Megha Shetty And Aniruddha: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನಿರುದ್ದ್ ಮತ್ತು ಮೇಘಾ ಶೆಟ್ಟಿ.

Actress Megha Shetty And Actor Aniruddha Jatkar: ಜೀ ಕನ್ನಡ ಚಾನಲ್ ಅಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ಜೋಡಿ ಅನಿರುದ್ದ (Aniruddha Jatkar) ಮತ್ತು ಮೇಘಾ ಶೆಟ್ಟಿ (Megha Shetty).

ಹಲವು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ನಟ ಅನಿರುದ್ದ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಗೆ ಬಂದರು. ನಾಯಕ ನಟನಿಲ್ಲದ ಜೊತೆ ಜೊತೆಯಲಿ ಧಾರಾವಾಹಿ ಪ್ರೇಕ್ಷಕರಿಗೆ ಸ್ವಲ್ಪ ದಿನಗಳವರೆಗೂ ಬೇಸರ ತಂದಿತ್ತು. ಆದರೆ ಈಗ ನಟ ಅನಿರುದ್ದ ಜಾಗಕ್ಕೆ ನಟ ಹರೀಶ್ ರಾಜ್ ಅವರ ಪ್ರವೇಶ ಆಗಿ ಈ ಸೀರಿಯಲ್ ಬಹಳ ಚೆನ್ನಾಗಿ ಮೂಡಿಬರುತ್ತಿದೆ.

Megha Shetty and Anirudh Jatkar appeared together again
Image Credit: instagram

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಜೊತೆ ಜೊತೆಯಲಿ ಜೋಡಿ
ಇದೀಗ ಜೊತೆ ಜೊತೆಯಲಿ ಜನಮೆಚ್ಚಿದ ಜೋಡಿ ಅನಿರುದ್ದ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ನಟ ಅನಿರುದ್ದ ಅವರ ಹುಟ್ಟುಹಬ್ಬದ ಪ್ರಯುಕ್ತ ಮೇಘಾ ಶೆಟ್ಟಿ ಕೇಕ್ ಸಮೇತರಾಗಿ ಬಂದಿದ್ದರು. ಅನಿರುದ್ದ ಮತ್ತು ಮೇಘಾ ಶೆಟ್ಟಿ ಇಬ್ಬರು ಸೇರಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಮತ್ತೆ ಈ ಜೋಡಿಯನ್ನು ಜೊತೆಯಾಗಿ ನೋಡಿ ಖುಷಿ ಪಟ್ಟಿದ್ದಾರೆ ಎನ್ನಬಹುದು.

Megh Shetty cut the cake with Anirudh Jatkar
Image Credit: instagram

ನಟ ಅನಿರುದ್ದ ಮತ್ತು ಮೇಘಾ ಶೆಟ್ಟಿ
ಧಾರಾವಾಹಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ಮೇಘಾ ಶೆಟ್ಟಿ ಅವರು ಬಿಡುವು ಮಾಡಿಕೊಂಡು ನಟ ಅನಿರುದ್ದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Join Nadunudi News WhatsApp Group

Actress Megha Shetty, who is busy with serial movie shooting, took a break and celebrated actor Anirudda's birthday.
Image credit: instagram

ಇವರಿಬ್ಬರ ಕೇಕ್ ಕಟಿಂಗ್ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಈ ಜೋಡಿ ಮತ್ತೆ ತೆರೆ ಮೇಲೆ ಬಂದರೆ ಚೆನ್ನಾಗಿ ಇರುತ್ತಿತ್ತು ಎಂದು ಕೇಳಿದ್ದಾರೆ. ನಟ ಅನಿರುದ್ದ ಅವರು ಮತ್ತೆ ನಟಿಸಲು ಬರುತ್ತಿದ್ದಾರೆ. ಆದರೆ ಮೇಘಾ ಶೆಟ್ಟಿ ಅವರಿಗೆ ಜೋಡಿಯಾಗಿ ಅಲ್ಲ. ಸೂರ್ಯವಂಶ ಎಂಬ ಹೊಸ ಧಾರಾವಾಹಿಯಲ್ಲಿ ನಟ ಅನಿರುದ್ದ ಮೋಡಿ ಮಾಡಲಿದ್ದಾರೆ.

Join Nadunudi News WhatsApp Group