Maternity Leave: ಇನ್ಮುಂದೆ ಈ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ, ನರೇಂದ್ರ ಮೋದಿ ಘೋಷಣೆ.

ಇನ್ಮುಂದೆ ಈ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ

Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ ಹರಿಸುತ್ತದೆ ಎನ್ನಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸಿ ಮಹಿಳೆಯರಿಗೆ ಸಾಕಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನು ಪುರುಷರಷ್ಟೇ ಮಹಿಳೆಯರು ಸಮಾನತೆಯನ್ನು ಹೊಂದಬೇಕು ಎಂದು ಸಾಕಷ್ಟು ಕಾನೂನುನನ್ನು ತರಲಾಗಿದೆ.

ಇನ್ನು ಕೇಂದ್ರ ಸರ್ಕಾರ ಕೂಡ ಮಹಿಳೆಯರ ಹಿತಕ್ಕಾಗಿ ವಿವಿಧ ಯೋಜನೆಗಳಲ್ಲೂ ನೀಡಿ ಅವರಿಗೆ ನೆರವಾಗಲು ಪ್ರಯತ್ನಿಸುತ್ತಿದೆ. ಅದರಲ್ಲೂ ದೇಶದ ಗರ್ಭಿಣಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಇದೀಗ ಈ ಕೆಲಸ ಮಾಡುವ ಮಹಿಳೆಯರಿಗೆ ಹೊಸ ಹೆರಿಗೆ ರಜಾ ನೀತಿಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಮಹಿಳೆಯರು ಹೊಸ ರಜಾ ನೀತಿಯಡಿ ಹೆಚ್ಚಿನ ರಜೆಯನ್ನು ಪಡೆಯಬಹುದು.

Maternity Leave In India
Image Credit: acko

ಇನ್ಮುಂದೆ ಈ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ
ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಸುದ್ದಿ ನೀಡಿದ್ದಾರೆ. ಇದುವರೆಗೆ ಗರ್ಭಿಣಿಯರಿಗೆ ಆರು ತಿಂಗಳ ಕಾಲ ಹೆರಿಗೆ ರಜೆ ನೀಡಲಾಗುತ್ತಿತ್ತು. ಬಾಡಿಗೆ ತಾಯ್ತನದ ಬಗ್ಗೆಯೂ ಮೋದಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಕಾಲ ವೇತನ ಸಹಿತ ಹೆರಿಗೆ ರಜೆ ನೀಡುತ್ತವೆ. ಆಯಾ ರಾಜ್ಯಗಳಲ್ಲಿ ರಜಾ ದಿನಗಳಲ್ಲಿ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರಬಹುದು. ಹೆಚ್ಚಿನ ರಜೆಗಳು ಆರು ತಿಂಗಳವರೆಗೆ ಇರುತ್ತದೆ. ಇನ್ನುಮುಂದೆ ಬಾಡಿಗೆ ತಾಯ್ತನ ಪಡೆಯುವವರಿಗೆ ಹೆಚ್ಚಿನ ರಜೆ ನೀಡಲಾಗುತ್ತದೆ.

Maternity Leave Latest Update
Image Credit: Trinidadexpress

ನರೇಂದ್ರ ಮೋದಿ ಘೋಷಣೆ
ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು ಗರ್ಭಿಣಿಯಾದ ನಂತರ ಹೆರಿಗೆ ರಜೆ ಪಡೆಯಲು ಅವಕಾಶ ನೀಡುವ ಕಾನೂನು ಕೂಡ ಇದೆ. ಕೆಲವು ಕಂಪನಿಗಳು ಪುರುಷ ಉದ್ಯೋಗಿಗಳಿಗೆ ಪಿತೃತ್ವ ರಜೆ ನೀಡುತ್ತವೆ. ಆದರೆ ಮಹಿಳೆಯರಿಗೆ ಹೋಲಿಸಿದರೆ ರಜೆ ದಿನಗಳು ತುಂಬಾ ಕಡಿಮೆ. ಇವು ಹೆಚ್ಚು ಕಡಿಮೆ ಆಯಾ ಸಂಸ್ಥೆಗಳ ನೀತಿಯನ್ನು ಅವಲಂಬಿಸಿವೆ.

Join Nadunudi News WhatsApp Group

ಇನ್ನು ಮುಂದೆ ಅವರಿಗೂ ಆರು ತಿಂಗಳ ಹೆರಿಗೆ ರಜೆಯನ್ನೂ ನೀಡಲಾಗುತ್ತದೆ. ಇತ್ತೀಚೆಗಷ್ಟೇ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಬಾಡಿಗೆ ತಾಯ್ತನದ ಮೂಲಕ ತಾಯಂದಿರಾಗುವವರಿಗೆ ಬಾಡಿಗೆ ತಾಯ್ತನ ಪದ್ಧತಿಯಲ್ಲಿ ಹೆರಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಬಾಡಿಗೆ ತಾಯ್ತನದ ಮೂಲಕ ತಾಯಂದಿರಾಗುವ ಮಹಿಳಾ ಸರ್ಕಾರಿ ನೌಕರರು ಇನ್ನು ಮುಂದೆ 6 ತಿಂಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದು ಎಂದು ಕೇಂದ್ರ ಇತ್ತೀಚೆಗೆ ಘೋಷಿಸಿದೆ.

Maternity Leave Latest Update
Image Credit: Livelaw

Join Nadunudi News WhatsApp Group