Ads By Google

ನಟಿ ಮೀನಾ ಗಂಡನ ಸಾವಿಗೆ ಕಾರಣ ಬಯಲು, ಮನೆಯಲ್ಲಿದ್ದ ಪರಿವಾಳವೇ ಕಾರಣವಾ ನೋಡಿ ಸತ್ಯ ಹೊರಕ್ಕೆ.

meena actress kannada
Ads By Google

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೀನಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು, ಬರೋಬ್ಬರಿ ಎರಡು ದಶಕಗಳ ಕಾಲ ಚಿತ್ರರಂಗವನ್ನು ಆಳಿದ್ದಾರೆ ಅಂತಾನೇ ಹೇಳಬಹುದು. ಚೆಲುವ, ಪುಟ್ನಂಜ, ಮೊಮ್ಮಗ, ಸಿಂಹಾದ್ರಿಯ ಸಿಂಹ, ಶ್ರೀ ಮಂಜುನಾಥ, ಮೈ ಆಟೋಗ್ರಾಫ್, ಗೌಡ್ರು, ಸ್ವಾತಿ ಮುತ್ತು, ಹೀಗೆ ಸಾಲು ಸಾಲು ಕನ್ನಡ
ಸಿನಿಮಾಗಳಲ್ಲಿ ಅಭಿನಯಿಸಿದ ಈ ನಟಿ ಒಂದು ಪ್ರಕಾರ ಹೇಳುವುದಾದರೆ ಕನ್ನಡತಿಯೇ ಆಗಿಬಿಟ್ಟಿದ್ದಾರೆ.

ಆದರೆ ಇದೀಹ ಬಹುಭಾಷಾ ನಟಿ ಮೀನಾ ಪತಿ ಪತಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೀನಾ ಪತಿ ವಿದ್ಯಾಕುಮಾರ್ ಸಾವಿಗೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ವಿದ್ಯಾಸಾಗರ್ ಸಾವಿಗೆ ಪರಿವಾಳಗಳು ಕಾರಣವೆಂಬ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ.

ವಿದ್ಯಾಸಾಗರ್ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ಜನವರಿಯಲ್ಲಿ ಕುಟುಂಬ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ಸೋಂಕು ಉಲ್ಬಣಗೊಂಡಿದ್ದರೂ ವಿದ್ಯಾಸಾಗರ್ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಹೀಗಾಗಿ ಕೆಲವು ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಸೋಂಕಿನ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗಲಿಲ್ಲ ಎನ್ನಲಾಗಿದೆ.

ಈ ಮಧ್ಯೆ ಮತ್ತೊಂದು ಮಾಹಿತಿ ಹೊರ ಬಿದ್ದಿದ್ದು ವಿದ್ಯಾಸಾಗರ್ ಸಾವಿಗೆ ಪಾರಿವಾಳಗಳು ಕಾರಣ ಎನ್ನಲಾಗುತ್ತಿದೆ. ಮೀನಾ ಮನೆಯಲ್ಲಿ ಬಹಳಷ್ಟು ಪಾರಿವಾಳಗಳಿದೆಯಂತೆ. ಅವುಗಳ ತಾಜ್ಯದ ಕಾರಣ ಮನೆಯಲ್ಲಿದ್ದ ಎಲ್ಲರಿಗೂ ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆಯ ಬಳಿಕ ಗುಣ ಮುಖರಾಗಿದ್ದರು.

ಆದರೆ, ಮೀನಾ ಅವರ ಪತಿ ವಿದ್ಯಾ ಸಾಗರ್ ಅವರಿಗೆ ಕೋವಿಡ್ ಬಂದಾಗ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಬದಲಾಯಿಸಬೇಕಾಗುತ್ತದೆ ಎಂದಿದ್ದರು. ಆದರೆ ದಾನಿಗಳು ಸಿಗದೆ ವಿದ್ಯಾಸಾಗರ್ ಇಂದು ಮೃತಪಟ್ಟಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field