Ads By Google

ಸಾಕಷ್ಟು ಅವಕಾಶ ಬಂದರು ಸಹ ಮಾಸ್ಟರ್ ಮಂಜುನಾಥ್ ಮತ್ತೇಕೆ ನಟಿಸಿಲ್ಲ ಗೊತ್ತಾ, ನೋಡಿ

mm manju
Ads By Google

ಮಾಸ್ಟರ್ ಮಂಜುನಾಥ್ ಎಂದೇ ಖ್ಯಾತಿಯಾಗಿರುವ ಮಂಜುನಾಥ್ ನಾಯಕರ್ ಕನ್ನಡ ಚಿತ್ರರಂಗದಲ್ಲಿ ತನ್ನ ಬಾಲ್ಯ ನಟನೆಯಿಂದ ಅದ್ಭುತ ಛಾಪನ್ನು ಮೂಡಿಸಿರುವ ನಟ. `ಮಾಲ್ಗುಡಿ ಡೇಸ್’ ನ ಸ್ವಾಮಿ ಪಾತ್ರದ ಮೂಲಕ ರಾಷ್ಟ್ರವ್ಯಾಪಿ ಪ್ರಸಿದ್ಧಿ ಪಡೆದ ಮಂಜುನಾಥ್ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ಮತ್ತು ಕಾಶ್ಮೀರಿ ಭಾಷೆಯಲ್ಲಿ ಕೂಡ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

ಬಾಲನಟನಾಗಿ ಸುಮಾರು 68 ಚಿತ್ರಗಳಲ್ಲಿ ನಟಿಸಿರುವ ಮಂಜುನಾಥ್, 26 ಕಿರುತೆರೆ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಮತ್ತು 3 ಕಿರುತೆರೆ ಸೀರಿಯಲ್ ಮತ್ತು 5 ಟೆಲಿ ಫಿಲ್ಮ್ಸ ಗಳನ್ನು ನಿರ್ದೇಶಿಸಿದ್ದಾರೆ. `ಸ್ವಾಮಿ’ ಇಂಗ್ಲೀಷ್ ಚಲನಚಿತ್ರಕ್ಕೆ ಆರು ಅಂತರಾಷ್ಟ್ರೀಯ ಮತ್ತು ಒಂದು ರಾಷ್ಟ್ರ ಪ್ರಶಸ್ತಿ ಬಂದಿವೆ.

ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಿನಿಮ್ಯಾಟೋಗ್ರಾಫಿಯಲ್ಲಿ ಡಿಪ್ಲೋಮಾ ಕೂಡ ಪಡೆದಿದ್ದಾರೆ. ಶಂಕರನಾಗ್ ಜೊತೆ `ನೋಡಿ ಸ್ವಾಮಿ ನಾವಿರೋದು ಹೀಗೆ’,ಸಾಂಗ್ಲಿಯಾನ (ಭಾಗ 1 ಮತ್ತು 2) ರಲ್ಲಿ ನಟಿಸಿದ್ದಾರೆ. ಅಮಿತಾಭ ಬಚ್ಚನ್ ರ `ಅಗ್ನಿಪಥ’ ಚಿತ್ರದಲ್ಲಿ ಬಾಲ ಅಮಿತಾಭ ಪಾತ್ರದಲ್ಲಿ ಮಿಂಚಿದ್ದರು. ತಮ್ಮ 19 ನೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು.

ಹೌದು ಕನ್ನಡ ಚಿತ್ರರಂಗದಲ್ಲಿ ಅಜಿತ್ ಎಂಬ ಚಿತ್ರದ ಮೂಲಕ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದ ಮಾಸ್ಟರ್ ಮಂಜುನಾಥ್ ರವರು ನಂತರ ಸಾಂಗ್ಲಿಯಾನ, ಕಿಂದರಿ ಜೋಗಿ, ರಣಧೀರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಅಂದಿನ ಕಾಲದ ಮೋಸ್ಟ್ ಬ್ಯುಸಿಯೆಸ್ಟ್ ಬಾಲನಟರಾಗಿದ್ದರು. ಅದರಲ್ಲಿಯೂ ಮಾಲ್ಗುಡಿ ಡೇಸ್ ಸರಣಿಯಲ್ಲಿನ ಇವರ ಅಭಿನಯ ಸಾಕಷ್ಟು ಖ್ಯಾತಿ ತಂದುಕೊಟ್ಟಿತು.

