Maternity Benefit: ಗರ್ಭಿಣಿ ಮಹಿಳೆಯರಿಗೆ ಮಹತ್ವದ ತೀರ್ಪು ಘೋಷಣೆ ಮಾಡಿದ ಹೈಕೋರ್ಟ್, ಹೊಸ ಕಾನೂನು.
ಇದೀಗ ಹೈಕೋರ್ಟ್ ಗರ್ಭಿಣಿ ಮಹಿಳೆಯರ ಹೆರಿಗೆ ಪ್ರಯೋಜನದ ಅರ್ಹತೆಯ ಬಗ್ಗೆ ಮಹತ್ವದ ತೀರ್ಪನ್ನು ನೀಡಿದೆ.
Maternity Benefits For Working Women’s: ಮಹಿಳೆಯರ ರಕ್ಷಣೆಗಾಗಿ ಭಾರತೀಯ ಕಾನೂನಿನಲ್ಲಿ ಸಾಕಷ್ಟು ತಿದ್ದುಪಡಿಯನ್ನು ತರಲಾಗಿದೆ. ಮಹಿಳೆಯರ ರಕ್ಷಣೆಗಾಗಿ ವಿವಿಧ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇನ್ನು ಮಹಿಳಾ ಸಬಲೀಕರಣದತ್ತ ಸರಕಾರ ಹೆಚ್ಚಿನ ಗಮನ ಹರಿಸುತ್ತದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸಿದೆ.
ಇನ್ನು ಪುರುಷರಷ್ಟೇ ಮಹಿಳೆಯರು ಸಮಾನತೆಯನ್ನು ಹೊಂದಬೇಕು ಎಂದು ಸಾಕಷ್ಟು ಕಾನೂನುನನ್ನು ತರಲಾಗಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಮಹಿಳೆಯರ ಹಿತಕ್ಕಾಗಿ ವಿವಿಧ ಯೋಜನೆಗಳಲ್ಲೂ ನೀಡಿ ಅವರಿಗೆ ಆರ್ಥಿಕವಾಗಿ ನೆರವಾಗಲು ಪ್ರಯತ್ನಿಸುತ್ತಿದೆ.
ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಪ್ರಯೋಜನ
ಇನ್ನು ದೇಶದಲ್ಲಿನ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಇನ್ನು ಸರ್ಕಾರ ಮಹಿಳೆಯರಿಗೆ ಒಂದಿಷ್ಟು ಹೆರಿಗೆಯ ಪ್ರಯೋಜನವನ್ನು ನೀಡುತ್ತದೆ. ಇನ್ನು ಉದ್ಯೋಗ ಮಾಡವುತ್ತಿರುವ ಗರ್ಭಿಣಿ ಮಹಿಳೆಯರು ಹೆರಿಗೆಯ ಪ್ರಯೋಜವನ್ನು ಪಡೆಯಲು ಅರ್ಹರೇ ಎನ್ನುವ ಬಗ್ಗೆ ಒಂದಿಷ್ಟು ಗೊಂದಲಗಳು ಏರ್ಪಡುತ್ತವೆ. ಇದೀಗ ದೆಹಲಿ ಹೈಕೋರ್ಟ್ ಗರ್ಭಿಣಿ ಮಹಿಳೆಯರ ಹೆರಿಗೆ ಪ್ರಯೋಜನದ ಅರ್ಹತೆಯ ಬಗ್ಗೆ ಮಹತ್ವದ ತೀರ್ಪನ್ನು ನೀಡಿದೆ.
ಗರ್ಭಿಣಿ ಮಹಿಳೆಯರ ಹೆರಿಗೆ ಪ್ರಯೋಜನದ ಅರ್ಹತೆಯ ಬಗ್ಗೆ ಮಹತ್ವದ ಆದೇಶ ನೀಡಿದ ಹೈಕೋರ್ಟ್
ಹೆರಿಗೆಯ ಪ್ರಯೋಜನಗಳು ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ಶಾಸನಬದ್ಧ ಹಕ್ಕು ಅಥವಾ ಒಪ್ಪಂದದ ಸಂಬಂಧದಿಂದ ಮಾತ್ರ ಉದ್ಭವಿಸುವುದಿಲ್ಲ. ಆದರೆ ಕುಟುಂಬವನ್ನು ಪ್ರಾರಂಭಿಸಲು ಮತ್ತು ಜನ್ಮ ನೀಡಲು ಆಯ್ಕೆ ಮಾಡುವುದು ಮಹಿಳೆಯ ಗುರುತು ಮತ್ತು ಘನತೆಯ ಮೂಲಭೂತ ಮತ್ತು ಅವಿಭಾಜ್ಯ ಅಂಗವಾಗಿದೆ. ಗುತ್ತಿಗೆ ಮಹಿಳಾ ಉದ್ಯೋಗಿಗಳು ಹೆರಿಗೆ ಪ್ರಯೋಜನ ಕಾಯ್ದೆಯಡಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ತೀರ್ಪನ್ನು ನೀಡಿದೆ.
ಉದ್ಯೋಗ ಹಾಗು ತಾಯ್ತನ ಎರಡು ಹಕ್ಕು ಮಹಿಳೆಯರಿಗೆ ಸೀಮಿತ
ಮಹಿಳೆಯರ ಕೆಲಸದ ವಾತಾವರಣವು ಯಾವುದೇ ಅಡೆತಡೆ ಇಲ್ಲದೆ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಿರಬೇಕು. ವೃತ್ತಿ ಮತ್ತು ತಾಯ್ತನ ಎರಡನ್ನು ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇರುತ್ತದೆ. ಇವೆರಡನ್ನೂ ಆಯ್ಕೆ ಮಾಡುವಲ್ಲಿ ಅವರಿಗೆ ಒತ್ತಾಯ ಹೇರಬಾರದು. ಸಂವಿಧಾನವು ಮಹಿಳೆಗೆ ಮಗುವಿಗೆ ಜನ್ಮ ನೀಡುವ ಮತ್ತು ಜನ್ಮ ನೀಡದಿರುವ ಸ್ವಾತಂತ್ರ್ಯವನ್ನು ನೀಡಿದೆ.
ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಹೆರಿಗೆ ರಜೆ ಹಾಗು ಪ್ರಯೋಜನಗಳನ್ನು ನೀಡಲಾಗುತ್ತದೆ. ವಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಮಹಿಳೆಯರಿಗೆ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಅವರ ಮೇಲೆ ಯಾವುದೇ ರೀತಿಯ ಒತ್ತಾಯವನ್ನು ಹೆರಬಾರದು. ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಗುರುವಾರ ಹೊರಡಿಸಿದ ಆದೇಶದಲ್ಲಿ ಹೇಳಿದ್ದಾರೆ.