Timed Out Rule: ಏನಿದು ಟೈಮ್ಡ್‌ ಔಟ್‌ ರೂಲ್‌ ನಿಯಮ…? ಮಾನವೀಯತೆ ಮರೆತರೆ ಬಾಂಗ್ಲಾ ಆಟಗಾರರು.

ಮೈಧಾನಕ್ಕೆ ಬರದೇ ನಿಯಮದ ಪ್ರಕಾರ ಔಟ್ ಆದ ಶ್ರೀಲಂಕಾದ ಮ್ಯಾಥ್ಯೂಸ್‌

Timed Out In Cricket : ಸದ್ಯ ಭಾರತದಲ್ಲಿ ನಡೆಯುತ್ತಿರುವ ICC World Cup 2023 ರೋಚಕ ತಿರುವು ಪಡೆಯುತ್ತಿದೆ ಎನ್ನಬಹುದು. ಈ ಬಾರಿ ಯಾವ ತಂಡ ಕಪ್ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿ ಪ್ರತಿ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ನೋಡುತ್ತಿದ್ದಾರೆ.

ಇನ್ನು ಏಕದಿನ ವಿಶ್ವ ಕಪ್ ಪಂದ್ಯದಲ್ಲಿ ನಿನ್ನೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಸೋಮವಾರ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಹಣಾಹಣಿಯಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

sl vs ban
Image Credit: TV9marathi

ಮೈಧಾನಕ್ಕೆ ಬರದೇ ಔಟ್ ಆದ ಮ್ಯಾಥ್ಯೂಸ್‌
ಅನಿರೀಕ್ಷಿತವಾಗಿ ಶ್ರೀಲಂಕಾದ ಆಲ್ ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಔಟಾಗಿದ್ದಾರೆ. 25 ನೇ ಓವರ್‌ ನಲ್ಲಿ ಈ ಘಟನೆ ನಡೆದಿದೆ. ಸದಿರ ಸಮರ 24.2 ನೇ ಓವರ್‌ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಮ್ಯಾಥ್ಯೂಸ್ ನಿಗದಿತ ಅವಧಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ.

ಬಾಂಗ್ಲಾ ಆಟಗಾರರು ಅಂಪೈರ್‌ ಬಳಿ ಹೋಗಿ ವಿಳಂಬದ ಬಗ್ಗೆ ಮನವಿ ಮಾಡಿದರು. ಫೀಲ್ಡ್ ಅಂಪೈರ್‌ ಗಳು ಚರ್ಚಿಸಿ ಮ್ಯಾಥ್ಯೂಸ್ ಅವರನ್ನು ಟೈಮ್ ಔಟ್ ಎಂದು ಔಟ್ ಮಾಡಿದರು. ಮ್ಯಾಥ್ಯೂಸ್ ಒಂದು ಎಸೆತ ಎದುರಿಸದೆ ಪೆವಿಲಿಯನ್ ತಲುಪಿದರು. ಕ್ರಿಕೆಟ್ ತಿಹಾಸದಲ್ಲಿ ಆಟಗಾರನೊಬ್ಬ ಸಮಯ ಮೀರಿದ ಕಾರಣ ವಜಾಗೊಂಡಿರುವುದು ಇದೆ ಮೊದಲು ಎನ್ನಬಹುದು.

ಮ್ಯಾಥ್ಯೂಸ್‌ ಗೇಮ್ ನಿಂದ ಔಟ್ ಆಗಲು ಕಾರಣವೇನು..?
24 ನೇ ಓವರ್‌ನ ಎರಡನೇ ಎಸೆತದಲ್ಲಿ ಸದೀರ ಸಮರವಿಕ್ರಮ ಔಟಾದರು. ಬಳಿಕ ಮ್ಯಾಥ್ಯೂಸ್ ಕ್ರೀಸ್ ಗೆ ಬಂದರು. ಅವರು ಮುಂದಿನ ಚೆಂಡನ್ನು ಎದುರಿಸಬೇಕಿತ್ತು. ಆದರೆ ಈ ಬಾರಿ ಮ್ಯಾಥ್ಯೂಸ್ ಹಾಕಿ ಹೆಲ್ಮೆಟ್ ಪಟ್ಟಿ ಸರಿಯಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ತನಗೆ ಮತ್ತೊಂದು ಹೊಸ ಹೆಲ್ಮೆಟ್ ಬೇಕು ಎಂದು ಡಗೌಟ್ ನಲ್ಲಿದ್ದ ತನ್ನ ಸಹ ಆಟಗಾರರಿಗೆ ಸೂಚಿಸಿದರು.

Join Nadunudi News WhatsApp Group

Angelo Mathews
Image Credit: Kannada Prabha

ಈ ಪ್ರಕ್ರಿಯೆಯಲ್ಲಿ ಶ್ರೀಲಂಕಾದ ಬದಲಿ ಆಟಗಾರ ಅವರಿಗೆ ಹೊಸ ಹೆಲ್ಮೆಟ್ ತಂದರು. ಈ ಪ್ರಕ್ರಿಯೆಯಲ್ಲಿ ಮ್ಯಾಥ್ಯೂಸ್ 3 ನಿಮಿಷಗಳ ಗಡಿ ದಾಟಿದರು. ಅದೇ ಸಮಯದಲ್ಲಿ ಬಾಂಗ್ಲಾದೇಶದ ಆಟಗಾರರು ಸಮಯ ಮೀರಿದೆ ಎಂದು ಅಂಪೈರ್ ಗೆ ಹೇಳಿದ್ದಾರೆ ಈ ವೇಳೆ ಅಂಪೈರ್ ಮ್ಯಾಥ್ಯೂಸ್‌ ಅವರಿಗೆ ಔಟ್ ನೀಡಿದ್ದಾರೆ.

ಏನಿದು ಟೈಮ್ಡ್‌ ಔಟ್‌ ರೂಲ್‌ ನಿಯಮ…?
ಭಾರತೀಯ ಕ್ರಿಕೆಟ್ ನಿಯಮದ ಪ್ರಕಾರ, ಆಟಗಾರನು ಔಟಾದರೂ ಅಥವಾ ಗಾಯಗೊಂಡು ನಿವೃತ್ತಿಯಾದರೂ, ಮುಂದಿನ ಆಟಗಾರನು ಬ್ಯಾಟ್ ತೆಗೆದುಕೊಂಡು ಮೂರು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅದು ಸಂಭವಿಸದಿದ್ದರೆ, ಹೊಸದಾಗಿ ನಮೂದಿಸಿದ ಬ್ಯಾಟರ್ ಅನ್ನು ಸಮಯ ಮೀರಿದೆ ಎಂದು ಹೇಳಿ ಔಟ್ ಎಂದು ಘೋಷಿಸಲಾಗುತ್ತದೆ.

Join Nadunudi News WhatsApp Group