Meera Jasmine Marriage: ದಿಡೀರ್ ಮದುವೆಯಾದ ಬಳಿಕ ಮೀರಾ ಜಾಸ್ಮಿನ್ ಚಿತ್ರರಂಗದಿಂದ ದೂರ ಉಳಿದದ್ದು ಏಕೆ.

Actress Meera Jasmin Marriage Controversy: ದಕ್ಷಿಣ ಭಾರತದ ಖ್ಯಾತ ನಟಿ ಮೀರಾ ಜಾಸ್ಮಿನ್ (Meera Jasmin) ಈ ಹಿಂದೆ ತಮ್ಮ ಮದುವೆಯ ವಿಚಾರವಾಗಿ ವಿವಾದಗಳಿಗೆ ಸಿಲುಕಿದ್ದರು. ನಟಿ ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಇದೀಗ ನಟಿ ಮತ್ತೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟಿ ಮೀರಾ ಜಾಸ್ಮಿನ್ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿದೆ. ನಟಿ ಮೀರಾ ಜಾಸ್ಮಿನ್ ಅವರ ಮದುವೆಯ ಸಮಯದಲ್ಲಿ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.

Meera Jasmine stayed away from the film industry after Didir's marriage.
Image Credit: instagram

ಮೀರಾ ಜಾಸ್ಮಿನ್ ಅನಿಲ್ ಜೊತೆ ಮದುವೆಯಾಗಿ ದುಬೈ ನಲ್ಲಿ ನೆಲೆಸಿದ್ದರು. ಅನಿಲ್ ಜಾನ್ ಟಿಟೂಸ್ (Anil Jahn Titus) ಅವರಿಗೆ ಈ ಹಿಂದೆ ಮದುವೆ ಆಗಿದ್ದು, ಪೊಲೀಸ್ ರಕ್ಷಣೆ ಪಡೆದು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ಪತ್ನಿ ಜೊತೆ ಡಿವೋರ್ಸ್ ಫೈನಲ್ ಆಗುವ ಮುನ್ನವೇ ಮೀರಾ ಜಾಸ್ಮಿನ್ ಅವರನ್ನು ಅನಿಲ್ ಮದುವೆಯಾಗಿದ್ದರು.

ಯಾವುದೇ ಕ್ಷಣದಲಿ ಮೊದಲ ಪತ್ನಿಯ ಸಂಬಂಧಿಕರು ಮದುವೆಗೆ ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ಭಯದಿಂದ ಪೊಲೀಸ್ ರಕ್ಷಣೆ ಪಡೆದು ಮದುವೆಯಾಗಿದ್ದರು. ನಂತರ ನೋಂದಣಿ ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿ ಅವರ ವಿವಾಹವನ್ನು ನೋಂದಾಯಿಸಲು ನಿರಾಕರಿಸಿದ್ದರು.

Actress Meera Jasmine who is already married to a married boy
Image Credit: instagram

ಕೆಲವು ಸಮಯದ ನಂತರ ಪತಿ ಅನಿಲ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡರು. ನಂತರ ಮೀರಾ ಜಾಸ್ಮಿನ್ ನಟನೆಯನ್ನು ಬಿಟ್ಟು ದುಬೈ ಗೆ ಹೋಗಿದ್ದರು.

Join Nadunudi News WhatsApp Group

ಕುಟುಂಬದವರ ವಿರುದ್ಧ ಕೇಸ್ ದಾಖಲಿಸಿದ ಮೀರಾ
ನಟಿ ಮೀರಾ ಜಾಸ್ಮಿನ್ ಕುಟುಂಬದವರ ವಿರುದ್ಧ ಕೇಸ್ ದಾಖಲಿಸಿದ್ದರು. ನನ್ನ ಕುಟುಂಬ ಸದಸ್ಯರು ನನ್ನ ಹಣವನ್ನು ತೆಗೆದುಕೊಂಡು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟಿ ಮೀರಾ ಜಾಸ್ಮಿನ್ ಡಿಐಜಿ ಅವರಿಗೆ ದೂರು ನೀಡಿದ್ದರು.

Actress Meera Jasmine has decided to act in films again
Image Credit: instagram

ಚಿತ್ರರಂಗಕ್ಕೆ ಮರಳುತ್ತಾರಾ ಮೀರಾ ಜಾಸ್ಮಿನ್
ಸಾಕಷ್ಟು ವಿವಾದಗಳ ಬಳಿಕ ನಟಿ ಮೀರಾ ಜಾಸ್ಮಿನ್ ಕೆಲವು ಸಮಯಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Meera Jasmine went abroad with her husband after her husband divorced her first wife.
Image Credit: instagram

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೀರಾ ಜಾಸ್ಮಿನ್ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ನಟಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ನಟಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನಲಾಗುತ್ತಿದೆ.

Join Nadunudi News WhatsApp Group