Ads By Google

Medicine Price Hike: ಇಂದಿನಿಂದ ಈ ಔಷಧಗಳ ಬೆಲೆಯಲ್ಲಿ ಏರಿಕೆ, ಯಾವ ಔಷದಗಳ ಬೆಲೆ ಹೆಚ್ಚಾಗಿದೆ ನೋಡಿ

Medicine Price Hike From April 1st

Image Credit: Original Source

Ads By Google

Medicine Price Hike From April 1st: ಇದೀಗ 2024 -25 ರ ಹಣಕಾಸು ವರ್ಷ ಆರಂಭವಾಗಿದೆ. ಇಂದಿನಿಂದ ದೇಶದಲ್ಲಿ ಅನೇಕ ರೀತಿಯ್ ಹೊಸ ಹೊಸ ನಿಯಮಗಳು ಬದಲಾಗುವುದು ಸಹಜ. ನಿಯಮಗಳ ಬದಲಾವಣೆಯ ಜೊತೆಗೆ ವಿವಿಧ ರೀತಿಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಲಿದೆ.

ಇಂದಿನಿಂದ ಜನರು ತಮ್ಮ ಅಗತ್ಯ ವಸ್ತುಗಳಿಗೆ ಹೆಚ್ಚಿನ ಹಣವನ್ನು ನೀಡಿ ಖರೀದಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಸದ್ಯ ಜನರಿಗೆ ಅಗತ್ಯವಾಗಿರುವ ಔಷಧಗಳ ಬೆಲೆಯಲ್ಲಿ ಕೂಡ ಹೆಚ್ಚಳವಾಗಲಿದೆ. ಇಂದಿನಿಂದ ದೇಶದಲ್ಲಿ ಔಷಧಗಳ ಬೆಲೆ ದುಬಾರಿಯಾಗಲಿದೆ. ಜನಸಾಮಾನ್ಯರು ಇನ್ನುಮುಂದೆ ಔಷಧಗಳಿಗೂ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

Image Credit: Sentinelassam

ಇಂದಿನಿಂದ ಅಗತ್ಯ ಔಷಧಗಳ ಬೆಲೆಯಲ್ಲಿ ಏರಿಕೆ
ವರದಿಯ ಪ್ರಕಾರ ಸರ್ಕಾರವು ಸಗಟು ಬೆಲೆ ಸೂಚ್ಯಂಕದಲ್ಲಿ (WPI) ಹಲವಾರು ಬದಲಾವಣೆಗಳನ್ನು ಮಾಡಿದೆ. ಮತ್ತು ಸರ್ಕಾರವು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು (NLEM) ಶೇ. 0.0055 ರಷ್ಟು ಹೆಚ್ಚಿಸಿದೆ. ಕೆಲವೇ ದಿನಗಳಲ್ಲಿ ಔಷದಗಳ ಬೆಲೆ ಏರಿಕೆಯಾಗಿದೆ. ದೇಶದಲ್ಲಿ ಏಪ್ರಿಲ್ 1 ರಿಂದ 800 ಔಷಧಿಗಳ ಬೆಲೆ ಏರಿಕೆಯಾಗಲಿದೆ. ಈ ಔಷಧಿಗಳ ಪಟ್ಟಿಯು ನೋವು ನಿವಾರಕಗಳು, ಪ್ರತಿಜೀವಕಗಳು ಮತ್ತು ಸೋಂಕುನಿವಾರಕಗಳನ್ನು ಒಳಗೊಂಡಿದೆ.

2022 ರಲ್ಲಿ, ಔಷಧಿಗಳ ಬೆಲೆಗಳನ್ನು 12 ಮತ್ತು 10 ಪ್ರತಿಶತದಷ್ಟು ಹೆಚ್ಚಿಸಲಾಯಿತು. ವರದಿಯ ಪ್ರಕಾರ, ಔಷಧಿಗಳ ಬೆಲೆ ಏರಿಕೆಗೆ ಅನುಮೋದನೆಯನ್ನು ವರ್ಷಕ್ಕೊಮ್ಮೆ ಮಾತ್ರ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ, ಔಷಧದಲ್ಲಿ ಬಳಸುವ ಪದಾರ್ಥಗಳ ಬೆಲೆಯೂ ಹೆಚ್ಚಾಗಿದ್ದು, 15 ರಿಂದ 130 ಕ್ಕೆ ಏರಿಕೆಯಾಗಿದೆ. ಪ್ಯಾರಸಿಟಮಾಲ್ ಬೆಲೆ ಶೇ.130 ರಷ್ಟು ಹೆಚ್ಚಿದ್ದರೆ, ಎಕ್ಸಿಪಿಯಂಟ್ ಗಳ ಬೆಲೆ ಶೇ.18-262 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಯಾವ ಯಾವ ಔಷಧಗಳ ಬೆಲೆ ಏರಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Drugdeliverybusiness

ಯಾವ ಔಷದಗಳ ಬೆಲೆ ಹೆಚ್ಚಾಗಲಿದೆ…?
ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್, ಆಂಟಿ-ಎನಿಮಿಯಾ, ವಿಟಮಿನ್ ಗಳು ಮತ್ತು ಕಬ್ಬಿಣದಂತಹ ಪ್ರತಿಜೀವಕಗಳನ್ನು ಒಳಗೊಂಡಿರುವ ಔಷದಗಳ ಬೆಲೆಯಲ್ಲಿ ಹೆಚ್ಛ್ಲವಾಗಲಿದೆ. ಕೋವಿಡ್-19 ರೋಗದಲ್ಲಿ ಬಳಸುವ ಔಷಧಿಗಳು ಮತ್ತು ಸ್ಟೀರಾಯ್ಡ್‌ ಗಳು ಸಹ ದುಬಾರಿಯಾಗಲಿದೆ. ಪ್ಯಾರಸಿಟಮಾಲ್‌ ನ ಬೆಲೆ 130 ಪ್ರತಿಶತ ಮತ್ತು ಎಕ್ಸಿಪೈಂಟ್‌ ಗಳ ಬೆಲೆ 18-262 ರಷ್ಟು ಹೆಚ್ಚಾಗಿದೆ.

ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್ ಸೇರಿದಂತೆ ದ್ರಾವಕಗಳು ಕ್ರಮವಾಗಿ 263 ಪ್ರತಿಶತ ಮತ್ತು 83 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಮಧ್ಯಂತರ ಬೆಲೆಗಳು ಶೇಕಡಾ 11 ರಿಂದ ಶೇಕಡಾ 175 ರಷ್ಟು ಹೆಚ್ಚಾಗಿದೆ. ಪೆನ್ಸಿಲಿನ್ ಜಿ 175 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಇಂದಿನಿಂದ ಅಂದರೆ ಏಪ್ರಿಲ್ 1 ರಿಂದ ಈ ಎಲ್ಲ ಔಷದಗಳ ಬೆಲೆ ದುಬಾರಿಯಾಗಲಿದೆ.

Image Credit: Scroll
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in