Swift Hybrid: ಕೊನೆಗೂ ಬಂತು ಮಾರುತಿ ಸ್ವಿಫ್ಟ್ ಹೈಬ್ರಿಡ್, ಕಡಿಮೆ ಬೆಲೆ 40 ಕಿಲೋ ಮೀಟರ್ ಮೈಲೇಜ್.
ಅತೀ ಹೆಚ್ಚು ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರ್ ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ.
Maruti Swift Hybrid: ವಿವಿಧ ಪ್ರತಿಷ್ಠಿತ ಆಟೋಮೊಬೈಲ್ ಕಂಪನಿಗಳು ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಎಲ್ಲ ಕಂಪನಿಗಳು ಪೈಪೋಟಿ ನಡೆಸುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯು ಈಗಾಗಲೇ ಸಾಕಷ್ಟು ಮಾದರಿಯ ಕಾರ್ಡ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.
ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಮಾರುತಿ (Maruti) ಕಂಪನಿಯ ಕಾರ್ ಗಳು ಹೆಚ್ಚಿನ ಸೆಲ್ ಕಾಣುತ್ತವೆ. ಕಂಪನಿಯು ತನ್ನ ಸ್ವಿಫ್ಟ್ ರೂಪಾಂತರದಲ್ಲಿ ಅನೇಕ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಅನುಕೂಲವಾಗಲು ಮಾರುತಿ ತನ್ನ ಸ್ವಿಫ್ಟ್ ಖರೀದಿಗೆ ಹೆಚ್ಚಿನ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತದೆ. ಮಾರುತಿ ತನ್ನ ಸ್ವಿಫ್ಟ್ ಅನ್ನು ಹೈಬ್ರಿಡ್ ನಲ್ಲಿ ತರಲು ಸಿದ್ಧತೆ ನಡೆಸುತ್ತಿದೆ.
ಮಾರುಕಟ್ಟೆಗೆ ಬಂತು 40km ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಹೈಬ್ರಿಡ್
ಕಂಪನಿಯು ಮಾರುತಿ ಸ್ವಿಫ್ಟ್ ಹೈಬ್ರಿಡ್ ನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ. ಈ ಕಾರ್ ನಲ್ಲಿ 1 .2 ಲೀಟರ್ ಶಕ್ತಿಶಾಲಿ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅನ್ನು ನೀಡಲಾಗಿದೆ. ಮೊದಲಿನ ರೂಪಾಂತರಕ್ಕೆ ಹೋಲಿಸಿದೆ ಈ ನೂತನ ಮಾರುತಿ ಸ್ವಿಫ್ಟ್ ಹೈಬ್ರಿಡ್ ಹೆಚ್ಚಿನ ಮೈಲೇಜ್ ನೀಡಲಿದೆ. ಮಾರುತಿ ಸ್ವಿಫ್ಟ್ ಹೈಬ್ರಿಡ್ ಪ್ರತಿ ಲೀಟರ್ ಗೆ 40 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಸ್ವಿಫ್ಟ್ ಹೈಬ್ರಿಡ್ ಬೆಲೆ
ಈ ಹೊಸ ಸ್ವಿಫ್ಟ್ ಹೈಬ್ರಿಡ್ ಕಾರ್ ನಲ್ಲಿ ಬ್ಲ್ಯಾಕ್ಡ್-ಔಟ್ ಪಿಲ್ಲರ್‌ಗಳು, ವ್ಹೀಲ್ ಆರ್ಚ್‌ಗಳ ಮೇಲೆ ಫಾಕ್ಸ್ ಏರ್ ವೆಂಟ್‌ಗಳು ಮತ್ತು ಅತ್ಯುತ್ತಮ ವಿಭಾಗದಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ನೀಡಲಾಗಿದೆ. ಇನ್ನು ಈ ಮಾರುತಿ ಸ್ವಿಫ್ಟ್ ಹೈಬ್ರಿಡ್ ಗೆ ಕಂಪನಿಯು ಸುಮಾರು 10 ರಿಂದ 12 ಲಕ್ಷ ನಿಗದಿಪಡಿಸಲಾಗಿದೆ ಎನ್ನಲಾಗುತ್ತಿದೆ. ಇತರ ಕಾರುಗಳಿಗೆ ಹೋಲಿಸಿದರೆ ಈ ಸ್ವಿಫ್ಟ್ ಹೈಬ್ರಿಡ್ ಅನ್ನು ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಈ ಸ್ವಿಫ್ಟ್ ಖರೀದಿ ಸಾಧ್ಯವಾಗಲಿದೆ.