7 Seater: ಟಾಟಾ ಕಾರುಗಳಿಗೆ ಪೈಪೋಟಿ ಕೊಡಲು ಬಂತು ಕಡಿಮೆ ಬೆಲೆಯ ಮಾರುತಿ 7 ಸೀಟರ್ ಕಾರ್, ಭರ್ಜರಿ ಬುಕಿಂಗ್.
ಕಡಿಮೆ ಬೆಲೆಗೆ 7 ಸೀಟ್ ಕಾರ್ ಮಾರುಕಟ್ಟೆಗೆ ಪರಿಚಯಿಸಿದ ಮಾರುತಿ ಸುಜುಕಿ.
Maruti XL6 7 Seater Car: ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti suzuki) ಕಂಪನಿಯು ಹೊಸ ಹೊರ ರೂಪಾಂತರದ ಕಾರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಮಾರುತಿ ಕಂಪನಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ಮೂಲಕ ತನ್ನ ಮಾರಾಟವನ್ನು ಕೂಡ ಹೆಚ್ಚಿಸಿಕೊಂಡಿದೆ.
ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳಿವೆ. ಇನ್ನು ಟಾಟಾ ಕಂಪನಿಯ ಕಾರ್ ಗಳು ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದೀಗ ಟಾಟಾ ಕಾರ್ ಗಳಿಗೆ ಪೈಪೋಟಿವ್ ನೀಡಲು ಮಾರುತಿ ಸುಜುಕಿ ತನ್ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ.
ಕಡಿಮೆ ಬೆಲೆಯ ಮಾರುತಿ 7 ಸೀಟರ್ ಕಾರ್
ಮಾರುತಿ ಕಂಪನಿ ಇದೀಗ ಮಾರುತಿ XL 6 ಕಾರ್ ಬಿಡುಗಡೆ ಮಾಡಿದೆ. ಈ ಮಾರುತಿ XL 6 ಕಾರ್ ನ ರೂ. 11.56 ದಿಂದ 14.82 ಲಕ್ಷ ನಿಗಧಿಪಡಿಸಲಾಗಿದೆ. ಈ ಕಾರ್ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 1 ಪೆಟ್ರೋಲ್ ಎಂಜಿನ್ ಹಾಗೂ ಇನ್ನೊಂದು CNG ಎಂಜಿನ್ ಆಯ್ಕೆಯನ್ನು ನೀಡಲಿದೆ. ಪೆಟ್ರೋಲ್ ಎಂಜಿನ್ 1462 ಸಿಸಿ ಮತ್ತು ಸಿಎನ್ ಜಿ ಎಂಜಿನ್ 1462 ಸಿಸಿ ಎಂಜಿನ್ ನಿಂದ ನಿಯಂತ್ರಿಸಲಪಟ್ಟಿದೆ. ಇನ್ನು 101.65 bhp ನಿಂದ 136.8 Nm ನ ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ XL 6 ಕಾರ್ ನ ಎಂಜಿನ್ ಸಾಮರ್ಥ್ಯ
ಮ್ಯಾನುವಲ್ ಹಗೂ ಆಟೋಮ್ಯಾಟಿಕ್ ಟ್ರಾನ್ಮಿಷನ್ ಆಯ್ಕೆಯನ್ನು ಹೊಂದಿದ್ದು, 20.27kmpl ನಿಂದ 26.32 km/Kg ವರೆಗೆ ಮೈಲೇಜ್ ನೀಡಲಿದೆ. XL6 ಆರು ಆಸನಗಳ 4 ಸಿಲಿಂಡರ್ ಕಾರು ಮತ್ತು 4445mm ಉದ್ದ, 1775 ಅಗಲ ಮತ್ತು 2740 ವೀಲ್‌ಬೇಸ್ ಹೊಂದಿದೆ.
ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಾಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಬ್ರೇಕ್ ಅಸಿಸ್ಟ್, ಪವರ್ ಡೋರ್ ಲಾಕ್ಸ್, ಥೆಫ್ಟ್ ಕಂಟ್ರೋಲ್, ನಾಲ್ಕು ಏರ್ ಬ್ಯಾಗ್ ಅನ್ನು ಚಾಲಕರ ಸುರಕ್ಷತೆಗಾಗಿ ಅಳವಡಿಸಲಾಗಿದೆ.