WaganoR EV: ಬಡವರಿಗಾಗಿ ಬಂತು ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್, ಕಡಿಮೆ ಬೆಲೆ ಮತ್ತು 350 Km ಮೈಲೇಜ್.
ಕಡಿಮೆ ಬೆಲೆಗೆ ಸಿಗಲಿದೆ 350 Km ಮೈಲೇಜ್ ನೀಡುವ ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್.
Maruti WaganoR Electric Car: ಭಾರತೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಸತತ ಏರಿಕೆ ಕಾಣುತ್ತಿದೆ. ಹೆಚ್ಚುತ್ತಿರುವ ಕಚ್ಚಾ ತೈಲಗಳ ಬೆಲೆಯ ಕಾರಣದಿಂದಾಗಿ ಜನರು ಎಲೆಕ್ಟ್ರಿಕ್ ವಾಹನದ (Electric Vehicle) ಖರೀದಿಯತ್ತ ಗಮನ ಹರಿಸುತ್ತಿದ್ದಾರೆ.
ಇನ್ನು ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ವಿನ್ಯಾಸದ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಮಾರುತಿ ಸುಜುಕಿ (Maruti Suzuki) ಇನ್ನಿತರ ಎಲೆಕ್ಟ್ರಿಕ್ ಕಾರ್ ಗಳಿಗೆ ಠಕ್ಕರ್ ಕೊಡಲು ಹೊಸ ವಿನ್ಯಾಸದಲ್ಲಿ ಕಾರ್ ಅನ್ನು ಬಿಡುಗಡೆಗೊಳಿಸಿದೆ.
ಬಡವರಿಗಾಗಿ ಬಂತು ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ (Maruti WaganoR Electric Car)
ಮಾರುತಿ ಕಂಪನಿಯು ಈಗಾಗಲೇ ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಮೊತ್ತ ಮೊದಲ ಬಾರಿಗೆ ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಕಳೆದ ವರ್ಷ ನಡೆದ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಇವಿಎಕ್ಸ್ (ಮಾರುತಿ ಇವಿಎಕ್ಸ್ ಎಲೆಕ್ಟ್ರಿಕ್) ಅನ್ನು ಪರಿಚಯಿಸಿದೆ. ಮಾರುತಿ ಇವಿಎಕ್ಸ್ ಬಿಡುಗಡೆಯ ನಂತರ ಇದೀಗ ಕಂಪನಿಯು ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.
ಕಡಿಮೆ ಬೆಲೆಗೆ ಸಿಗಲಿದೆ 350 Km ಮೈಲೇಜ್ ನೀಡುವ ವ್ಯಾಗನಾರ್ ಎಲೆಕ್ಟ್ರಿಕ್
ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ 26 ಕಿಲೋವ್ಯಾಟ್ ಗಂಟೆಗಳ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಾಮಾನ್ಯ ಚಾರ್ಜರ್ ನ ಮೂಲಕ 6 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಇನ್ನು ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ ಅನ್ನು ಫಾಸ್ಟ್ ಚಾರ್ಜರ್ ನ ಮೂಲಕ ಕೇವಲ ಮೂರು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಒಂದೇ ಚಾರ್ಜ್ ನಲ್ಲಿ ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ 350 KM ಮೈಲೇಜ್ ನೀಡುತ್ತದೆ.
ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ ಬೆಲೆ
ಈ ಕಾರ್ ನಲ್ಲಿ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ರೈಡಿಂಗ್ ಮೋಡ್, ಹೊಸ ಡ್ಯಾಶ್‌ಬೋರ್ಡ್, ಸ್ಮಾರ್ಟ್ ವೈಶಿಷ್ಟ್ಯಗಳು, ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಕವರ್ ಸೇರಿದಂತೆ ಇನ್ನಿತರ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಇನ್ನು ಈ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ 10 ರಿಂದ 12 ಲಕ್ಷ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕಂಪನಿಯು ಈ ಮಾರುತಿ ವ್ಯಾಗನಾರ್ ಎಲೆಕ್ಟ್ರಿಕ್ ಕಾರ್ ನ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ.