Ads By Google

ಜೊತೆ ಜೊತೆ ಧಾರಾವಾಹಿಯಲ್ಲಿ ಅನಿರುದ್ ಗಿಂತ ಮೇಘಾ ಶೆಟ್ಟಿಗೆ ಕೊಡುತ್ತಿರುವ ಸಂಭಾವನೆ ವೈರಲ್.

megha shetty seriel
Ads By Google

ನಮ್ಮ ಕನ್ನಡ ಚಿತ್ರರಂಗದಲ್ಲಿ ಅನೇಕ ನಟ ಹಾಗೂ ನಟಿಯರು ರಂಗಭೂಮಿಯಲ್ಲಿ ಮತ್ತು ಕಿರುತೆರೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು ಇನ್ನೂ ಅಂತಹ ಸಾಕಷ್ಟು ಕಲಾವಿದರನ್ನು ಇಂದಿನ ಚಿತ್ರರಂಗದಲ್ಲಿ ಉದಾಹರಣೆಯಾಗಿ ನೀಡಬಹುದಾಗಿದೆ.

ಹೌದು ಅದರಂತೆಯೇ ಇದೀಗ ಕನ್ನಡ ಕಿರುತೆರೆಯ ಧಾರಾವಾಹಿ ಜೊತೆಜೊತೆಯಲಿ ಸಾಕಷ್ಟು ಪ್ರೇಕ್ಷಕರನ್ನು ರಂಜಿಸುತ್ತಾ ಮೆಚ್ಚುಗೆ ಪಡೆದುಕೊಂಡಿದ್ದು ಇನ್ನು ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಮೇಘ ಶೆಟ್ಟಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಚಂದನ್ ಶೆಟ್ಟಿ ಯವರ ಆಲ್ಬಮ್ ಸಾಂಗ್ಸ್ ಒಂದರಲ್ಲಿ ಹೆಜ್ಜೆ ಹಾಕಿದ್ದ ನಟಿ ಮೇಘ ಶೆಟ್ಟಿ ಅವರು ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ದಿಲ್ ಪಸಂದ್ ಎಂಬ ಸಿನಿಮಾದಲ್ಲಿ ಸಹ ಅಭಿನಯಿಸುತ್ತಿದ್ದಾರೆ. ಇನ್ನು ನಟಿ ಮೇಘ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇಯಾದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಸದ್ಯ ಇದೀಗ ಮೇಘ ಶೆಟ್ಟಿ ಯವರು ಕನ್ನಡ ಕಿರುತೆರೆಯ ಟಾಪ್ ನಟಿಯಾಗಿದ್ದು ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗಾಗಲೇ ಕನ್ನಡದ ಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಆಲ್ಬಮ್ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನು ಇದೀಗ ಆ ಸಿನಿಮಾದ ಚಿತ್ರೀಕರಣ ಇನ್ನೂ ಸಂಪೂರ್ಣವಾಗಿ ಮುಗಿದಿದ್ದು ತೆರೆಕಾಣಬೇಕಾಗಿದೆ ಅಷ್ಟೇ. ಹೌದು ಸಿನಿಮಾದೊಂದಿಗೆ ಅವರು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಕೂಡ ಅಭಿನಯಿಸುತ್ತಿದ್ದುಬಇದೀಗ ಅವರು ಬಣ್ಣದ ಲೋಕದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದು ತುಂಬಾ ಬ್ಯುಸಿ ಆಗಿದ್ದಾರೆ.

ಇದೀಗ ನಟಿ ಮೇಘ ಶೆಟ್ಟಿ ಅವರು ತ್ರಿಬಲ್ ರೈಡಿಂಗ್ ಸಿನಿಮಾದ ಬಳಿಕ ಇದೀಗ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಅವರು ನಾಯಕ ನಟ ಹಾಗೂ ನಟಿಯಾಗಿ ಅಭಿನಯಿಸುತ್ತಿರುವ ದಿಲ್ ಪಸಂದ್ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಹೀಗೆ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮೇಘ ಶೆಟ್ಟಿ ಅವರು ಇತ್ತೀಚಿಗಷ್ಟೇ ನಿರ್ಮಾಪಕಿಯಾಗಿದ್ದಾರೆ.

ಹೌದು ಕಲರ್ಸ್​ ಕನ್ನಡದಲ್ಲಿ ಕೆಂಡ ಸಂಪಿಗೆ ಹೆಸರಿನಲ್ಲಿ ಹೊಸ ಸೀರಿಯಲ್​ ಬರುತ್ತಿದ್ದು ಈ ಧಾರಾವಾಹಿಗೆ ಕಿರುತೆರೆ ಮೇಘಾ ಶೆಟ್ಟಿ ಹಣ ಹೂಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಇತ್ತೀಚಿಗಷ್ಟೇ ಮೇಘಾ ಶೆಟ್ಟಿ ಅವರು ಏಕಾಏಕಿ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳನ್ನು ಸ್ವತಃ ಮೇಘಾ ಶೆಟ್ಟಿ ಅವರು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಜೊತೆ ಜೊತೆಯಲಿ ಧಾರವಾಹಿಯಲ್ಲಿ ರಾಜನಂದಿನಿ ಫ್ಲ್ಯಾಶ್ ಬ್ಯಾಕ್ ಮುಗಿದ ಬಳಿಕ ಮೇಘಾ ಶೆಟ್ಟಿ ಅವರು ಮತ್ತೊಮ್ಮೆ ಕಿರುತೆರೆಯಲ್ಲಿ ಬಂದಿದ್ದು ಈಗ ಅನು ಸಿರಿಮನೆ ಪಾತ್ರ ಇನ್ನಷ್ಟು ಸ್ಟ್ರಾಂಗ್ ಆಗ ರಾಜನಂದಿನಿಯ ಅಂಶ ಸಹ ಸೇರಿಕೊಂಡಿದೆ. ಈ ಹೊಸ ರೂಪದಲ್ಲಿ ಬಂದಿರುವ ಅನು ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದು ರಾಜನಂದಿನಿ ಪಾತ್ರವನ್ನು ಸಹ ಮೇಘಾ ಶೆಟ್ಟಿ ಅವರು ಮಾಡುತ್ತಿರುವ ಕಾರಣ ಒಂದು ಎಪಿಸೋಡ್ ಗೆ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೀಗೆ ಇದೀಗ ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಮೇಘ ಶೆಟ್ಟಿ ಅವರು ಇದೀಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಕೆಲವು ಮೂಲಗಳಿಂದ ತಿಳಿದುಬಂದಿದೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field