Swift EV: ಸ್ವಿಫ್ಟ್ ಕಾರ್ ಪ್ರಿಯರಿಗೆ ಗುಡ್ ನ್ಯೂಸ್, ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ, 350 ಕೀ ಮೀ ಮೈಲೇಜ್.
ಒಂದೇ ಚಾರ್ಜ್ ನಲ್ಲಿ 350 ಕಿಲೋಮೀಟರ್ ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್.
Maruti Swift Electric Car: ಮಾರುತಿ ಸುಜುಕಿ (Maruti Suzuki) ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬ್ರಾಂಡ್ ಆಗಿದೆ. ಈಗಾಗಲೇ ಮಾರುತಿ ಸುಜುಕಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಇನ್ನು ಮಾರುತಿ ಸ್ವಿಫ್ಟ್ ಕಾರ್ ನ ಮೇಲೆ ಹೆಚ್ಚಿನ ಬೇಡಿಕೆ ಇದ್ದು ಮಾರಾಟ ಕೂಡ ಹೆಚ್ಚುತ್ತಿದೆ. ಇದೀಗ ಮಾರುತಿ ಹೊಸ ಕಾರ್ ಬಿಡುಗಡೆಗೊಳಿಸುವ ಬಗ್ಗೆ ವರದಿಯಾಗಿದೆ.
ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ (Maruti Swift Electric Car)
ಮಾರುತಿ ಸುಜುಕಿ ಇದೀಗ ತನ್ನ ಮಾರುತಿ ಸ್ವಿಫ್ಟ್ ನಲ್ಲಿ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈಗಾಗಲೇ ಮಾರುತಿ ಸ್ವಿಫ್ಟ್ ಹೊಸ ರೂಪಾಂತರ ಬಿಡುಗಡೆಯಾಗಿದ್ದು ಇನ್ನು ಹೊಸ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ಬಿಡುಗಡೆಯ ಬಗ್ಗೆ ಕಾರ್ ಪ್ರಿಯರು ಕುತೂಹಲರಾಗಿದ್ದಾರೆ. ಸದ್ಯದಲ್ಲೇ ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೊಳ್ಳಲಿದೆ ಎನ್ನುವ ಬಗ್ಗೆ ವರದಿಯಾಗಿದೆ.
ಇನ್ನು ಟಾಟಾ ಮತ್ತು ಮಹಿಂದ್ರಾ ಕಂಪನಿಯು ತನ್ನ ಹಳೆಯ ಮಾದರಿಯ ಕಾರ್ ಅನ್ನು ಎಲೆಕ್ಟ್ರಿಕ್ ರೂಪಣತರದಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಈ ಕಂಪನಿಗಳಿಗೆ ಪೈಪೋಟಿ ನೀಡಲು ಮಾರುತಿ ಕಂಪನಿ ಸಜ್ಜಾಗಿದೆ ಎನ್ನಲಾಗುತ್ತಿದೆ.
ಇನ್ನು ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ನ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ ಕೆಲ ಮೂಲಗಳಿಂದ ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ನ ಫೀಚರ್ ಆ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ.
ಒಂದೇ ಚಾರ್ಜ್ ನಲ್ಲಿ 350 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್
ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ನಲ್ಲಿ 26KWH ಲಿಕ್ವಿಡ್ ಟೋಟಲ್ ಬ್ಯಾಟರಿ ಪ್ಯಾಕ್ ನ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಸಾಮಾನ್ಯ ಚಾರ್ಜರ್ ನ ಮೂಲಕ ಸುಮಾರು 8 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ವೇಗದ ಚಾರ್ಜರ್ ನ ಮೂಲಕ ಕೇವಲ 2 ಗಂಟೆಗಲ್ಲಿ 80 % ಚಾರ್ಜ್ ಮಾಡಿಕೊಳ್ಳಬಹುದು. ಈ ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ಒಂದೇ ಚಾರ್ಜ್ ನಲ್ಲಿ 350 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ನ ಬೆಲೆ
ಮೊಬೈಲ್ ಸಂಪರ್ಕ, ರೈಡಿಂಗ್ ಮೋಡ್, ಸನ್‌ರೂಫ್, ಪವರ್ ಕಿಟಕಿಗಳು, ಪವರ್ ಸ್ಟೀರಿಂಗ್, ಆಂಟಿಲಾಗ್ ಬ್ರೇಕಿಂಗ್ ಸಿಸ್ಟಮ್, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳ ಜೊತೆಗೆ, ಕ್ರೂಸ್ ಕಂಟ್ರೋಲ್ ಹೊರತುಪಡಿಸಿ, ಎಬಿಎಸ್ ಸೇರಿದಂತೆ ಇನ್ನು ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಇನ್ನು ಈ ಮಾರುತಿ ಸ್ವಿಫ್ಟ್ ಎಲೆಕ್ಟ್ರಿಕ್ ಕಾರ್ ನ ಬೆಲೆ 10 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.