ತನ್ನ ಮೂರನೇ ವಯಸ್ಸಿನಲ್ಲಿ ನಟಿಸಲು ಪ್ರಾರಂಭಿಸಿದ ಇವರು ಕನ್ನಡ ತೆಲುಗು ಮತ್ತು ಹಿಂದಿ ಭಾಷೆ ಸೇರಿದಂತೆ ಸುಮಾರು 68 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಶಂಕರ್ ನಾಗ್ ಹಾಗೂ ಮಾಸ್ಟರ್ ಮಂಜುನಾಥ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿದ್ದ ಚಿತ್ರಗಳು ಬಹಳ ಅಚ್ಚುಮೆಚ್ಚಾಗಿದ್ದು ಮಂಜುನಾಥ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಶಂಕರನಾಗ್ ಅವರಿಂದ ಎಂದೇ ಹೇಳಬಹುದು. ಆ ಬಳಿಕ ರಾಜ್ಯದ ಮನೆಮಾತಾದ ಈ ಜೋಡಿ ಮುಂದೆ ಅಂಬರೀಶ್ ಹಾಗೂ ರವಿಚಂದ್ರನ್ ಸೇರಿದಂತೆ ಹಲವಾರು ದಿಗ್ಗಜರೊಂದಿಗೆ ನಟನೆಯನ್ನು ಮಾಡಿದರು.

ಕೈತುಂಬಾ ಸಿನಿಮಾಗಳ ಅವಕಾಶ ಇದ್ದರೂ ಕೂಡ ಮಾಸ್ಟರ್ ಮಂಜುನಾಥ್ ಅವರಿಗೆ ತಾನು ಎಜುಕೇಶನ್ ಕಡೆಗೆ ಗಮನ ವಹಿಸಬೇಕು ಎಂದು ಯೋಚಿಸುತ್ತಿದ್ದರು. ಅವಳಿಗೆ ತನ್ನ ಗುರುವಾಗಿ ಸ್ನೇಹಿತನಾಗಿ ತನಗೆ ಎಲ್ಲವೂ ಆಗಿದ್ದಂತಹ ಶಂಕರ್ ನಾಗ್ ಅವರನ್ನು ಮಾಸ್ಟರ್ ಮಂಜುನಾಥ್ ಕಳೆದುಕೊಳ್ಳ ಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ.

ಹೀಗಾಗಿ ಸಂಪೂರ್ಣ ಚಿತ್ರರಂಗದಿಂದ ದೂರ ಉಳಿದಂತಹ ಮಾಸ್ಟರ್ ಮಂಜುನಾಥ್ ಮೂಲತಃ ಬೆಂಗಳೂರಿನವರೇ ಆದ ಕಾರಣ ಬೆಂಗಳೂರು ಯೂನಿವರ್ಸಿಟಿಯಲ್ಲಿ ತಮ್ಮ ಪದವಿಯನ್ನು ಪಡೆದರು. ಅನಂತರ ಹೈಯರ್ ಎಜುಕೇಶನ್ಗಾಗಿ ಮಂಗಳೂರಿಗೆ ತೆರಳಿದ್ದರು.ಹೀಗೆ ಅಭಿನಯಿಸುವ ಆಸೆ ಇದ್ದರೂ ಕೂಡ ಅವಕಾಶ ಸಿಗದ ಕಾರಣ ದೊಡ್ಡವರಾದಮೇಲೆ ಮಾಸ್ಟರ್ ಮಂಜುನಾಥ್ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ತಾಪತ್ರಯಕ್ಕೆ ಹೋಗಲಿಲ್ಲಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field