Maruti Wagon R: 28Km ಮೈಲೇಜ್ ಗೆ ಮನಸೋತ ಜನ, ಈ ಕಡಿಮೆ ಬೆಲೆಯ ಕಾರಿನ ಬುಕಿಂಗ್ ಮಾಡಲು ಜನಸಂದಣಿ
28 ಕಿಲೊಮೀಟರ್ ಮೈಲೇಜ್ ನೀಡುವ ವ್ಯಾಗನ್ ಆರ್ ನ್ಯೂ ಕಾರ್ ನ ಬೆಲೆ ಹಾಗೂ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾಹಿತಿ ತಿಳಿಯಿರಿ.
Maruti Wagon R New Car: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರ್ ಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯ ವಿರುತ್ತದೆ. ಟಾಟಾ, ಮಾರುತಿ ಸುಜುಕಿ(Maruti Suzuki), ಹುಂಡೈ ಸೇರಿದಂತೆ ಇನ್ನಿತರ ಕಂಪನಿಗಳು ಹೊಸ ಹೊಸ ಕಾರ್ ಗಳನ್ನೂ ಮಾರುಕಟ್ಟೆ ಪರಿಚಯಿಸುತ್ತಿರುತ್ತದೆ.ಸಾಮಾನ್ಯ ವರ್ಗದ ಜನರು ಕಾರ್ ಖರೀದಿಸಲು ಕಂಪನಿಗಳು ಬಜೆಟ್ ಬೆಲೆಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ.
ಈಗ ಕಾರ್ ಖರೀದಿಸಲು ಬಯಸುವ ಗ್ರಾಹಕರು ಸಾಮಾನ್ಯವಾಗಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಾಗೂ ಕಡಿಮೆ ಬೆಲೆಯ ಕಾರ್ ಗಳನ್ನೂ ಖರೀದಿ ಮಾಡಲು ಬಯಸುತ್ತಾರೆ.ಇದೀಗ ಪ್ರತಿಷ್ಠಿತ ಕಾರ್ ಕಂಪೆನಿಯಾದ ಮಾರುತಿ ಸುಜುಕಿ ತನ್ನ ಹೊಸ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಮಾರುತಿ ವ್ಯಾಗನ್ ಆರ್ ನ್ಯೂ ಕಾರ್
ಮಾರುತಿ ತನ್ನ ವ್ಯಾಗನ್ ಆರ್ ನ್ಯೂ ಕಾರ್ ಅನ್ನು ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಐಷಾರಾಮಿ ನೋಟದೊಂದಿಗೆ ಬಿಡುಗಡೆ ಮಾಡಿದೆ. ಬಜೆಟ್ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಇತರ ಕಾರುಗಳಿಗೆ ಹೋಲಿಸಿದರೆ ಈ ಕಾರು ಹೆಚ್ಚು ಉತ್ತಮವಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಮಾರುತಿ ಕಂಪನಿಯು ಈ ಕಾರ್ ಗೆ ಗ್ರಾಹಕರನ್ನು ಸೆಳೆಯುವ ವಿನ್ಯಾಸವನ್ನು ನೀಡಿದೆ.
ಮಾರುತಿ ವ್ಯಾಗನ್ ಆರ್ ನ್ಯೂ ವಿಶೇಷತೆ
ಮಾರುತಿ ವ್ಯಾಗನ್ ಆರ್ ನ್ಯೂ ಕಾರಿನ ಒಳಭಾಗ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ಉತ್ತಮ ಆಸನಗಳನ್ನು ಅಳವಡಿಸಲಾಗಿದೆ. ಮಾರುತಿ ವ್ಯಾಗನ್ ಆರ್ ನ್ಯೂ ಕಾರ್ ನಲ್ಲಿ ಡ್ಯುಯೆಲ್ ಪ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್ ನೊಂದಿಗೆ EBD , ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ನೊಂದಿಗೆ ಬರುತ್ತದೆ. ಇದು 7 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ , ನಾಲ್ಕು ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಹಾಗೂ ಸ್ಟಿರಿಂಗ್ -ಮೌಂಟೆಡ್ ಆಡಿಯೋ ಮತ್ತು ಫೋನ್ ನಿಯಂತ್ರಣವನ್ನು ಹೊಂದಿದೆ.
ವ್ಯಾಗನ್ ಆರ್ ನ್ಯೂ ಕಾರ್ ನ ಬೆಲೆ ಹಾಗೂ ಎಂಜಿನ್ ಸಾಮರ್ಥ್ಯ
ಜನರು ಹೆಚ್ಚಾಗಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಕಾರ್ ಅನ್ನು ಖರೀದಿಸಲು ಬಯಸುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ವ್ಯಾಗನ್ ಆರ್ ನ್ಯೂ ಕಾರ್ ಅನ್ನು ಸುಮಾರು 4 . 64 ಲಕ್ಷ ರೂಪಾಯಿಗೆ ಬಿಡುಗಡೆ ಮಾಡಲಾಗಿದೆ. ಇದರ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುದಾದರೆ 1 .2 ಲೀಟರ್ ಎಂಜಿನ್ ಅನ್ನು ಹೊಂದಿದೆ. ವ್ಯಾಗನ್ ಆರ್ ನ್ಯೂ ಕಾರ್ ಪ್ರತಿ ಲೀಟರ್ ಗೆ 28 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ ಕಾರ್ ನಲ್ಲಿ CNG ಆಯ್ಕೆ ಸಹ ಲಭ್ಯವಿದೇ