Marwari Goat: ಈ ಒಂದು ಕುರಿಯ ಬೆಲೆ 50 ಸಾವಿರ, ಮನೆಯ ಚಿಕ್ಕ ಜಾಗದಲ್ಲಿ ಈ ಕುರಿ ಸಾಕಿದರೆ ನೀವಾಗಬಹುದು ಶ್ರೀಮಂತ ವ್ಯಕ್ತಿ.

ಈ ತಳಿಯ ಮೇಕೆ ಸಾಕಾಣಿಕೆ ಮಾಡಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು.

Marwari Goat Farming: ಹೆಚ್ಚಿನ ಜನರು ಪ್ರಾಣಿ ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಕೆಲ ಜನರು ಪ್ರಾಣಿ ಪ್ರಿಯರಾಗಿದ್ದು ಪ್ರಾಣಿಗಳ ಆರೈಕೆ ಮಾಡಲು ಇಷ್ಟಪಡುತ್ತಾರೆ. ದೇಶದಲ್ಲಿ ರೈತರು ಕೋಳಿ, ಕುರಿ, ಮೇಕೆ ಇತ್ಯಾದಿ ಸಣ್ಣ ಪ್ರಾಣಿಗಳ ಸಾಕಣೆಯನ್ನು ಮಾಡುತ್ತಾರೆ. ಸಣ್ಣ ಪ್ರಾಣಿಗಳ ಸಾಕಾಣಿಕೆ ಖರ್ಚನ್ನು ಕಡಿಮೆ ಮಾಡುತ್ತದೆ.

ಹೀಗಾಗಿ ಜನರು ಸಣ್ಣ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. Goat Farming ಲಾಭದಾಯಕವಾಗಿದೆ. ಪ್ರಾಣಿಗಳ ಸಾಕಾಣಿಕೆಯ ಆದಾಯ ಅವುಗಳ ತಳಿಯ ಮೇಲೆ ಅವಲಂಭಿತವಾಗಿರುತ್ತದೆ. ಇದೀಗ ನಾವು ಮಾರ್ವಾಡಿ ತಳಿಯ ಮೇಕೆಯಿಂದ ಎಷ್ಟು ಲಾಭ ಗಳಿಸಬಹುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Marwari Goat Farming
Image Credit: Cabidigitallibrary

Marwari Goat Breed
ಈ ಮೇಕೆ ಮಧ್ಯಮ ಗಾತ್ರದ್ದಾಗಿದೆ. ಇದರ ದೇಹವು ಉದ್ದನೆಯ ಕೂದಲಿನಿಂದ ಮುಚ್ಚಲ್ಪಟ್ಟಿರುತ್ತದೆ. ಮೇಕೆ ಕಪ್ಪು ಬಣ್ಣದಾಗಿರುತ್ತದೆ, ಕೊಂಬುಗಳು ಚಿಕ್ಕದಾಗಿ ಹಿಂದಕ್ಕೆ ಬಾಗಿರುತ್ತವೆ, ಹಾಗೆ ಕಿವಿಗಳು ಚಪ್ಪಟೆಯಾಗಿರುತ್ತದೆ. ಗಂಡು ಮೇಕೆಯ ತೂಕ 33 ಕೆಜಿ ಹಾಗೂ ಹೆಣ್ಣು ಮೇಕೆ 25 ಕೆಜಿ ತೂಕದ್ದಾಗಿರುತ್ತದೆ. ಈ ಮೇಕೆ ವರ್ಷದಲ್ಲಿ ಎರಡು ಬರಿ ಮಾತ್ರ ಮರಿಗಳಿಗೆ ಜನ್ಮ ನೀಡುತ್ತವೆ.

ಮಾರ್ವಾಡಿ ಮೇಕೆಯ ಸಾಕಣೆ ಹಾಗೂ ಆಹಾರ ಪದ್ದತಿ
ಮಾರ್ವಾಡಿ ತಳಿಯ ಮೇಕೆಯನ್ನು ಸಾಕಣೆ ಮಾಡುದು ತುಂಬ ಸುಲಭ. ಈ ಮೇಕೆಯನ್ನು ಸಣ್ಣ ಜಾಗದ ಮೂಲೆಯಲ್ಲಿ ಸಾಕಬಹುದಾಗಿದೆ. ಮಾರ್ವಾಡಿ ಮೇಕೆಯನ್ನು ಸಾಮಾನ್ಯವಾಗಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಇದರ ಆಹಾರ ಪದ್ಧತಿ ಸಾಮಾನ್ಯ ಮೇಕೆ ಅಂತೆಯೇ ಇದೆ. ಹಾಗೆಯೆ ಈ ಮೇಕೆಯನ್ನು ಯಾವ ಹವಾಮಾನದಲ್ಲಿ ಆದರೂ ಸಾಕಬಹುದಾಗಿದೆ.

Marwari Goat Breed
Image Credit: Sheepfarm

ಮಾರ್ವಾಡಿ ಮೇಕೆ ಬೆಲೆ ಎಷ್ಟು…?
Marwari Goat ಬೆಲೆ ಬಗ್ಗೆ ಮಾತಾಡುದಾದರೆ ಅವುಗಳ ಬೆಲೆ ಮಾರುಕಟ್ಟೆ ಹಾಗೂ ಬೇಡಿಕೆಯನ್ನು ಅವಲಂಭಿಸಿದೆ. ಮಾರ್ವಾಡಿ ತಳಿಯ ವಯಸ್ಕ ಮೇಕೆಯ ಬೆಲೆ 25 ಸಾವಿರದಿಂದ 50 ಸಾವಿರ ವರೆಗೆ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group