Megha Shetty: ಧಾರಾವಾಹಿಗೆ ವಿದಾಯ ಹೇಳಿದ ನಟಿ ಮೇಘ ಶೆಟ್ಟಿ, ಮುಕ್ತಾಯವಾಗಲಿದೆ ಜೊತೆ ಜೊತೆಯಲಿ.

ನಟಿ ಮೇಘ ಶೆಟ್ಟಿ ಅವರು ಕಿರುತೆರೆಗೆ ವಿದಾಯವನ್ನ ಹೇಳಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Megha Shetty Left Jothe Jotheyali Serial: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಸಾಕಷ್ಟು ಪ್ರೇಕ್ಷಕರನ್ನು ಪಡೆದುಕೊಂಡಿತ್ತು. ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಅನು ಸಿರಿಮನೆಯ ಪಾತ್ರವನ್ನು ಖ್ಯಾತ ನಟಿ ಮೇಘಾ ಶೆಟ್ಟಿ (Megha Shetty) ಮಾಡುತ್ತಿದ್ದರು.

ನಟಿ ಮೇಘಾ ಶೆಟ್ಟಿ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಜನಪ್ರಿಯತೆ ಪಡೆದುಕೊಂಡರು. ನಂತರ ಸಿನಿಮಾದಲ್ಲಿ ಸಹ ಮುಖ್ಯ ಪಾತ್ರದಲ್ಲಿ ನಟಿಸಿದರು. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ನಟಿ ಮೇಘಾ ಶೆಟ್ಟಿ ಸಿನಿಮಾರಂಗಕ್ಕೆ ಕಾಲಿಟ್ಟರು.

Megha Shetty Left Jothe Jotheyali Serial
Image Credit: celebritybiobook

ಕಿರುತೆರೆಗೆ ವಿದಾಯ ಹೇಳುತ್ತಿರುವ ನಟಿ ಮೇಘಾ ಶೆಟ್ಟಿ
ಇದೀಗ ನಟಿ ಮೇಘಾ ಶೆಟ್ಟಿ ಕಿರುತೆರೆಗೆ ವಿದಾಯ ಹೇಳುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿರುವುದರಿಂದ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ. ಇದು ಎರಡನೇ ಕುಟುಂಬದಂತೆ ಇತ್ತು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ತಮ್ಮ ಕಿರುತೆರೆ ಪ್ರಯಾಣವು ನನಗೆ ಬಹಳಷ್ಟು ಕಲಿಸಿದೆ, ಇದರಿಂದ ನನಗೆ ಸಿನಿಮಾಗಳಲ್ಲಿ ಬ್ರೇಕ್ ಸಿಕ್ಕಿದೆ. ಈ ಪ್ರಯಾಣದಲ್ಲಿ ಅಪಾರ ಬೆಂಬಲ ನೀಡಿದ ತನ್ನ ಅಭಿಮಾನಿಗಳಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ. ಮೇಘಾ ಶೆಟ್ಟಿ ತಮ್ಮ ಸಿನಿಮಾ ವೃತ್ತಿಜೀವನದತ್ತ ಗಮನ ಹರಿಸಲು ಕಿರುತೆರೆಗೆ ವಿದಾಯ ಹೇಳುತ್ತಿದ್ದಾರೆ.

Actress Megha Shetty said goodbye to the serial, the serial will come to an end.
Image Credit: news18

ಮುಂದಿನ ಸಿನಿಮಾಗಳಲ್ಲಿ ಮಿಂಚಲು ರೆಡಿಯಾದ ಮೇಘಾ ಶೆಟ್ಟಿ
ನಟಿ ಮೇಘಾ ಶೆಟ್ಟಿ ಅವರಿಗೆ ಸಿನಿಮಾಗಳಿಂದ ಸಾಕಷ್ಟು ಆಫರ್ ಗಳು ಬರುತ್ತಿವೆ ಅಂತ ಹೇಳಿದ್ದಾರೆ. ಅಲ್ಲದೆ ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿರುವುದರಿಂದ ಮುಂದೆ ಸಿನಿಮಾಗಳತ್ತ ಮಾತ್ರ ಗಮನಹರಿಸುತ್ತೇನೆ ಎಂದಿದ್ದಾರೆ.

Join Nadunudi News WhatsApp Group

ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘಾ ಶೆಟ್ಟಿ ನಂತರ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಈಗ, ಅವರು ಜಯತೀರ್ಥ ನಿರ್ದೇಶನದ ಧನ್ವೀರರ ಕೈವಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

Join Nadunudi News WhatsApp Group