನು ಪರಿಚಯಿಸಲಿದೆ. ಈ ಕಾರ್ ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹೆಚ್ಚಿನ ಸೇಲ್ ಕಂಡಿತ್ತು. ಈ XL 7 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಬೇಡಿಕೆ ಪಡೆಯುವ ಸಾಧ್ಯತೆ ಇದೆ. ಕಂಪನಿಯು ತನ್ನ ಹಿಂದಿನ ಮಾದರಿಯ ಕಾರ್ ಗಳಿಗಿಂತ ಇದರಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದೆ.
ಮಾರುತಿ ಸುಜುಕಿ XL7 ಮೈಲೇಜ್
ಮಾರುತಿ ಸುಜುಕಿ XL7 ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಲಾಗಿದೆ. XL7 1 .5 ಲೀಟರ್ ಎಂಜಿನ್ ಆಯ್ಕೆ ಹೊಂದಿದ್ದು, 104 bhp ಪಾವ್ರ್ ಮತ್ತು 138 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ರತಿ ಲೀಟರ್ ಗೆ ಸುಮಾರು 24 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ XL7 ಬೆಲೆ
ಆಕರ್ಷಕ ವಿನ್ಯಾಸದ ಜೊತೆ ಉತ್ತಮ ಮೈಲೇಜ್ ಹೊಂದಿರುವ ಈ ಕಾರ್ ಭಾರತದಲ್ಲಿ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಮಹಿಂದ್ರಾ ಥಾರ್ ಗೆ 10 ರಿಂದ 16 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಈ ನೂತನ ಮಾರುತಿ ಸುಜುಕಿ XL7 ಮಹಿಂದ್ರಾ ಥಾರ್ ಗೆ ಸ್ಪರ್ಧೆ ನೀಡಲು ಸುಮಾರು 15 .62 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.